ಮುಲ್ಕಿ ನಗರ ಪಂಚಾಯತ್ – ಕೌಶಲ್ಯಾಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ

ಮುಲ್ಕಿ : ಮುಲ್ಕಿ ನಗರ ಪ್ರದೇಶದಲ್ಲಿರುವ 18ರಿಂದ 35ವರ್ಷ ವಯೋಮಿತಿಯ ಬಡತನ ರೇಖೆಗಿಂತ ಕೆಳಗಿರುವ ಅಭ್ಯರ್ಥಿಗಳಿಗೆ 2012-13ನೇ ಸಾಲಿನಲ್ಲಿ ಸ್ವರ್ಣ ಜಯಂತಿ ಶಹರಿ ರೋಜ್‌ಗಾರ್ ಯೋಜನೆಯಡಿಯಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಉಚಿತವಾಗಿ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತ ಬಿಪಿಎಲ್ ಅಭ್ಯರ್ಥಿಗಳು ನಿಗದಿತ ಅರ್ಜಿಯಲ್ಲಿ ಈ ಕೆಳ ಕಾಣಿಸಿದ ದಾಖಲೆಗಳೊಂದಿಗೆ ಜುಲಾಯಿ 30 ರೊಳಗಾಗಿ ಈ ಸಂಸ್ಥೆಗಳ ಕಚೇರಿಗೆ ಖುದ್ದಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಯನ್ನು ಕಚೇರಿ ವೇಳೆಯಲ್ಲಿ ಪಡೆಯಬಹುದಾಗಿದೆ. ಅರ್ಜಿಯೊಂದಿಗೆ ಈ ಕೆಳಕಂಡ ದೃಢೀಕರಿಸಿದ ದಾಖಲಾತಿಗಳ ಪ್ರತಿಯನ್ನು ಲಗತ್ತಿಸಬೇಕು. ವಿದ್ಯಾರ್ಹತೆಯ ಪ್ರಮಾಣ ಪತ್ರ, ರೇಶನ್ ಕಾರ್ಡ್ ಪ್ರತಿ, ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ವಾಸ ಸ್ಥಳ ದೃಢೀಕರಣ ಪತ್ರ, ೨೦೧೨-೧೩ನೇ ಸಾಲಿನ ಆಸ್ತಿ ತೆರಿಗೆ ಪಾವತಿ ರಶೀದಿ.

ತರಬೇತಿಯ ವಿವರ :   

Auto cad, Computer Fundamentals, MS Office & Internet,  DTP,  Soft Skills,  Spoken English & Communication skills, Accounting  & Tally.

ಹೆಚ್ಚಿನ ಮಾಹಿತಿಗಾಗಿ ಮೂಲ್ಕಿ ನಗರ ಪಂಚಾಯತ್‌ನ ಮುಖ್ಯಾಧಿಕಾರಿ/ಸಮುದಾಯ ಸಂಘಟನಾಧಿಕಾರಿ/ಸಮುದಾಯ ಸಂಘಟಕರನ್ನು ದೂರವಾಣಿ ಸಂಖ್ಯೆ 0824-2290561 ಸಂಪರ್ಕಿಸಬಹುದು.

Comments

comments

Leave a Reply

Read previous post:
ಮುಲ್ಕಿಗೆ ಆಗಮಿಸಿದ ರಾಜ್ಯ ಮುಜರಾಯಿ ಸಚಿವರು ಕೋಟ ಶ್ರೀನಿವಾಸ ಪೂಜಾರಿ

Photo by Bhagyavan Sanil ಮುಲ್ಕಿ : ರಾಜ್ಯ ಮುಜರಾಯಿ ಸಚಿವರು ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಮಂಗಳವಾರ ಮುಲ್ಕಿಗೆ ಆಗಮಿಸಿದ ಸಂದರ್ಭ...

Close