ಮಾರಡ್ಕದಲ್ಲಿ ಮನೆಗೆ ಬಿದ್ದ ತೆಂಗಿನ ಮರ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯತ್‌ನ ಮಾರಡ್ಕದ ಬಳಿ ಸಂಕಪ್ಪ ರಾಣ್ಯ ಎಂಬುವವರ ಮನೆಗೆ ಶುಕ್ರವಾರ ತೆಂಗಿನ ಮರ ಬಿದ್ದು ಮನೆಗೆ ಹಾನಿಯಾಗಿದೆ. ಬೆಳಿಗ್ಗೆ ಮಳೆಗಾಳಿಯಿಂದಾಗಿ ತೆಂಗಿನ ಮರ ಮನೆಗೆ ಬಿದ್ದಾಗ ಮನೆಯೊಳಗೆ 6 ಮಂದಿ ಇದ್ದು ಅವರ ಪೈಕಿ ಮನೆಯ ಯಜಮಾನ ಸಂಕಪ್ಪ ರಾಣ್ಯ ಹಾಗೂ ಪತ್ನಿ ಪೂವ ರಾಣ್ಯ ಗಾಯಗೊಂಡಿದ್ದು ಆಸ್ಪತ್ರೆ ದಾಖಲಾಗಿದ್ದಾರೆ. ಮುಲ್ಕಿ ಕಂದಾಯ ನಿರೀಕ್ಷಕ ನಿತ್ಯಾನಂದ ದಾಸ್ ಸ್ಥಳಕ್ಕೆ ಭೇಟಿ ನೀಡಿ ಅಂದಾಜು ನಷ್ಟ ದಾಖಲಿಸಿದ್ದಾರೆ. ಸ್ಥಳೀಯ ಪಂಚಾಯತ್ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಗಾಯಳುಗಳು ಅಪಾಯದಿಂದ ಪಾರಾಗಿದ್ದಾರೆ.

Comments

comments

Leave a Reply

Read previous post:
ಮುಂಡ್ಕೂರು ದೇವಳದಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ

Photo by Sharath Shetty ಮುಂಡ್ಕೂರು: ಕಾರ್ಕಳ ತಾಲೂಕಿನ, ಮುಂಡ್ಕೂರು, ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ ಹಾಗೂ ಪೂಜೆ ಶುಕ್ರವಾರ ನಡೆಯಿತು. ವರ್ಷಂಪ್ರತಿಯಂತೆ ಶುಕ್ರವಾರ ವರಮಹಾಲಕ್ಷ್ಮೀ...

Close