ಮುಲ್ಕಿಯಲ್ಲಿ ನಡೆದ ಹತ್ತನೇ ಆಟಿಡೊಂಜಿ ದಿನ


ಮುಲ್ಕಿ :ನಮ್ಮ ಹಿರಿಯರ ಕಷ್ಟದ ದಿನಗಳನ್ನು ಭವಿಷ್ಯದ ಪೀಳಿಗೆಗೆ ಸ್ಪಷ್ಟವಾಗಿ ತಿಳಿಸಬೇಕಾದರೆ ಶಿಕ್ಷಣದ ಜೊತೆಗೆ ಶಿಸ್ತು ಜಾನಪದ ಸಂಸ್ಕಾರ ಮಕ್ಕಳಿಗೆ ಕಲಿಸಬೇಕು, ಆಟಿಡೊಂಜಿ ದಿನದ ಆಚರಣೆಯು ಇಂದು ಕರಾವಳಿ ಜನಪದ ಸಂಸ್ಕೃತಿಯನ್ನು ಪ್ರತಿಬಿಂಬಿಸಿ ಜಾಗೃತಿ ಮೂಡಿಸುತ್ತಿದೆ ತುಳು ಅಕಾಡೆಮಿಯು ಸಹ ಇದಕ್ಕೆ ಬದ್ಧವಾಗಿದೆ. ನಮ್ಮ ಕರಾವಳಿಯಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮದ ಪ್ರೇರಣೆ ಹಾಗೂ ಅಡಿಪಾಯ ಹಾಕಿದವರೇ ಮುಲ್ಕಿ ಯುವವಾಹಿನಿ ಘಟಕದ ಸದಸ್ಯರು ಎಂದು ರಾಜ್ಯ ತುಳು ಅಕಾಡೆಮಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಹೇಳಿದರು. ಮುಲ್ಕಿ ಯುವವಾಹಿನಿ ಸಂಸ್ಥೆಯ ಸಂಯೋಜನೆಯಲ್ಲಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ರವಿವಾರ ನಡೆದ ಆಟಿಡೊಂಜಿ ದಿನದ ಹತ್ತನೇ ವರ್ಷದ ಕಾರ್ಯಕ್ರಮವನ್ನು ವಿಶಿಷ್ಟ ರೀತಿಯಲ್ಲಿ ಉದ್ಘಾಟಿಸಿ ಮಾತನಾಡಿದರು.

ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಕಿಶೋರ್ ಬಿಜೈ ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀ ನಾರಾಯಣಗುರು ವಿಜಯ ದರ್ಶನ ಎನ್ನುವ ಟಿ.ವಿ.ಧಾರಾವಾಹಿಯ ನಿರ್ಮಾಪಕ ನಿರ್ದೇಶಕ ಹರೀಶ್ ಆಚಾರ್ಯ ಮಡಿಕೇರಿಯವರನ್ನು ವಿಶೇಷವಾಗಿ ಗೌರವಿಸಲಾಯಿತು.

ಅಂತರಾಷ್ಟ್ರೀಯ ಜೇಸಿ ತರಬೇತುದಾರರಾದ ರಾಜೇಂದ್ರ ಭಟ್‌ರವರು ಆಟಿದ ಮದಿಪು ಎನ್ನುವ ವಿಷಯದಲ್ಲಿ ಆಟಿಯ ವಿಶೇಷ ತಿಂಡಿ ತಿನಸುಗಳು ಹಾಗೂ ಆಟಿಯ ವೈಜ್ಞಾನಿಕ ಪರಿಣಾಮಗಳ ಬಗ್ಗೆ ತಿಳಿ ಹೇಳಿದರು. ಹಿರಿಯ ಸಮಾಜ ಸೇವಕ ಕಡಂಬೋಡಿ ಮಾಹಾಬಲ ಪೂಜಾರಿ ಸುರತ್ಕಲ್‌ರನ್ನು ಆಟಿದ ತಮ್ಮನದಲ್ಲಿ ಸನ್ಮಾನಿಸಲಾಯಿತು.

ತುಳು ಚಿತ್ರೋತ್ಸವ ದಶ ಸಂಭ್ರಮದ ಸಮಾರಂಭದ ಕರಪತ್ರವನ್ನು ಬಿಡುಗಡೆ ಮಾಡಿದ ಮಂಗಳೂರು ಪ್ರಜಾವಾಣಿ ದಿನ ಪತ್ರಿಕೆಯ ಮಂಗಳೂರು ಬ್ಯೂರೋ ಮುಖ್ಯಸ್ಥರಾದ ಬಾಲಕೃಷ್ಣ ಪುತ್ತಿಗೆ ಮಾತನಾಡಿ ತುಳುನಾಡ ಸಂಸ್ಕೃತಿಯ ಬೇರು ಬಲವಾಗಿದ್ದು ದೈವರಾದನೆ, ಯಕ್ಷಗಾನ, ಜಾನಪದ ಆಚರಣೆಯು ನಾಡಿನ ಸೊಗಡನ್ನು ಹೆಚ್ಚಿಸಿದೆ, ಸಂಪ್ರದಾಯವನ್ನು ಉಳಿಸಿ ಬೆಳೆಸುವಲ್ಲಿ ಯುವವಾಹಿನಿಯಂತಹ ಗ್ರಾಮೀಣ ಸಂಸ್ಥೆಗಳಿಗೆ ಪ್ರೋತ್ಸಾಹ ಅಗತ್ಯ ಎಂದರು.

ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ರಾಘು ಸುವರ್ಣ, ಕಾರ್ಯದರ್ಶಿ ಕುಶಲಾ ಕುಕ್ಯಾನ್, ಮಧುಕರ ಸುವರ್ಣ, ರಾಜೇಶ್ವರಿ ನಿತ್ಯಾನಂದ ಉಪಸ್ಥಿತರಿದ್ದರು
ಸುಗಂಧಿ ಮತ್ತು ಚಿತ್ರ ಪ್ರಾರ್ಥಿಸಿ, ಯುವವಾಹಿನಿ ಮುಲ್ಕಿ ಘಟಕದ ಅಧ್ಯಕ್ಷ ರಾಮಚಂದ್ರ ಕೋಟ್ಯಾನ್ ಸ್ವಾಗತಿಸಿದರು. , ಸಂಸ್ಥೆಯ ಪುನಶ್ಚೇತಕ,ಕಾರ್ಯಕ್ರಮದ ರೂವಾರಿ ಮುಲ್ಕಿ ಚಂದ್ರಶೇಖರ ಸುವರ್ಣ ಪ್ರಸ್ತಾವನೆಗೈದರು. ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಕ್ರಮದ ವೈಶಿಷ್ಠ್ಯ


ಜಾನಪದ ಸೊಗಡಿನ ವೇದಿಕೆ, ತುಳುನಾಡಿನ ಕೆಸುವಿನ ಎಲೆ, ತೊಜಂಕು, ಅರಿವೆ ಸೊಪ್ಪುವನ್ನು ಕಟಾವು ಮಾಡಿ ಉದ್ಘಾಟನೆ, ಭರತನಾಟ್ಯ, ಜಾನಪದ ನೃತ್ಯ, ಯಕ್ಷಗಾನ, ಸನ್ಮಾನ, ಭಾಷಣ, ಹತ್ತು ಅವಳಿ ಜವಳಿ ಮಕ್ಕಳ ಕಲರವ, ಚೆನ್ನೆಮಣೇಯ ಸ್ಮರಣಿಕೆ, ಬಿಲ್ಲವ ಸಂಘಕ್ಕೆ ಕೊಡುಗೆ, ಅಂದಾಜು 2 ಸಾವಿರ ಮಂದಿಗೆ 20 ಕರಾವಳಿ ಭಕ್ಷಗಳ ಭೋಜನ, ಕಾರ್ಯಕ್ರಮದ ವೈಶಿಷ್ಠ್ಯವಾಗಿತ್ತು.

Comments

comments

Leave a Reply

Read previous post:
ಶಿಮಂತೂರಿನಲ್ಲಿ ನೂತನ ಜೆ.ಜೆ.ಸಿ ಘಟಕ ಸ್ಥಾಪನೆ

ಕಿನ್ನಿಗೋಳಿ : ಜೆ.ಸಿ.ಐ ಮುಂಡ್ಕೂರು ಭಾರ್ಗವದ ಪ್ರಾಯೋಜಕತ್ವದ ಶ್ರೀ ಶಾರದಾ ಪ್ರೌಢ ಶಾಲೆ ಶಿಮಂತೂರಿನಲ್ಲಿ ನೂತನ ಜೂನಿಯರ್ ಜೇಸಿ ಘಟಕವನ್ನು ಭಾರ್ಗವ ಜೆ.ಸಿ.ಸ್‌ನ ಅಧ್ಯಕ್ಷ ಸುರೇಂದ್ರ ಭಟ್...

Close