ಮುಲ್ಕಿ ಯುವವಾಹಿನಿ “ಆಟಿಡೊಂಜಿ ದಿನ” ಪತ್ರಿಕಾ ಗೋಷ್ಠಿ

ಮುಲ್ಕಿ: ದಶಮಾನೋತ್ಸವದ ಹೊಸ್ತಿಲಲ್ಲಿರುವ ಮುಲ್ಕಿಯ ಪ್ರತಿಷ್ಠಿತ ಯುವವಾಹಿನಿ ಮುಲ್ಕಿ ಘಟಕವು ಸಮಾಜದಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕ್ರತಿಕವಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದಲ್ಲಿ ತನ್ನದೇ ಸ್ಥಾನಮಾನವನ್ನು ಹೊಂದಿದೆ. ಇಂತಹ ಅತ್ಯುನ್ನತ ಸಂಸ್ಥೆಯು ಕಳೆದ ಹತ್ತು ವರ್ಷಗಳಿಂದ ಕರಾವಳಿ ಜಿಲ್ಲೆಯಲ್ಲಿಯೇ ವಿಶೇಷವಾಗಿ ತುಳುನಾಡ ಜಾನಪದ ಸೊಗಡನ್ನು ಉಳಿಸಿ, ಬೆಳಿಸಿ, ಪ್ರೋತ್ಸಾಹ ನೀಡುತ್ತಿರುವುದು ಪಾರಂಪರಿಕ ಕಾರ್ಯಕ್ರಮಗಳೇ ಸಾಕ್ಷಿಯಾಗಿದ್ದು ಉದಾಹರಣೇಗೆ ಆಟಿಡೊಂಜಿ ದಿನ, ತುಡರ ಪರ್ಬ, ಬಿರ್ವೆರೆ ಬಿರ್ದ್ ಹಾಗೂ ಶತಮಾನೋತ್ಸವ ಸಂಭ್ರಮ ಕಂಡಿರುವ ಜನಮೆಚ್ಚುಗೆಯ ತುಳುನಾಡ ವೈಭವ ಸಾಂಸ್ಕ್ರತಿಕ ಕಾರ್ಯಕ್ರಮ ಪ್ರಮುಖವಾಗಿದೆ.
ವರ್ಷಕ್ಕೊಮ್ಮೆ ಬರುವ ಆಟಿ (ಆಷಾಡ ಮಾಸ) ತಿಂಗಳಲ್ಲಿ ಕೃಷಿ ಕಾಯಕದ ನಡುವೆ ಕರಾವಳಿಯ ಜಾನಪದ ಸಂಸ್ಕ್ರತಿಯನ್ನು ಪ್ರತಿಬಿಂಬಿಸುವ “ಆಟಿಡೊಂಜಿ ದಿನ” ಎನ್ನುವ ಕಾರ್ಯಕ್ರಮ ವೈವಿಧ್ಯವನ್ನು ಈ ಬಾರಿ ದಶಮಾನೋತ್ಸವದ ಆಟಿಡೊಂಜಿ ದಿನ 2012 ನ್ನು ಜುಲೈ 22ರಂದು ಭಾನುವಾರ ಬೆಳಿಗ್ಗೆ 9.30 ಕ್ಕೆ ಸಂಭ್ರಮ ಸಡಗರದಲ್ಲಿ ಆಚರಿಸಲಿದ್ದಾರೆ.
ಈ ಸಮಾರಂಭದ ಉದ್ಘಾಟನೆಯನ್ನು ವರ್ಷಂಪ್ರತಿ ವಿಭಿನ್ನ ರೀತಿಯಲ್ಲಿ ನಡೆಸುತ್ತಿದ್ದು ಈ ಬಾರಿ ರಾಜ್ಯ ತುಳು ಸಾಹಿತ್ಯ ಅಕಾಡೆಮಿಯ ಕುಡ್ಲದ ಅಧ್ಯಕ್ಷ ಉಮಾನಾಥ ಕೋಟ್ಯಾನ್ ರವರು ಉದ್ಘಾಟಿಸಲಿದ್ದಾರೆ. ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಕಿಶೋರ್ ಕೆ. ಬಿಜೈಯವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಆಟಿದ ವಿಶೇಷ ಉಪನ್ಯಾಸ (ಮದಿಪು)ವನ್ನು ಜೇಸಿ ರಾಷ್ಟ್ರೀಯ ತಬೇತುದಾರರಾದ ಹಾಗೂ ಶಿಕ್ಷಕರಾದ ರಾಜೇಂದ್ರ ಭಟ್ ರವರು ನೀಡಲಿದ್ದಾರೆ.
ಪ್ರತೀ ವರ್ಷ ನೀಡಲ್ಪಡುವ ಆಟಿದ ತಮ್ಮನ(ಪುರಸ್ಕಾರ)ವನ್ನು ಈ ಬಾರಿ ಸುರತ್ಕಲ್ ನಿನಾದ ಟ್ರಸ್ಟ್ ನ ಅಧ್ಯಕ್ಷ ಹಾಗೂ ಸಮಾಜದ ಹಿರಿಯ ಧುರೀಣ ಕಡಂಬೋಡಿ ಮಹಾಬಲ ಪೂಜಾರಿಯವರಿಗೆ ದಶಮಾನೋತ್ಸವದ ಗೌರವವನ್ನು ನೀಡಲಾಗುವುದು.
ದೂರದರ್ಶನ ಚಂದನ ವಾಹಿನಿಯಲ್ಲಿ ಭಾನುವಾರ ಬೆಳಿಗ್ಗೆ 9 ಗಂಟೆಗೆ ಪ್ರಸಾರವಾಗುತ್ತಿರುವ ಶ್ರೀ ನಾರಾಯಣ ಗುರು ವಿಜಯದರ್ಶನ ಧಾರವಾಹಿಯ ನಿರ್ಮಾಪಕಹಾಗೂ ನಿರ್ದೇಶಕ ಮಡಿಕೇರಿಯ ಹರೀಶ್ ಜೆ. ಆಚಾರ್ಯರನ್ನು ಅವರ ಪ್ರತಿಭಾ ಸಾಧನೆಯನ್ನು ಗುರುತಿಸಿ ವಿಶೇಷ ಪುರಸ್ಕಾರವನ್ನು ನೀಡಲಾಗುವುದು.
ಮುಖ್ಯ ಅತಿಥಿಯಾಗಿ ಪ್ರಜಾವಾಣಿ ದಿನಪತ್ರಿಕೆಯ ಮಂಗಳೂರಿನ ಚೀಫ್ ಬ್ಯೂರೋ ಬಾಲಕೃಷ್ಣ ಪುತ್ತಿಗೆ ಹಾಗೂ ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಕೆ. ರಾಘು ಸುವರ್ಣರವರು ಉಪಸ್ಥಿತರಿರುವರು.
ಆಟಿಡೊಮ್ಜಿ ದಿನದ ಕಾರ್ಯಕ್ರಮ ವಿಭಿನ್ನತೆಯಿಂದ ಕೂಡಿದ್ದು ಸಾಂಸ್ಕ್ರತಿಕ ವೈವಿಧ್ಯಮಯದಲ್ಲಿ ಶ್ರೀ ಕ್ಷೇತ್ರ ಬಪ್ಪನಾಡುವಿನ ಚಿಕ್ಕಮೇಳ ಹಾಗೂ ಯುವವಾಹಿನಿಯ ಕಲಾವಿದರಿಂದ ಕಿರು ಯಕ್ಷಗಾನ ಪ್ರಸಂಗಗಳ ಪ್ರದರ್ಶನವಿದ್ದು, ನೃತ್ಯ, ಹಾಡುಗಾರಿಕೆಯು ಸಹ ಸಂಮಾರಂಭದಲ್ಲಿ ನಡೆಯಲಿದೆ
ದಶಮಾನೋತ್ಸವ ವರ್ಷದ ವಿಶಿಷ್ಟ ಕಾರ್ಯಕ್ರಮದಲ್ಲಿ ಮುಲ್ಕಿ ಪರಿಸರದ ಹತ್ತು ಅವಳಿ ಜವಳಿ ಮಕ್ಕಳು ಆಕರ್ಷಣೆಯಾಗಲಿದ್ದಾರೆ. ಊಟೋಪಚಾರದಲ್ಲಿ ೨೦ ಬಗೆಯ ಹಳೇ ಸಂಪ್ರದಾಯದ ಖಾದ್ಯಗಳ ಅತಿಥ್ಯವಿದೆ.
ಆಟಿಡೊಂಜಿ ದಿನ ಕಾರ್ಯಕ್ರಮದ ಪರಿಕಲ್ಪನೆಯನ್ನು ಪ್ರಪ್ರಥಮವಾಗಿ ಮುಲ್ಕಿ ಯುವವಾಹಿನಿಯು ಮಾಡಿ ೨೦೦೩ ರಲ್ಲಿ ಪ್ರಾರಂಭಿಸಿ ಈ ಕಾರ್ಯಕ್ರಮವನ್ನು ಇಂದು ಅನೇಕ ಸಂಘ್ ಸಂಸ್ಥೆಗಳು, ಸ್ವ ಸಹಾಯ ಗುಂಪುಗಳು, ಅಲ್ಲದೆ ರಾಜ್ಯ ಅಕಾಡೆಮಿಯ ಸಂಯೋಜನೆಯಲ್ಲಿ ನಡೆಯುತ್ತಿದ್ದು. ಮುಲ್ಕಿ ಯುವವಾಹಿನಿಯ ಕಾರ್ಯಕ್ರಮವೇ ಪ್ರೇರಣೆಯಾಗಿದೆ ಎಂದು ಮುಲ್ಕಿ ಯುವವಾಹಿನಿ ಘಟಕದ ಸಂಘಟಕರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಸಂಸ್ಠೆಯ ಪುನಶ್ಚೇತಕರಾದ ಮುಲ್ಕಿ ಚಂದ್ರಶೇಖರ ಸುವರ್ಣ, ಅಧ್ಯಕ್ಷ ರಾಮಚಂದ್ರ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಕುಶಲಾ ಎಸ್. ಕೋಟ್ಯಾನ್ , ಕೋಶಾಧಿಕಾರಿ ಬಾಸ್ಕರ ಕೋಟ್ಯಾನ್ ಚಿತ್ರಾಪು, ವಿಜಯಕುಮಾರ್ ಕುಬೆವೂರು, ರಾಜೇಶ್ವರಿ ನಿತ್ಯಾನಂದ, ಮಧುಕರ ಸುವರ್ಣ, ಯೋಗೀಶ್ ಕೋಟ್ಯಾನ್, ಹರೀಂದ್ರ ಸುವರ್ಣ, ಉದಯ ಅಮೀನ್, ಜಯಕುಮಾರ್ ಕುಬೆವೂರು, ಜಯ ಸಿ.ಪೂಜಾರಿ ಹಾಗೂ ರಮೇಶ ಬಂಗೇರ ಉಪಸ್ಥಿತರಿದ್ದರು

Comments

comments

Leave a Reply

Read previous post:
Happy 25th Wedding Anniversary

25th Wedding Anniversary Mr.Vincent Saldanha  &  Mrs.Emma Saldanha

Close