ಸಂಪಿಗೆಯಲ್ಲಿ ಮಹಿಳಾ ಆರೋಗ್ಯ ಶಿಬಿರ

ಕಿನ್ನಿಗೋಳಿ : ಜೆ.ಸಿ.ಐ ಮುಂಡ್ಕೂರು ಭಾರ್ಗವ ಮತ್ತು ಶ್ರೀ ಧರ್ಮಸ್ಥಳ ಗ್ರಾಮಾಭಿವೇದ್ಧಿ ಯೋಜನೆ(ರಿ) ಜ್ಞಾನ ವಿಕಾಸ ಕೇಂದ್ರ ಪುತ್ತಿಗೆ ವಲಯದ ಸಂಯುಕ್ತ ಆಶ್ರಯದಲ್ಲಿ ಭಾರ್ಗವ ಜೆ.ಸಿ.ಸ್ ಅಧ್ಯಕ್ಷರಾದ ಸುರೇಂದ್ರ ಭಟ್ ಅವರ ಅಧ್ಯಕ್ಷತೆಯಲ್ಲಿ ಮಹಿಳಾ ಆರೋಗ್ಯ ತರಬೇತಿ ಶಿಬಿರ ಸಂಪಿಗೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು, ಶ್ರೀ ಸತ್ಯ ನಾರಾಯಣ ಹಿರಿಯ ಪ್ರಾಥಮಿಕ ಶಾಲೆ ನಿಡ್ಡೋಡಿ ಇಲ್ಲಿನ ಮುಖ್ಯ ಶಿಕ್ಷಕರಾದ ಶಾಮ ಸುಂದರ್ ರಾವ್ ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಉದ್ಯಮಿ ದಿನೇಶ್ ಭಟ್ ಅಶ್ವಥಪುರ ಹಾಗೂ ಅಶ್ವನ್ ಕುಮಾರ್ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಸ್ತ್ರೀರೋಗ ಹಾಗೂ ಪ್ರಸುತಿ ತಜ್ಞರಾದ ಡಾ|ಆಕ್ಷತಾ ಶೆಣೈ ತರಬೇತಿ ಕಾರ್ಯಕ್ರಮ ಹಾಗೂ ಮಹಿಳೆಯರೊಂದಿಗೆ ನೇರ ಸಂವಾದ ನಡೆಸಿಕೊಟ್ಟರು. ಜ್ಞಾನ ವಿಕಾಸ ಕೇಂದ್ರದ ಸಮನ್ವಯ ಅಧಿಕಾರಿ ಸುಶೀಲ ಹಾಗೂ ಸೇವಾನಿರತೆ ಪಾವನಾ ಉಪಸ್ಥಿತರಿದ್ದರು. ಸುಧಾಕರ ಪೊಸ್ರಾಲ್ ಕಾರ್ಯಕ್ರಮ ನಿರೂಪಿಸಿ, ಕಿರಣ್ ಕುಮಾರ್ ವಂದಿಸಿದರು.

Comments

comments

Leave a Reply

Read previous post:
ಕಡಂದಲೆ ಪ್ರೌಢಶಾಲೆಯಲ್ಲಿ ಪರಿಸರ ಜಾಗೃತಿ ಪ್ರತಿಭಾ ಸ್ಪರ್ಧೆ

ಕಡಂದಲೆ:ಉತ್ತಮ ಸಮಾಜ ನಿರ್ಮಾಣಕ್ಕಾಗಿ ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯವೆಂದು ನಿವೃತ್ತ ಶಿಕ್ಷಕ ವಾದಿರಾಜ ಮಡ್ಮಣ್ಣಾಯ ಹೇಳಿದರು. ಅವರು ಶನಿವಾರ ಕಡಂದಲೆ ಶ್ರೀ ಸುಬ್ರಹ್ಮಣ್ಯ...

Close