ಏಳಿಂಜೆ ಲಿಟ್ಲ್ ಫ್ಲವರ್ ಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ

ಕಿನ್ನಿಗೋಳಿ : ವಿದ್ಯಾರ್ಥಿಗಳನ್ನು ದುಶ್ಚಟಗಳಿಂದ ದೂರವಿರಿಸಲು ನಡೆಸುವ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವು ಅದ್ಭುತ ಕಲ್ಪನೆಯಾಗಿದೆ ಎಂದು ಕಿನ್ನಿಗೋಳಿ ಯುಗಪುರುಷದ ಸಂಪಾದಕರಾದ ಭುವನಾಭಿರಾಮ ಉಡುಪ ಹೇಳಿದರು. ಅವರು ಸೋಮವಾರ ಏಳಿಂಜೆ ಲಿಟ್ಲ್ ಫ್ಲವರ್ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಸಹಕಾರದೊಂದಿಗೆ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದುಶ್ಚಟಗಳ ಪ್ರಭಾವದಿಂದ ಕೌಟುಂಬಿಕ ಕಲಹಗಳು ಆರ್ಥಿಕ ಅವನತಿಯ ಜೊತೆಗೆ ವಿದ್ಯಾಬ್ಯಾಸ ಮತ್ತು ಆರೋಗ್ಯದಲ್ಲಿ ಉಂಟಾಗುವ ತೊಂದರೆಗಳ ಬಗ್ಗೆ ವಿದ್ಯಾರ್ಥಿಗಳು ಎಳವೆಯಲ್ಲಿ ತಿಳಿದುಕೊಂಡಲ್ಲಿ ಮುಂದೆ ಸದೃಡ ಸಮಾಜದ ಉದಯ ಸಾಧ್ಯವಾಗಲಿದೆ ಎಂದರು. ಹಿರಿಯ ಶಿಕ್ಷಕ ಎಕ್ಕಾರು ಉಮೇಶ್ ರಾವ್ ರವರು ಸಂಪನ್ಮೂಲ ವ್ಯಕ್ತಿಯಾಗಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐಕಳ ಗ್ರಾಮ ಪಂ.ಅಧ್ಯಕ್ಷರಾದ ಯೋಗೀಶ್ ಕೋಟ್ಯಾನ್ ವಹಿಸಿದ್ದರು. ಮಾಜಿ.ತಾ.ಪಂ.ಸದಸ್ಯ ಏಳಿಂಜೆ ಕೃಷ್ಣ ಸಾಲಿಯಾನ್, ಒಕ್ಕೂಟದ ಪದಾಧಿಕಾರಿ ಕರುಣಾಕರ ಶೆಟ್ಟಿ, ಸುರೇಶ್ ಸಂಕಲಕರಿಯ, ಕಿನ್ನಿಗೋಳಿ ವಲಯ ಮೇಲ್ವಿಚಾರಕಿ ಲತಾ ಅಮೀನ್, ಕಿನ್ನಿಗೋಳಿ ವಲಯ ಜನಜಾಗೃತ ಸಮಿತಿ ಅಧ್ಯಕ್ಷ ಯೋಗೀಶ್ ರಾವ್ ಮತ್ತಿತರರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಮುಲ್ಕಿ; ಹೆದ್ದಾರಿ ಪೈಪ್ ಕಳ್ಳರ ಬಂಧನ

  ಮುಲ್ಕಿ; ರಾಷ್ಟ್ರೀಯ ಹೆದ್ದಾರಿ ಪಡು ಪಣಂಬೂರುನಲ್ಲಿ ಕಳೆದ ಕೆಲವು ದಿನಗಳ ಹಿಂದೆ ಬೃಹತ್ ಪೈಪುಗಳನ್ನು ಕಳವು ಮಾಡಲು ಪ್ರಯತ್ನಿಸಿದ ಕಳ್ಳರನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಜೋಕಟ್ಟೆಯ...

Close