ಕಡಂದಲೆ ಪ್ರೌಢಶಾಲೆಯಲ್ಲಿ ಪರಿಸರ ಜಾಗೃತಿ ಪ್ರತಿಭಾ ಸ್ಪರ್ಧೆ

ಕಡಂದಲೆ:ಉತ್ತಮ ಸಮಾಜ ನಿರ್ಮಾಣಕ್ಕಾಗಿ ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯವೆಂದು ನಿವೃತ್ತ ಶಿಕ್ಷಕ ವಾದಿರಾಜ ಮಡ್ಮಣ್ಣಾಯ ಹೇಳಿದರು. ಅವರು ಶನಿವಾರ ಕಡಂದಲೆ ಶ್ರೀ ಸುಬ್ರಹ್ಮಣ್ಯ ಪ್ರೌಢ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮುಂಡ್ಕೂರು ಭಾರ್ಗವ ಜೆ.ಸಿ.ಐ, ಹಾಗೂ ಶಾಲೆಯ ಆತಿಥ್ಯದಲ್ಲಿ ನಡೆದ ವಲಯ ಮಟ್ಟದ ಪ್ರೌಢ ಶಾಲಾ ವಿದ್ಯಾರ್ಥಿಗಳ ಪರಿಸರ ಜಾಗೃತಿ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಜೆ.ಸಿ.ಐ ಅಧ್ಯಕ್ಷ ಸುರೇಂದ್ರ ಭಟ್ ಅಧ್ಯಕ್ಷತೆ ವಹಿಸಿದ್ದು, ಮೂಡುಬಿದ್ರೆ ಪ್ರಗತಿ ಸಂಸ್ಥೆಯ ಸುಜಾತ ಮುದ್ರಾಡಿ, ಶಾಲಾ ಮುಖ್ಯ ಶಿಕ್ಷಕ ಶಂಕರ ನಾರಾಯಣ ರಾವ್, ಯೋಜನೆಯ ಪುತ್ತಿಗೆ ವಲಯ ಮೇಲ್ಪಿಚಾರಕ ಸಂತೋಷ್ ಜೈನ್, ರಂಗನಟ ಸುದಾಕರ ಸಾಲ್ಯಾನ್ ಉಪಸ್ಥಿತರಿದ್ದರು. ಒಕ್ಕೂಟದ ಅಧ್ಯಕ್ಷ ಜಗದೀಶ್ ಕೋಟ್ಯಾನ್ ಸ್ವಾಗತಿಸಿದರು, ವಲಯದ ಆರು ಪ್ರೌಢ ಶಾಲಾ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿದ್ದರು.

Comments

comments

Leave a Reply

Read previous post:
ಪರಿಶಿಷ್ಟ ಜಾತಿ ಪಂಗಡ ವಿದ್ಯಾರ್ಥಿಗಳಿಗೆ ಉಚಿತ ಕೊಡೆ ವಿತರಣೆ

ಕಿನ್ನಿಗೋಳಿ : ಕಿನ್ನಿಗೋಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಒಂಬತ್ತು ಶಾಲೆಗಳ ಪರಿಶಿಷ್ಟ ಜಾತಿ ಪಂಗಡ 235 ವಿದ್ಯಾರ್ಥಿಗಳಿಗೆ ಉಚಿತ ಕೊಡೆ ವಿತರಣೆ ಗುತ್ತಕಾಡು ಶಾಲೆಯಲ್ಲಿ ಜರಗಿತು. ಜಿಲ್ಲಾ...

Close