ಏಳಿಂಜೆ ಪಟ್ಟೆಯಲ್ಲಿ ಸ್ವಚ್ಛತಾ ಜಾಗೃತಿ ಕಾರ್ಯಕ್ರಮ

Photo By Sharath Shetty
ಕಿನ್ನಿಗೋಳಿ : ಐಕಳ ಗ್ರಾಮಪಂಚಾಯತ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಪೊಂಪೈ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಸರೆಯಲ್ಲಿ “ಸ್ವಚ್ಛತಾ ಜಾಗೃತಿ” ಕಾರ್ಯಕ್ರಮ ಪಟ್ಟೆ ಜಾರಂದಾಯ ಬಂಟ ದೈವಸ್ಥಾನದಲ್ಲಿ ನಡೆಯಿತು. ಕಾಲೇಜಿನ ವಿದ್ಯಾರ್ಥಿಗಳು ಬೀದಿನಾಟಕದ ಮೂಲಕ ಸ್ವಚ್ಛತಾ ಜಾಗೃತಿ ಮೂಡಿಸುವ ಕಾರ್ಯಕ್ರಮ ನೀಡಿದರು.

ಐಕಳ ಪಂಚಾಯತ್ ಅಧ್ಯಕ್ಷ ಯೋಗೀಶ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದು, ಸದಸ್ಯರಾದ ಪದ್ಮಿನಿ, ಜಯಂತ್,ದೈವಸ್ಥಾನದ ಆಡಳಿತ ಮೊಕ್ತೇಸರ ರಘುರಾಮ ಅಡ್ಯಾಂತಾಯ, ಒಕ್ಕೂಟದ ಅಧ್ಯಕ್ಷ ಹರೀಶ್ ಶೆಟ್ಟಿ, ಕಾಲೇಜಿನ ಎನ್.ಎಸ್.ಎಸ್ ಅಧಿಕಾರಿ ಯೋಗೀಂದ್ರ ಉಪಸ್ಥಿತರಿದ್ದರು.

Comments

comments

Leave a Reply

Read previous post:
ತಾಳಿಪಾಡಿಗುತ್ತುವಿನಲ್ಲಿ ಸಾಧಕರ ಸನ್ಮಾನ

Photo by Sharath Shetty ಕಿನ್ನಿಗೋಳಿ : ನಾಗರಪಂಚಮಿಯ ಶುಭದಿನದಂದು ತಾಳಿಪಾಡಿಗುತ್ತುವಿನಲ್ಲಿ ಕುಟುಂಬದ ಕಲ್ಯಾಣ ಸಮಿತಿಯ ನೇತೃತ್ವದಲ್ಲಿ ಸಾಧಕರ ಸನ್ಮಾನ ಸೋಮವಾರ ನಡೆಯಿತು. ಕಿನ್ನಿಗೋಳಿ ಪಂಚಾಯತ್ ಅಧ್ಯಕ್ಷ...

Close