ಕೆಂಚನಕೆರೆ ಸರ್ಕಾರಿ ಶಾಲೆಗೆ ಇಂಟರಾಕ್ಟ್ ನಿಂದ ನೆರವು

Photo by Narendra Kerekadu
ಕಿನ್ನಿಗೋಳಿ: ಸರ್ಕಾರಿ ಶಾಲೆಗೆ ವಿದ್ಯಾರ್ಥಿಗಳ ಕೊರತೆಯನ್ನು ಎದುರಿಸಲು ಪರೋಕ್ಷವಾಗಿ ಖಾಸಗಿ ಶಾಲೆಗಳು ಕಾರಣವಾಗುತ್ತಿವೆ. ಮೂಲ್ಕಿ ಬಳಿಯ ಕೆಂಚನಕೆರೆಯ ಸರ್ಕಾರಿ ಶಾಲೆಗೆ ಗುರುವಾರ ಮೂಲ್ಕಿ ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ತಂಡವೊಂದು ಭೇಟಿ ನೀಡಿ ಸಂಭ್ರಮ ಹಂಚಿಕೊಂಡು ಕೊಡುಗೆಗಳನ್ನು ನೀಡಿದೆ.

ಮೂಲ್ಕಿ ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯ ಇಂಟರಾಕ್ಟ್ ಕ್ಲಬ್ ನ ಸದಸ್ಯರೂ ಆಗಿರುವ ವಿದ್ಯಾರ್ಥಿಗಳು ಕ್ಲಬ್ ನ ಉಪಾಧ್ಯಕ್ಷ ಸ್ವಸ್ತಿಕ್ ಸ್ವರಾಜ್ ಶೆಟ್ಟಿಯ ನೇತೃತ್ವದಲ್ಲಿ ಕೆಂಚನಕೆರೆ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅಲ್ಲಿನ ಎಲ್ಲಾ ಮಕ್ಕಳಿಗೆ ಡ್ರಾಯಿಂಗ್ ಪುಸ್ತಕ, ಕಲರ್ ಪೆನ್ಸಿಲ್ ಗಳನ್ನು ಹಂಚಿತಲ್ಲದೇ ಮಕ್ಕಳಿಗೆ ಸಿಹಿ ತಿಂಡಿಗಳನ್ನು ನೀಡಿ ಸರ್ಕಾರಿ ಮತ್ತು ಖಾಸಗಿ ಎಂಬ ಭೇದಬಾವವನ್ನು ದೂರ ಮಾಡಿಕೊಳ್ಳೊಣ ಮುಂದಿನ ದಿನದಲ್ಲೂ ನಿಮಗೆ ಸಹಕಾರ ಸಹಯೋಗವನ್ನು ನಾವು ನೀಡುತ್ತೇವೆ ಎಂದು ಹೇಳಿದರು.
ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಲತಾ ರಾವ್‌ರವರ ಪರಿಕಲ್ಪನೆಯನ್ನು ಮೆಚ್ಚುಗೆ ವ್ಯಕ್ತಪಡಿಸಿದ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪದ್ಮಾವತಿ ಮಾತನಾಡಿ. ಇಂತಹ ಕಾರ್ಯಕ್ರಮ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ನಡೆಸಿದಲ್ಲಿ ವಿದ್ಯಾರ್ಥಿಗಳೂ ಸಹ ತಮ್ಮ ಶೈಕ್ಷಣಿಕ ಜೀವನದಲ್ಲಿ ಮಹತ್ತರವಾದ ಬದಲಾವಣೆ ತರಲು ಸಾಧ್ಯ ಹಾಗೂ ಸರ್ಕಾರಿ ಶಾಲೆಯ ಒಡನಾಟ ಖಾಸಗಿ ಶಾಲಾ ಸಂಸ್ಥೆಗಳ ನಡುವೆ ಉತ್ತಮ ಬಾಂಧವ್ಯ ನಿರ್ಮಾಣ ಆಗುತ್ತದೆ ಎಂದು ಹೇಳಿದರು.
ಇಂಟರಾಕ್ಟ್ ಕ್ಲಬ್ ನ ಶಿಕ್ಷಕ ಸಂಯೋಜಕಿ ಉಷಾ ಕೆರೆಕಾಡು, ಕೆಂಚನಕೆರೆ ಶಾಲೆಯ ಶಿಕ್ಷಕಿಯಾರಾದ ಅನಿತಾ ಪಿಂಟೋ, ಸುನಿತಾ ಶ್ಯಾಲೆಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Comments

comments

Leave a Reply

Read previous post:
ರೋಟರಿ ಶಾಲಾ ಶಿಕ್ಷಕ -ರಕ್ಷಕ ಸಂಘದ ಮಹಾಸಭೆ

ಕಿನ್ನಿಗೋಳಿ; ಕಿನ್ನಿಗೋಳಿ ರೋಟರಿ ಶಾಲಾ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆ ಶನಿವಾರ ಶಾಲೆಯಲ್ಲಿ ನಡೆಯಿತು.ರೋಟರಿ ಅಧ್ಯಕ್ಷ ಬಾಲಕ್ರಷ್ಣ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಕುಂದಾಪುರ ಭಂಢಾರ್ಕರ್ಸ ಕಾಲೇಜಿನ ನಿವ್ರತ್ತ ಪ್ರಾಚಾರ್ಯ ಎ....

Close