ಕೊ. ಅ. ಉಡುಪರ ಸಂಸ್ಮರಣಾ ಸಮಾರಂಭ

ಕಿನ್ನಿಗೋಳಿ : ಕಿನ್ನಿಗೋಳಿ : ಯುಗಪುರುಷ ಸಂಸ್ಥಾಪಕ ದಿ. ಕೊ. ಅ. ಉಡುಪರ ಸಂಸ್ಮರಣಾ ಸಮಾರಂಭ ಮಂಗಳವಾರ ಯುಗಪುರುಷ ಸಭಾಭಾವನದಲ್ಲಿ ನಡೆಯಿತು. ಕಟೀಲು ದೇವಳದ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದರು. ಹಿರಿಯ ಸಾಹಿತಿ ಸುಮುಖಾನಂದ ಜಲವಳ್ಳಿಯವರು  ದಿ. ಕೊ. ಅ. ಉಡುಪರ ಕವನಗಳ ಕುರಿತು ಭಾವನಾತ್ಮಕ ಸಂಸ್ಮರಣಾ ಮಾತುಗಳನ್ನಾಡಿದರು. ದಿ. ಕೊ.ಅ. ಉಡುಪ ಪ್ರಶಸ್ತಿಯನ್ನು ಸಾಹಿತಿ, ಹಿಂದಿ, ಸಂಸ್ಕೃತ ಪ್ರಾಧ್ಯಾಪಕ ಶ್ರೀಮಿತ್ತೂರು (ಎಂ.ವಿ.ಭಟ್)ರವರಿಗೆ ನೀಡಲಾಯಿತು. ವಾಸುಕೀ ಅನಂತಪದ್ಮನಾಭ ದೇವಸ್ಥಾನದ ಅರ್ಚಕರಾದ ವೇದಮೂರ್ತಿ ಬ್ರಹ್ಮಶ್ರೀ ಬಿ. ಕೃಷ್ಣಮೂರ್ತಿ ಸಾಮಗರಿಗೆ ವೇದ ವಿದ್ವಾಂಸರ ನೆಲೆಯಲ್ಲಿ ಸನ್ಮಾನಿಸಲಾಯಿತು. ಕಿನ್ನಿಗೋಳಿಯ ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ನೂತನ ಐದು ಕೃತಿಗಳಾದ ಶ್ರೀ ಎಂ. ವಿ. ಭಟ್ ರಚಿತ ಸಂಪಾದಕರಿಗೆ ಪತ್ರಗಳು ಹಾಗೂ ದೇಶದ ಇಂದಿನ ಸ್ಥಿತಿಗತಿ, ಶ್ರೀಧರ ಡಿ. ಎಸ್. ರಚಿತ ಬಸ್ಸು ಜಟಕಾ ಬಂಡಿ, ಶ್ರೀ ಕ. ಲಿ. ರೈ ರಚಿತ ಮುಗುಳ್ನಗುವ ಕಡೆತಗಳು, ಶ್ರೀ ಆದಿತ್ಯಪ್ರಸಾದ ಪಾಂಡೇಲು ರಚಿತ ಚಂದ್ರಯಾನ ಈ ಕೃತಿಗಳನ್ನು ಉದಯವಾಣಿಯ ಸಹ ಉಪಾಧ್ಯಕ್ಷ ಆನಂದ್, ದೈಜೀವರ್ಲ್ಡ್ ವಾರಪತ್ರಿಕೆಯ ಪ್ರಧಾನ ಸಂಪಾದಕ ಹೇಮಾಚಾರ್ಯ, ಹರಿಕೃಷ್ಣ ಪುನರೂರು ಹಾಗೂ ಕೆ.ಜಿ.ಮಲ್ಯರವರು ಬಿಡುಗಡೆಗೊಳಿಸಿದರು. ಕೃತಿಕಾರರು ಹಾಗೂ ಕಾನೂನು ಪ್ರಾಧಿಕಾರದ ಸದಸ್ಯ ಬಾಹುಬಲಿ ಪ್ರಸಾದರನ್ನು ಯುಗಪುರುಷದ ಪರವಾಗಿ ಭುವನಾಭಿರಾಮ ಉಡುಪರು ಅಭಿನಂದಿಸಿದರು. ಮಂಗಳೂರು ಸಂಸದ ನಳಿನ್‌ಕುಮಾರ್ ಕಟೀಲ್‌ ಅಧ್ಯಕ್ಷತೆ ವಹಿಸಿದ್ದರು. ರವಿಪ್ರಸಾದ್ ಪೊಂಪೈ ಫ್ರೌಡ ಶಾಲೆ, ಸುಪ್ರೀತಾ ಶ್ರೀ ಶಾರದಾ ಫ್ರೌಡ ಶಾಲೆ ಶಿಮಂತೂರು, ಸ್ವಪ್ನ ಲಿಟ್ಲ್ ಪ್ಲವರ್ ಫ್ರೌಡ ಶಾಲೆ ಕಿನ್ನಿಗೋಳಿ, ವಸಂತಿ ಪದವಿಪೂರ್ವ ಖಾಲೇಜು ಕಟೀಲು ಇವರಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಯಿತು. ಉತ್ತಮ ಬರಹ ಪ್ರಶಸ್ತಿಗಳನ್ನು ದಯಾವತಿ ಲಿಟ್ಲ್ ಪ್ಲವರ್ ಶಾಲೆ, ವೈದೇಹಿ ದುರ್ಗಾ ಪರಮೇಶ್ವರೀ ಹಿರಿಯ ಪಾಥಮಿಕ ಶಾಲೆ ಮತ್ತು ಪ್ರಜ್ಞಾ ಶ್ರೀ ಶಾರದಾ ಶಾಲೆ ಶಿಮಂತೂರು  ಇವರಿಗೆ ನೀಡಲಾಯಿತು. ದೇವರಾಯ ಮಲ್ಯ ಪ್ರತಿಷ್ಠಾನ ಪುರಸ್ಕಾರವನ್ನು ಪತಿಭಾವಂತ ವಿದ್ಯಾರ್ಥಿಗಳಾದ ಅನಂತ ಉಡುಪ ಹಾಗೂ ಪದ್ಮನಾಭ ಉಡುಪರಿಗೆ ನೀಡಲಾಯಿತು.  ಯುಗಪುರುಷದ ಪ್ರಧಾನ ಸಂಪಾದಕ, ಪ್ರಕಾಶಕ ಕೊಡೆತ್ತೂರು ಭುವನಾಭಿರಾಮ ಉಡುಪರು ಸ್ವಾಗತಿಸಿ,  ವಂದಿಸಿದರು. ಇ ಶ್ರೀನಿವಾಸ್ ಭಟ್ ಕಾರ್ಯಕ್ರಮ ನಿರೂಪಿಸಿದರು

Comments

comments

Leave a Reply

Read previous post:
ಮಲ್ಲಿಗೆ ಕೃಷಿಯ ಬಗ್ಗೆ ಮಾಹಿತಿ

Photo by Raghunath Kamath ಕಿನ್ನಿಗೋಳಿ : ರುಸೆಂಪ್ (ಪಕ್ಷಿಕೆರೆ) ಸ್ವಸಹಾಯ ಸಂಘದ ಸದಸ್ಯರಿಗೆ ಮಲ್ಲಿಗೆಕೃಷಿ ಬಗ್ಗೆ ಸಿ.ಓ.ಡಿ.ಪಿ. ಸಂಸ್ಥೆಯ ಪದಾಧಿಕಾರಿಯಾದ ಜೋಸೆಫ್ ಡಿ’ಸೋಕ ಮಾಹಿತಿ ನೀಡಿದರು. ಸಿ.ಓ.ಡಿ.ಪಿ....

Close