ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವನಮಹೋತ್ಸವ

ಕಿನ್ನಿಗೋಳಿ : ಪರಿಸರದಲ್ಲಿ ವಿವಿಧ ಔಷಧಿ ಸಸ್ಯಗಳನ್ನು ಬೆಳೆಸಿ ಮನೆಮದ್ದ್ದನ್ನು ತಯಾರಿಸ ಬಹುದು ಪ್ರಕೃತಿದತ್ತವಾದ ನೈಸರ್ಗಿಕ ಸಸ್ಯಗಳನ್ನು ಮನೆಯಂಗಳದಲ್ಲಿ ಇದ್ದರೆ ಉತ್ತಮ ವಾತಾವರಣ ನಿರ್ಮಾಣ ಆಗುತ್ತದೆ ಎಂದು ಎಸ್‌ಇಜೆಡ್‌ನ ಹಸಿರುವಲಯದ ಸಲಹೆಗಾರ ವಿಟ್ಲದ ಸಸ್ಯ ಶ್ಯಾಮಲಾ ನರ್ಸರಿಯ ದಿನೇಶ್ ನಾಯರ್ ಹೇಳಿದರು.

ತೋಕೂರು ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ನಡೆದ ವನಮಹೋತ್ಸವ ಕಾರ್ಯಕ್ರಮವನ್ನು ಶಾಲಾ ವಠಾರದಲ್ಲಿ ಉದ್ಘಾಟಿಸಿದರು ಮಾತನಾಡಿದರು.
ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ರಾಜಾ ಪತ್ರಾವೋ ಅಧ್ಯಕ್ಷತೆ ವಹಿಸಿದ್ದರು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಲತಾ ರಾವ್ ಮಾತನಾಡಿ ಅಭಿವೃದ್ದಿಯ ಹೆಸರಿನಲ್ಲಿ ಮರ ಕಡಿದಲ್ಲಿ ಅದಕ್ಕೆ ಪರ್ಯಾಯವಾಗಿ ಹತ್ತು ಗಿಡಗಳನ್ನು ನೆಡುವ ಮೂಲಕ ಪರಿಸರ ಉಳಿಸಬೇಕಾಗಿದೆ ಇಲ್ಲದಿದ್ದಲ್ಲಿ ಪ್ರಕೃತಿಯ ನಾಶಕ್ಕೆ ನಾವೇ ಕಾರಣರಾಗುವ ಅಪಾಯ ಎದುರಿಸಬೇಕಾಗುತ್ತದೆ ಎಂದರು.
ಶಿಕ್ಷಕಿ ಪೂರ್ಣಿಮಾ ಸಾಲಿಯಾನ್ ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ವಿದ್ಯಾರ್ಥಿ ಪ್ರಮುಖರಾದ ಜರೋಸಾ, ಧೀರಜ್, ಆಕಾಂಕ್ಷಾ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಅನಿಕೇತ್ ಸ್ವಾಗತಿಸಿದರು, ಆಫ್ರೀನ್ ಕಾರ್ಯಕ್ರಮ ನಿರೂಪಿಸಿ ಡೆಜಿಲ್ ವಂದಿಸಿದರು.

Comments

comments

Leave a Reply

Read previous post:
ಮುಲ್ಕಿಯಲ್ಲಿ ನಡೆದ ಹತ್ತನೇ ಆಟಿಡೊಂಜಿ ದಿನ

ಮುಲ್ಕಿ :ನಮ್ಮ ಹಿರಿಯರ ಕಷ್ಟದ ದಿನಗಳನ್ನು ಭವಿಷ್ಯದ ಪೀಳಿಗೆಗೆ ಸ್ಪಷ್ಟವಾಗಿ ತಿಳಿಸಬೇಕಾದರೆ ಶಿಕ್ಷಣದ ಜೊತೆಗೆ ಶಿಸ್ತು ಜಾನಪದ ಸಂಸ್ಕಾರ ಮಕ್ಕಳಿಗೆ ಕಲಿಸಬೇಕು, ಆಟಿಡೊಂಜಿ ದಿನದ ಆಚರಣೆಯು ಇಂದು...

Close