ರೋಟರಿ ಶಾಲಾ ಶಿಕ್ಷಕ -ರಕ್ಷಕ ಸಂಘದ ಮಹಾಸಭೆ

ಕಿನ್ನಿಗೋಳಿ; ಕಿನ್ನಿಗೋಳಿ ರೋಟರಿ ಶಾಲಾ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆ ಶನಿವಾರ ಶಾಲೆಯಲ್ಲಿ ನಡೆಯಿತು.ರೋಟರಿ ಅಧ್ಯಕ್ಷ ಬಾಲಕ್ರಷ್ಣ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಕುಂದಾಪುರ ಭಂಢಾರ್ಕರ್ಸ ಕಾಲೇಜಿನ ನಿವ್ರತ್ತ ಪ್ರಾಚಾರ್ಯ ಎ. ಸಿ ತುಂಗಾ ರಕ್ಷಕರಿಗೆ ಮಾಹಿತಿ ನೀಡಿದರು. ಶಾಲಾ ಕಾರ್ಯದರ್ಶಿ ಪಿ. ಸತೀಶ್ ರಾವ್,ಸಮಿತಿ ಸದಸ್ಯರಾದ ಜೆರೊಮ್ ಮೊರಸ್,ಶೇಷರಾಮ ಶೆಟ್ಟಿ,ರೋಟರಿ ಕಾರ್ಯದರ್ಶಿ ಯಶವಂತ ಐಕಳ ಮುಖ್ಯೋಪಾದ್ಯಾಯ ಗಿಲ್ಬರ್ಟ್ ಡಿ’ಸೋಜಾ ಮತ್ತಿತರರಿದ್ದರು. ಕಳೆದ ವರ್ಷ ಎಸ್.ಎಸ್. ಎಲ್.ಸಿ ಯಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದವರನ್ನು ಗೌರವಿಸಲಾಯಿತು. ಸಹ ಮುಖ್ಯ ಶಿಕ್ಷಕ ಎಲ್.ಎನ್ ಭಟ್ ಸ್ವಾಗತಿಸಿ, ಶಿಕ್ಷಕಿಯರಾದ ನಿರ್ಮಲಾ ಕ್ವಾಡ್ರಸ್, ಪರಿಚಯ ನೀಡಿ ಜೆಸಿಂತ ಕಾರ್ಡೋಜಾ ವಂದಿಸಿದರು.ಗಂಗಾ ದೇವಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ -ರಕ್ಷಕ ಸಂಘದ ನೂತನ ಪ್ರತಿನಿಧಿಗಳ ಆಯ್ಕೆ ನಡೆಯಿತು.

Comments

comments

Leave a Reply

Read previous post:
ಮುಂಡ್ಕೂರು ಕಡಂದಲೆ ಲಯನ್ಸ್ ಕ್ಲಬ್ ಪದಗ್ರಹಣ

ಮುಂಡ್ಕೂರು: ಕಡಂದಲೆ ಲಯನ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮಂಗಳವಾರ ಸಚ್ಚೇರಿಪೇಟೆ ಲಯನ್ಸ್ ಶಾಲೆಯಲ್ಲಿ ನಡೆಯಿತು. ಲಯನ್ಸ್ ಜಿಲ್ಲೆಯ ಎಲ್.ಸಿ.ಐ.ಎಫ್ ಸಮನ್ವಯಾಧಿಕರಿ ರಂಜನ್ ಕಲ್ಕೂರಾ...

Close