ತಾಳಿಪಾಡಿಗುತ್ತುವಿನಲ್ಲಿ ಸಾಧಕರ ಸನ್ಮಾನ

Photo by Sharath Shetty
ಕಿನ್ನಿಗೋಳಿ : ನಾಗರಪಂಚಮಿಯ ಶುಭದಿನದಂದು ತಾಳಿಪಾಡಿಗುತ್ತುವಿನಲ್ಲಿ ಕುಟುಂಬದ ಕಲ್ಯಾಣ ಸಮಿತಿಯ ನೇತೃತ್ವದಲ್ಲಿ ಸಾಧಕರ ಸನ್ಮಾನ ಸೋಮವಾರ ನಡೆಯಿತು. ಕಿನ್ನಿಗೋಳಿ ಪಂಚಾಯತ್ ಅಧ್ಯಕ್ಷ ದೇವಪ್ರಸಾದ್ ಪುನರೂರು ಸಹಿತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗೌರವಿಸಲಾಯಿತು.ಎ.ಪಿ.ಎಮ್.ಸಿ ಸದಸ್ಯ ಪ್ರಮೋದ್ ಕುಮಾರ್, ಪಂಚಾಯತ್ ಸದಸ್ಯರಾದ ಟಿ.ಎಚ್.ಮಯ್ಯದ್ದಿ, ಶಾಂತಾ ಕೋಟ್ಯಾನ್,ರಘುರಾಮ್, ನಿವೃತ್ತ ಕಂದಾಯ ನಿರೀಕ್ಷಕ ಆರ್.ಮಹಾಬಲ ರೈ,ಗುತ್ತುವಿನ ಹಿರಿಯರಾದ ರಮೇಶ್ ಶೆಟ್ಟಿ, ಮೊಗೊರೋಡಿ ಕನ್ಸ್‌ಸ್ಟ್ರಕ್ಷನ್‌ನ ಸುಧಾಕರ ಶೆಟ್ಟಿ, ಗುತ್ತಕಾಡು ಶ್ರೀ ಮೂಕಾಂಬಿಕಾ ದೇವಸ್ಥಾನದ ಧರ್ಮದರ್ಶಿ ವಿವೇಕಾನಂದ, ಪಂಚಾಯತ್ ಅಭಿವ್ರದ್ದಿ ಅಧಿಕಾರಿ ನಾರಾಯಣ ಶೆಟ್ಟಿ, ಸುಂದರ ಪೂಜಾರಿಯವರನ್ನು ಸನ್ಮಾನಿಸಲಾಯಿತು. ಕುಟುಂಬದ ಸಮಿತಿಯ ಹಿರಿಯರಾದ ಬೋಳ ರಘುರಾಮ ಶೆಟ್ಟಿ, ರತ್ನಾಕರ್ ಶೆಟ್ಟಿ. ಸುಧಾಕರ್ ಶೆಟ್ಟಿ ರಮೇಶ್ ಶೆಟ್ಟಿ, ಚಂದ್ರಹಾಸ್ ಶೆಟ್ಟಿ, ಟಿ. ವಿಶ್ವನಾಥ್ ಶೆಟ್ಟಿ ಮತ್ತಿತರರಿದ್ದರು.

Comments

comments

Leave a Reply

Read previous post:
ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರಪಂಚಮಿ

ತೋಕೂರು : ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನಾಗ ಸನ್ನಿಧಿಯಲ್ಲಿ ಹಾಲು ಹಾಗೂ ಸಿಯಾಳಾಭಿಷೇಕ ನಾಗರಪಂಚಮಿ ಪ್ರಯುಕ್ತ ಸೋಮವಾರ ನಡೆಯಿತು.

Close