ಮುಲ್ಕಿ; ಹೆದ್ದಾರಿ ಪೈಪ್ ಕಳ್ಳರ ಬಂಧನ

 

ಮುಲ್ಕಿ; ರಾಷ್ಟ್ರೀಯ ಹೆದ್ದಾರಿ ಪಡು ಪಣಂಬೂರುನಲ್ಲಿ ಕಳೆದ ಕೆಲವು ದಿನಗಳ ಹಿಂದೆ ಬೃಹತ್ ಪೈಪುಗಳನ್ನು ಕಳವು ಮಾಡಲು ಪ್ರಯತ್ನಿಸಿದ ಕಳ್ಳರನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಜೋಕಟ್ಟೆಯ ಮಹಮ್ಮದ್ ಆರಿಫ್, ಕುದ್ರೋಳಿಯ ಮಹಮ್ಮದ್ ಸಮೀದ್, ಕೃಷ್ಣಾಪುರದ ಅಬ್ದುಲ್ ಖಾದರ್ ಎಂದು ಗುರುತಿಸಲಾಗಿದೆ. ಪಡುಪಣಂಬೂರು ಬಳಿ ಇರುವ ಹೆದ್ದಾರಿಯಲ್ಲಿ ಚತುಷ್ಪಥ ಕಾಮಗಾರಿಗಾಗಿ ಮಂಗಳೂರಿನಿಂದ ಮೂಲ್ಕಿಗೆ ನೀರು ಸರಭರಾಜು ಆಗುತ್ತಿದ್ದ ಬೃಹತ್ ಕೊಳವೆ ಪೈಪುಗಳನ್ನು ಶೇಖರಿಸಿ ಇಡಲಾಗಿದ್ದು ಅದನ್ನು ರಾತ್ರಿ ಸಮಯದಲ್ಲಿ ಗ್ಯಾಸ್ ಕಟ್ಟಿಂಗ್ ಮಾಡುವ ಮೂಲಕ ವಾಹನ ಒಂದರಲ್ಲಿ ಸಾಗಿಸಲು ವಿಫಲ ಯತ್ನ ನಡೆಸಿದ್ದರು.
ಮುಲ್ಕಿ ಠಾಣೆಯ ಪೊಲೀಸರೊಬ್ಬರು ಗಸ್ತು ತಿರುಗುತ್ತಿದ್ದಾಗ ಈ ಪ್ರಕರಣ ಬೆಳಕಿಗೆ ಬಂದು ಮೂವರು ಅಲ್ಲಿಂದ ಪರಾರಿಯಾಗಿದ್ದರು. ಕೃತ್ಯಕ್ಕೆ ಬಳಸಿದ್ದ ವಾಹನ ಮತ್ತು ಗ್ಯಾಸ್ ಸಿಲಿಂಡರ್‌ನ್ನು ವಶಪಡಿಸಿಕೊಂಡಿದ್ದರು. ಮುಲ್ಕಿ ಠಾಣೆಯಲ್ಲಿ ಕೇಸು ದಾಖಲಾಗಿದ್ದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ೧೫ ದಿನಗಳ ನ್ಯಾಯಾಂಗ ಬಂಧನವನ್ನು ನೀಡಿದ್ದಾರೆ.

Comments

comments

Leave a Reply

Read previous post:
ಕಿನ್ನಿಗೋಳಿಯಲ್ಲಿ ಬ್ಯಾಂಕ್ ಆಫ್ ಬರೋಡಾದ ಪ್ರಥಮ ವಾರ್ಷಿಕೋತ್ಸವ, ಸನ್ಮಾನ.

ಕಿನ್ನಿಗೋಳಿ ; ಬ್ಯಾಂಕ್ ಆಫ್ ಬರೋಡಾದ ಕಿನ್ನಿಗೋಳಿ ಶಾಖೆಯ ಪ್ರಥಮ ವಾರ್ಷಿಕೋತ್ಸವ ಶನಿವಾರ ಬ್ಯಾಂಕ್ ನಲ್ಲಿ ನಡೆಯಿತು. ಇದೇ ಸಂದರ್ಭ ಹಿರಿಯ ಗ್ರಾಹಕ ಸುರೇಂದ್ರ ,ವಿ ಶೆಣೈ...

Close