ಐಕಳ ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಪ್ರಶ್ನೆಗಳ ಸುರಿಮಳೆ

ಕಿನ್ನಿಗೋಳಿ: ಐಕಳ, ಏಳಿಂಜೆ, ಉಳೆಪಾಡಿ ಗ್ರಾಮಗಳನ್ನು ಒಳಗೊಂಡ ಐಕಳ ಪಂಚಾಯತ್‌ನ ಗ್ರಾಮ ಸಭೆ ಶುಕ್ರವಾರ ದಾಮಸ್ಕಟ್ಟೆ ಕಿರೆಂ ಚರ್ಚ್ ಸಭಾಭವನದಲ್ಲಿ ಪಂಚಾಯತ್ ಅಧ್ಯಕ್ಷ ಯೋಗೀಶ್ ಕೋಟ್ಯಾನ್‌ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಬಳ್ಕುಂಜೆ ಬಳಿ ಶಾಂಭವಿ ನದಿಯಿಂದ, ಕಿನ್ನಿಗೋಳಿ ಪರಿಸರದ 8 ಗ್ರಾಮ ಪಂಚಾಯತ್‌ಗಳಿಗೆ ನೀರು ಸರಬರಾಜು  ಉದ್ದೇಶದಿಂದ ನಿರ್ಮಾಣಗೊಳ್ಳುತಿರುವ 17ಕೋಟಿ ರೂ. ವೆಚ್ಚದ ಜಿಲ್ಲಾ ಪಂಚಾಯತ್‌ನ ಸಹಕಾರದ ನೀರಿನ ಯೋಜನೆಯ ಕುರಿತು ಬಾರೀ ಚರ್ಚೆ ನಡೆಯಿತು. ಯೋಜನೆಯ ಪೈಪ್ ಲೈನ್ ಅಳವಡಿಕೆಯಿಂದ ರಸ್ತೆಗಳು, ಚರಂಡಿಗಳು, ಅಲ್ಲಲ್ಲಿ ಅಗೆಯಲ್ಪಟ್ಟಿದ್ದು ಸಾರ್ವಜನಿಕರಿಗೆ ಬಾರೀ ತೊಂದರೆಯಾಗಿದೆಯೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಸಂಕಲಕರಿಯ ಕಿಂಡಿ ಅಣೆಕಟ್ಟಿನಿಂದಾಗಿ ನದಿಕೊರೆತವುಂಟಾಗಿ ಗದ್ದೆಗಳಿಗೆ ತೊಂದರೆಯುಂಟಾಗಿದೆ,ಅಣೆಕಟ್ಟು ನಿರ್ವಹಣೆ ಸರಿಯಾಗಿಲ್ಲವೆಂದು ತಿಳಿಸಿದ ಸುಧಾಕರ್ ಸಾಲ್ಯಾನ್ ಐಕಳ ಗ್ರಾಮಕ್ಕೆ  ಸ್ಮಶಾನ ಬೇಕೆಂದರು. ಮುಲ್ಕಿ ರೈತ ಸಂಪರ್ಕ ಕೇಂದ್ರವನ್ನು ಐಕಳ ಕಿನ್ನಿಗೋಳಿ ರೈತರಿಗೆ ಅನುಕೂಲವಾಗುವಂತೆ ವರ್ಗಾಯಿಸಬೇಕಂದು ಮಾಜಿ ತಾ.ಪಂ ಸದಸ್ಯ ವೈ.ಕ್ರಷ್ಣ ಸಾಲ್ಯಾನ್ ಆಗ್ರಹಿಸಿದರು. ಐಕಳ ಬಾವಡಿಕಲ್ಲು ಬಳಿ ಕೋರೆಯ ವಾಹನಗಳಿಗೆ ಕಡ್ಡಾಯವಾಗಿ ಪ್ರವೇಶ ನಿಷೇಧಿಸ ಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಶುಂಠಿಪಾಡಿ,ಕಂಗುರಿ,ಉಳೆಪಾಡಿ ರಸ್ತೆ ದುರಸ್ತಿ ಪಡಿಸಬೇಕೆಂದು ರಾಮಚಂದ್ರ,ಸುಜಾತಾ,ಹರೀಶ್ ಮತ್ತಿತರರು ಆಗ್ರಹಿಸಿದರು. ಗ್ರಾಮಸ್ಥರ ಪರವಾಗಿ ಗೋಲ್ಡಿನ್,ಬಾಲಕ್ರಷ್ಣ ಶೆಟ್ಟಿ, ಅಂತೋಣಿ, ಲೆವಿ ಮತ್ತಿತರರು ಮಾತನಾಡಿದರು. ಜಿ.ಪಂ ಇಂಜಿನಿಯರ್ ಪ್ರಭಾಕರ್ ನೋಡೆಲ್ ಅದಿಕಾರಿಯಾಗಿದ್ದು, ಜಿ. ಪಂ. ಸದಸ್ಯೆ ಆಶಾ ಆರ್. ಸುವರ್ಣ, ತಾ.ಪಂ ಸದಸ್ಯ ನೆಲ್ಸನ್ ಲೋಬೋ ಕಂದಾಯ ನಿರೀಕ್ಷಕ ನಿತ್ಯಾನಂದ ದಾಸ್,ಪ್ರಭಾರ ಪಿ.ಡಿ.ಒ ಗಣೇಶ್ ಬಡಿಗೇರ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಲ್ಪನಾ,ಪಶುವೈದ್ಯ ಡಾ| ಸತ್ಯಶಂಕರ, ತೋಟಗಾರಿಕೆಯ ನಾರಾಯಣಾಚಾರ್ ಮತ್ತಿತರರಿದ್ದರು.

Comments

comments

Leave a Reply

Read previous post:
ರಾಜರತ್ನಪುರದಲ್ಲಿ ವರಮಹಾಲಕ್ಷ್ಮೀ ಪೂಜೆ

ಕಿನ್ನಿಗೋಳಿ: ಕಿನ್ನಿಗೋಳಿಯ ಶ್ರೀ ಕಾಳಿಕಾಂಬ ಮಹಿಳಾ ವೃಂದದ ನೇತೃತ್ವದಲ್ಲಿ ವರಮಹಾಲಕ್ಷ್ಮೀ ಪೂಜೆ ಶುಕ್ರವಾರ ರಾಜರತ್ನಪುರದ ಸರಾಫ್ ಅಣ್ಣಯ್ಯಚಾರ್ಯ ಸಭಾಭವನದಲ್ಲಿ ನಡೆಯಿತು.

Close