ಪುನರೂರು ಪರಿಸರ ಜಾಗೃತಿ ಮಾಹಿತಿ

ಕಿನ್ನಿಗೋಳಿ: ವಾತಾವರಣ ಇಂದು ಮಾನವನ ಸ್ವಾರ್ಥ ಸಾಧನೆಯಿಂದಾಗಿ ಕಲುಷಿತಗೊಳ್ಳುತ್ತಿದೆ. ಧಾರ್ಮಿಕ ಹಾಗೂ ಸಂಸ್ಕೃತಿಯ ನೆಲೆಯಾದ ಕರಾವಳಿ ಜಿಲ್ಲೆಗಳು ಇಂದು ಬೃಹತ್ ಕೈಗಾರಿಕೆಗಳಿಂದಾಗಿ ಯಾಂತ್ರಿಕ ನಗರಗಳಾಗಿ ಬೆಳೆಯುತ್ತಿದೆ ಈ ಬಗ್ಗೆ ಜನರಲ್ಲಿ ಪರಿಸರ ಜಾಗೃತಿಗೊಳಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಕರ್ನಾಟಕ ಪರಿಷತ್ ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು. ಅವರು ಪುನರೂರು ಶ್ರೀ ವಿಶ್ವನಾಥ ದೇವಳದ ಸಭಾಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕಿನ್ನಿಗೋಳಿ ವಲಯದ ಪ್ರಗತಿ ಬಂಧು, ಸ್ವಸಹಾಯ ಸಂಘಗಳ ಒಕ್ಕೂಟ, ನವಜೀವನ ಸಮಿತಿ ಆಶ್ರಯದಲ್ಲಿ ನಡೆದ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪುನರೂರು ಶ್ರೀ ವಿಶ್ವನಾಥ ದೇವಳದ ಮೊಕ್ತೆಸರ ಪಟೇಲ್ ವೆಂಕಟೇಶ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಮಾಧವ ಮಯ್ಯ ಮಾಹಿತಿ ನೀಡಿದರು.
ಯುಗಪುರುಷದ ಭುವನಾಭಿರಾಮ ಉಡುಪ, ಕಿನ್ನಿಗೋಇ ಗ್ರಾಮ ಪಂಚಾಯತ್ ಅಧ್ಯಕ್ಷ ದೇವಪ್ರಸಾದ್ ಪುನರೂರು, ಒಕ್ಕೂಟದ ವಲಯಾಧ್ಯಕ್ಷೆ ಸುಜಾತ, ಮೇಲ್ವಿಚಾರಕಿ ಲತಾ ಕೆ. ಅಮೀನ್ ಉಪಸ್ಥಿತರಿದ್ದರು.
ಸೇವಾನಿರತೆ ವಿಜಯಾ ಸ್ವಾಗತಿಸಿದರು. ವಾಸು ಸಾಲ್ಯಾನ್ ವಂದಿಸಿ ರಾಮ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು

Comments

comments

Leave a Reply

Read previous post:
ಕೊ. ಅ. ಉಡುಪರ ಸಂಸ್ಮರಣಾ ಸಮಾರಂಭ

ಕಿನ್ನಿಗೋಳಿ : ಕಿನ್ನಿಗೋಳಿ : ಯುಗಪುರುಷ ಸಂಸ್ಥಾಪಕ ದಿ. ಕೊ. ಅ. ಉಡುಪರ ಸಂಸ್ಮರಣಾ ಸಮಾರಂಭ ಮಂಗಳವಾರ ಯುಗಪುರುಷ ಸಭಾಭಾವನದಲ್ಲಿ ನಡೆಯಿತು. ಕಟೀಲು ದೇವಳದ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ...

Close