ಕಿನ್ನಿಗೋಳಿಯಲ್ಲಿ ದೇನಾ ಬ್ಯಾಂಕ್ ಪ್ರಾರಂಭ

News and Photo : Lionel Pinto Kinnigoli.

ಕಿನ್ನಿಗೋಳಿ : ಕರ್ನಾಟಕದಲ್ಲಿನ 35 ನೇ ದೇನಾ ಬ್ಯಾಂಕ್ ಶಾಖೆಯನ್ನು ಕಿನ್ನಿಗೋಳಿಯ ಚರ್ಚ್ ಬಿಲ್ಡಿಂಗ್ ನಲ್ಲಿ ಸಹಾಯಕ ಕಮಿಷನರ್ ಹಾಗೂ ಮಂಗಳೂರು ಸಬ್ ಡಿವಿಜನಲ್ ಮ್ಯಾಜಿಸ್ಟ್ರೇಟ್ ಡಾ| ವೆಂಕಟೇಶ್ ಎಮ್. ವಿ. ಅವರು ಉದ್ಘಾಟಿಸಿದರು. ಕಟೀಲು ದೇವಳದ ಅರ್ಚಕ ಲಕ್ಷ್ಮೀ ನಾರಾಯಣ ಆಸ್ರಣ್ಣರು ದೀಪ ಬೆಳಗಿಸಿದರು. ಕಿನ್ನಿಗೋಳಿ ಚರ್ಚ್ ಧರ್ಮ ಗುರು ಫಾ| ಆಲ್ಫ್ರೆಡ್ ಜೆ. ಪಿಂಟೊ ಲಾಕರ್ ಕೊಠಡಿ, ಕಿನ್ನಿಗೋಳಿ ಪಂಚಾಯತ್ ಅಧ್ಯಕ್ಷ ದೇವಪ್ರಸಾದ್ ಪುನರೂರು ಲಾಕರ್ ಗಳು, ಯುಗಪುರುಷದ ಭುವನಾಭಿರಾಮ ಉಡುಪ ಮೇನಜರ್ ಕೊಠಡಿಯನ್ನು ಉದ್ಘಾಟಿಸಿದರು.
ಬಳಿಕ ನಡೆದ ಕಾರ್ಯಕ್ರಮದಲ್ಲಿ ಡಾ| ವೆಂಕಟೇಶ್ ಎಮ್. ವಿ. ದೇನಾ ಬ್ಯಾಂಕ್ ಸಮಾಜದ ಜನತೆಗೆ ಉತ್ತಮ ಸೇವೆ ಹಾಗೂ ಬಡ ಜನರು ಆರ್ಥಿಕತೆಯಲ್ಲಿ ಮುಂದುವರಿಯುವಂತೆ ಶ್ರಮಿಸಬೇಕು ಎಂದು ಹೇಳಿದರು. ಕಿನ್ನಿಗೋಳಿ ಚರ್ಚ್ ಧರ್ಮ ಗುರು ಫಾ| ಆಲ್ಫ್ರೆಡ್ ಜೆ. ಪಿಂಟೊ ಅಧ್ಯಕ್ಷತೆಯನ್ನು ವಹಿಸಿದ್ದರು. ಮಾಜಿ ಕ. ಸಾ. ಪ. ಅಧ್ಯಕ್ಷ ಹರಿಕೃಷ್ಣ ಪುನರೂರು, ಡೆಪ್ಯುಟಿ ಜನರಲ್ ಮ್ಯಾನೇಜರ್ ರಾಜೀವ್ ರಂಜನ್ ಉಪಸ್ಠಿತರಿದ್ದರು.
ಕಿನ್ನಿಗೋಳಿ ದೇನಾ ಬ್ಯಾಂಕ್ ಶಾಖೆಯ ಮ್ಯಾನೇಜರ್ ಕೃಷ್ಣಪ್ರಸಾದ್ ಕೆ.ಪಿ. ಸ್ವಾಗತಿಸಿದರು. ಬ್ಯಾಂಕಿನ ನಿವೃತ್ತ ಅಧಿಕಾರಿ ಶಶಿಧರ ಐತಾಳ್ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಐಕಳ ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಪ್ರಶ್ನೆಗಳ ಸುರಿಮಳೆ

ಕಿನ್ನಿಗೋಳಿ: ಐಕಳ, ಏಳಿಂಜೆ, ಉಳೆಪಾಡಿ ಗ್ರಾಮಗಳನ್ನು ಒಳಗೊಂಡ ಐಕಳ ಪಂಚಾಯತ್‌ನ ಗ್ರಾಮ ಸಭೆ ಶುಕ್ರವಾರ ದಾಮಸ್ಕಟ್ಟೆ ಕಿರೆಂ ಚರ್ಚ್ ಸಭಾಭವನದಲ್ಲಿ ಪಂಚಾಯತ್ ಅಧ್ಯಕ್ಷ ಯೋಗೀಶ್ ಕೋಟ್ಯಾನ್‌ರವರ ಅಧ್ಯಕ್ಷತೆಯಲ್ಲಿ...

Close