ಶಿಮಂತೂರಿನಲ್ಲಿ ನೂತನ ಜೆ.ಜೆ.ಸಿ ಘಟಕ ಸ್ಥಾಪನೆ

ಕಿನ್ನಿಗೋಳಿ : ಜೆ.ಸಿ.ಐ ಮುಂಡ್ಕೂರು ಭಾರ್ಗವದ ಪ್ರಾಯೋಜಕತ್ವದ ಶ್ರೀ ಶಾರದಾ ಪ್ರೌಢ ಶಾಲೆ ಶಿಮಂತೂರಿನಲ್ಲಿ ನೂತನ ಜೂನಿಯರ್ ಜೇಸಿ ಘಟಕವನ್ನು ಭಾರ್ಗವ ಜೆ.ಸಿ.ಸ್‌ನ ಅಧ್ಯಕ್ಷ ಸುರೇಂದ್ರ ಭಟ್ ಅಧ್ಯಕ್ಷತೆಯಲ್ಲಿ ಸ್ಥಾಪಿಸಲಾಯಿತು. ಪದಗ್ರಹಣ ಅಧಿಕಾರಿಯಾಗಿ ಮುಂಡ್ಕೂರು ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಉದಯ ಕುಮಾರ್ ಹಬ್ಬು ಅವರು ಜೆ.ಜೆ.ಸಿ ಅಧ್ಯಕ್ಷರಾದ ದುರ್ಗಾಪ್ರಸಾದ್ ಮತ್ತು ಅವರ ತಂಡಕ್ಕೆ ಪದಗ್ರಹಣ ಹಾಗೂ ತರಬೇತಿ ಕಾರ್ಯಕ್ರಮ ನೆರವೇರಿಸಿದರು.
ಮುಖ್ಯ ಶಿಕ್ಷಕರಾದ ಪ್ರಥ್ವಿಶ್ ಕರಿಕೆ, ಶಿಕ್ಷಕರಾದ ಭರತ ನಾಯಕ್, ಉಮೇಶ್ ಎನ್, ಗಣೇಶ್, ರಾಮಣ್ಣ, ಪ್ರೀತಂ ಉಪಸ್ಥಿತರಿದ್ದರು. ಜೇಸಿ ಸುಧಾಕರ ಪೊಸ್ರಾಲ್ ಕಾರ್ಯಕ್ರಮ ನಿರೂಪಿಸಿ, ಹರೀಶ್ ಬಿ ವಂದಿಸಿದರು.

Comments

comments

Leave a Reply

Read previous post:
ಸಂಪಿಗೆಯಲ್ಲಿ ಮಹಿಳಾ ಆರೋಗ್ಯ ಶಿಬಿರ

ಕಿನ್ನಿಗೋಳಿ : ಜೆ.ಸಿ.ಐ ಮುಂಡ್ಕೂರು ಭಾರ್ಗವ ಮತ್ತು ಶ್ರೀ ಧರ್ಮಸ್ಥಳ ಗ್ರಾಮಾಭಿವೇದ್ಧಿ ಯೋಜನೆ(ರಿ) ಜ್ಞಾನ ವಿಕಾಸ ಕೇಂದ್ರ ಪುತ್ತಿಗೆ ವಲಯದ ಸಂಯುಕ್ತ ಆಶ್ರಯದಲ್ಲಿ ಭಾರ್ಗವ ಜೆ.ಸಿ.ಸ್ ಅಧ್ಯಕ್ಷರಾದ...

Close