ಮುಂಡ್ಕೂರು ದೇವಳದಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ

Photo by Sharath Shetty

ಮುಂಡ್ಕೂರು: ಕಾರ್ಕಳ ತಾಲೂಕಿನ, ಮುಂಡ್ಕೂರು, ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ ಹಾಗೂ ಪೂಜೆ ಶುಕ್ರವಾರ ನಡೆಯಿತು. ವರ್ಷಂಪ್ರತಿಯಂತೆ ಶುಕ್ರವಾರ ವರಮಹಾಲಕ್ಷ್ಮೀ ಪೂಜೆಯೂ ನಡೆಯಿತು. ದೇವಳದ ಆಡಳಿತ ಅಧಿಕಾರಿ, ಕಾರ್ಕಳ ತಹಶೀಲ್ದಾರ್ ಜಗನ್ನಾಥ್ ರಾವ್, ಅರ್ಚಕ ರಾಮ್ ದಾಸ್ ಆಚಾರ್ಯ, ಮತ್ತಿತರರಿದ್ದು ಪ್ರಾರ್ಥನೆ ಸಲ್ಲಿಸಿದರು. ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ಇತ್ತೀಚೆಗೆ ರಾಜ್ಯ ಸರಕಾರದ ಸಂಪುಟಕ್ಕೆ ಸೇರ್ಪಡೆಗೊಂಡು ಮುಜರಾಯಿ ಇಲಾಖೆ ಸಚಿವರಾಗಿ ರಾಜ್ಯದಲ್ಲಿ ಮಳೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆಗೆ ಒಳಪಟ್ಟ ರಾಜ್ಯದ ಎಲ್ಲಾ ದೇವಳಗಳಲ್ಲಿ ಮಳೆಗಾಗಿ ವಿಶೇಷ ಪೂಜೆ ಸಲ್ಲಿಸುವಂತೆ ಆದೇಶಿಸಿದ್ದರು ಈ ಆದೇಶ ರಾಜ್ಯದೆಲ್ಲೆಡೆ ಸಂಚಲನ ಮೂಡಿಸಿದ್ದು ವಿಪಕ್ಷದಿಂದ ಟೀಕೆಗೂ ಗುರಿಯಾಗಿತ್ತು.

Comments

comments

Leave a Reply

Read previous post:
ಹಳೆಯಂಗಡಿ- ಪಾವಂಜೆ ದೇವಾಡಿಗ ಸಂಘದಿಂದ ಪುಸ್ತಕ ವಿತರಣೆ.

ಹಳೆಯಂಗಡಿ: "ಇತ್ತೀಚಿನ ದಿನಗಳಲ್ಲಿ ಶಿಕ್ಷಣದಲ್ಲಾಗಲೀ, ಉದ್ಯೋಗದಲ್ಲಾಗಲೀ ಯುವತಿಯರೇ ಮೇಲುಗೈ ಸಾಧಿಸುತ್ತಿರುತ್ತಾರೆಯೇ ಹೊರತು ಯುವಕರ ಸಾಧನೆ ಕುಂದುತ್ತಾ ಇದೆ. ಕಾರಣ ಹೆಚ್ಚಿನ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಯುವಕರು ವಿದ್ಯಾವಂತರಾಗಿ...

Close