ಹಳೆಯಂಗಡಿ- ಪಾವಂಜೆ ದೇವಾಡಿಗ ಸಂಘದಿಂದ ಪುಸ್ತಕ ವಿತರಣೆ.

ಹಳೆಯಂಗಡಿ: “ಇತ್ತೀಚಿನ ದಿನಗಳಲ್ಲಿ ಶಿಕ್ಷಣದಲ್ಲಾಗಲೀ, ಉದ್ಯೋಗದಲ್ಲಾಗಲೀ ಯುವತಿಯರೇ ಮೇಲುಗೈ ಸಾಧಿಸುತ್ತಿರುತ್ತಾರೆಯೇ ಹೊರತು ಯುವಕರ ಸಾಧನೆ ಕುಂದುತ್ತಾ ಇದೆ. ಕಾರಣ ಹೆಚ್ಚಿನ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಯುವಕರು ವಿದ್ಯಾವಂತರಾಗಿ ರಾಜಕೀಯ ಇಚ್ಛಾಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಹೆತ್ತವರು ಮಹತ್ತರ ಪಾತ್ರ ವಹಿಸಬೇಕು” ಎಂದು ಮಂಗಳೂರು ತಾಲೂಕು ಸಹಾಯಕ ಆಯುಕ್ತರ ಕಛೇರಿಯ ತಹಶೀಲ್ದಾರರಾದ ಬಾಬು ದೇವಾಡಿಗರು ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದ ಶ್ರೀ ಶಾರಧ್ವತ ಯಜ್ಞಾಂಗಣದಲ್ಲಿ ಇತ್ತೀಚೆಗೆ ಜರಗಿದ ದೇವಾಡಿಗ ಸಮಾಜ ಸೇವಾ ಸಂಘ(ರಿ) ಪಾವಂಜೆ ಆಶ್ರಯದಲ್ಲಿ ಸಂಘದ ವ್ಯಾಪ್ತಿಗೊಳಪಟ್ಟ ೧೬ ಗ್ರಾಮಗಳ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಸಮಾರಂಭದ ಅಧ್ಯಕ್ಷತೆಯಲ್ಲಿ ಮಾತನಾಡಿದರು. ಮಂಗಳೂರಿನ ವಕೀಲರಾದ ರಾಜು ದೇವಾಡಿಗರು ಅಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಿ “ನಮ್ಮ ಸಂಘದ ಅಭಿವೃದ್ಧಿಯಲ್ಲಿ ಇನ್ನೊಬ್ಬರನ್ನು ಅವಲಂಬಿತರಾಗದೆ ನಮ್ಮದೇ ಸ್ವಪ್ರಯತ್ನದಲ್ಲಿ ನಮ್ಮ ಸಂಘಟನೆಯಾಗಬೇಕು. ಅದಕ್ಕಾಗಿ ನಮ್ಮ ಸಮಾಜದ ಯುವಜನರು ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಕೊಡಬೇಕು, ಅವಾಗ ಮಾತ್ರ ನಮ್ಮ ಸಮಾಜದ ಸಂಘಟನೆ ಸಾಧ್ಯ” ಎಂದು ಅಭಿಪ್ರಾಯ ಪಟ್ಟರು, ಮುಖ್ಯ ಅತಿಥಿಯಾಗಿ ಆಗಮಿಸಿದ ಪಾವಂಜೆ ದೇವಾಡಿಗರ ಸಂಘದ ಮುಂಬಾಯಿ ಸಮಿತಿಯ ಮಹಾರಾಷ್ಟ್ರ ವಿಭಾಗದ ಅಧ್ಯಕ್ಷರಾದ ಡಾ|ರಾಜು ದೇವಾಡಿಗರು ಮತ್ತು ಮುಲ್ಕಿ ದೇವಾಡಿಗರ ಸೇವಾ ಸಂಘದ ಅಧ್ಯಕ್ಷರಾದ ದೊಡ್ಡಣ್ಣ ದೇವಾಡಿಗರು ಪಾವಂಜೆ ದೇವಾಡಿಗರ ಸಂಘಟನೆಯನ್ನು ಶ್ಲಾಘಿಸಿದರು ಮತ್ತು ಸಂಘದ ಉದ್ದೇಶಿತ ಕಟ್ಟಡ ಆದಷ್ಟು ಶೀಘ್ರದಲ್ಲಿ ನಿರ್ಮಾಣವಾಗಲಿ ಎಂದು ಶುಭಹಾರೈಸಿದರು. ಸಂಘದ ಆಡಳಿತ ಸಮಿತಿಯ ಅಧ್ಯಕ್ಷರಾದ ಜನಾರ್ಧನ್ ಪಡುಪಣಂಬೂರು, ಸಂಘದ ಕಟ್ಟಡ ಸಮಿತಿಯ ಪ್ರಧಾನ ಕಾರ್ಯದರ್ಶಿ ಯಾದವ ದೇವಾಡಿಗ, ಸೇವಾ ಪ್ರಸ್ಟ್ ಅಧ್ಯಕ್ಷರಾದ ರಮೇಶ್ ಕುಮಾರ್, ಯುವ ವೇದಿಕೆಯ ಕಾರ್ಯದರ್ಶಿ ಪ್ರಕಾಶ್ ಪಾವಂಜೆ ಹಾಗೂ ಮಹಿಳಾ ವೇದಿಕೆಯ ಅಧ್ಯಕ್ಷರಾದ ವಿಮಲ ಕೆ. ದೇವಾಡಿಗ, ಸಂಘದ ಕಟ್ಟಡ ಸಮಿತಿಯ ಕೋಶಾಧಿಕಾರಿ ರಮೇಶ್ ದೇವಾಡಿಗ ತೋಕೂರು, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಿತಿ ಸದಸ್ಯ ಭಾಸ್ಕರ್ ಆರಂದು ಬಹುಮಾನ ವಿಜೇತರ ಪಟ್ಟಿಗಳನ್ನು ಓದಿ, ಕಟ್ಟಡ ಸಮಿತಿಯ ಪ್ರಧಾನ ಕಾರ್ಯದರ್ಶಿ ಯಾದವ ದೇವಾಡಿಗ ಸ್ವಾಗತಿಸಿ, ದೇವಾಡಿಗ ಸೇವಾ ಟ್ರಸ್ಟ್‌ನ ಅಧ್ಯಕ್ಷರಾದ ರಮೇಶ್ ಕುಮಾರ್ ವಂದಿಸಿ. ಪ್ರಧಾನ ಕಾರ್ಯದರ್ಶಿ ರಾಮ್‌ದಾಸ್ ಪಾವಂಜೆ ಕಾರ್ಯಕ್ರಮ ನಿರೂಪಿಸಿದ್ದರು. ಬಳಿಕ ಪೂರ್ವಹ್ನ ನಡೆದ ಸಾಮೂಹಿಕ ಶ್ರೀ ಶನಿದೇವರ ಪೂಜೆ ಹಾಗೂ ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ಪ್ರಕಾಶ್ ಪಾವಂಜೆ ದೇವರ ಸ್ತುತಿಗೈದರು.

 

Comments

comments

Leave a Reply

Read previous post:
ಹಳೆಯಂಗಡಿ ಗಣೇಶೋತ್ಸವ ಸಮಿತಿಗೆ ಆಯ್ಕೆ

ಹಳೆಯಂಗಡಿ: ಹಳೆಯಂಗಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿಯ 22ನೇ ವರ್ಷದ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ವಿನೋದ್ ಎಸ್. ಸಾಲ್ಯಾನ್, ಪ್ರಧಾನ ಕಾರ್ಯದರ್ಶಿಯಾಗಿ ಹಿಮಕರ್ ಕದಿಕೆ, ಕೋಶಾಧಿಕಾರಿಯಾಗಿ ವಿನೋದ್...

Close