ಯುವವಾಹಿನಿಯಿಂದ ಚಿತ್ರೋತ್ಸವ

ಮುಲ್ಕಿ : ಗ್ರಾಮೀಣ ಮಟ್ಟದಲ್ಲಿ ತುಳು ಸಿನಿಮಾಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮೂಲ್ಕಿಯ ಯುವವಾಹಿನಿ ಸಂಸ್ಥೆಯು ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಜಂಟಿ ಸಂಯೋಜನೆಯಲ್ಲಿ ಜುಲೈ 30 ರಿಂದ ಆಗಸ್ಟ್ 8 ರವರೆಗೆ ಹತ್ತು ದಿನಗಳ ತುಳು ಚಿತ್ರೋತ್ಸವ-ದಶಸಂಭ್ರಮ 2012 ನ್ನು ಆಯೋಜಿಸಿದ್ದಾರೆ.

ಮುಲ್ಕಿಯ ಬಿಲ್ಲವ ಸಂಘದಲ್ಲಿ ಪ್ರತಿ ದಿನ ಸಂಜೆ 5ಕ್ಕೆ ನಡೆಯುವ ಈ ತುಳು ಸಿನಿಮಾ ಚಿತ್ರೋತ್ಸವದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆದ ಶ್ರೇಷ್ಠ ತುಳು ಸಿನಿಮಾಗಳೊಂದಿಗೆ ಹಳೆಯ ಸಿನಿಮಾಗಳು ಸೇರಿದೆ. ತುಳುನಾಡಿನಲ್ಲಿ ತುಳು ಭಾಷೆಗೆ ವಿಶೇಷ ಮಾನ್ಯತೆ ನೀಡಿರುವ ತುಳು ಸಿನಿಮಾಗಳು ಹತ್ತು ದಿನದಲ್ಲಿಯೂ ಉಚಿತವಾಗಿ ಪ್ರದರ್ಶನ ಕಾಣಲಿದೆ.
ಜಿಲ್ಲೆಯ ಖ್ಯಾತ ರಂಗಕರ್ಮಿ ತಮ್ಮ ಲಕ್ಷ್ಮಣ್ ಈ ಚಿತ್ರೋತ್ಸವವನ್ನು ಸೋಮವಾರ ಉದ್ಘಾಟಿಸಲಿದ್ದಾರೆ. ಬದಿ, ಸೆಪ್ಟಂಬರ್ 8, ಬೊಳ್ಳಿ ತೋಟ, ಗಗ್ಗರ, ಒಂತೆ ಅಡ್ಜೆಸ್ಟ್ ಮಲ್ಪಿ, ಮಾರಿಬಲೆ, ಬಂಗಾರ್ ಪಟ್ಲೇರ್, ಕೋಟಿ ಚೆನ್ನಯ (ಕಪ್ಪು ಬಿಳುಪು), ಬಿರ್ಸೆ, ಕೋಟಿ ಚೆನ್ನಯ(ಕಲರ್), ತುಳು ಸಿನಿಮಾಗಳು ಪ್ರದರ್ಶನ ಆಗಲಿದೆ.
ಆಗಸ್ಟ್ 5ರ ಭಾನುವಾರ ಸಂಜೆ 3ಕ್ಕೆ ತುಳು ಸಿನಿಮಾ ನಿರ್ಮಾಣ ಮತ್ತು ಪ್ರದರ್ಶನ ಎನ್ನುವ ವಿಷಯದ ಬಗ್ಗೆ ಸಂವಾದವನ್ನು ಏರ್ಪಡಿಸಿದ್ದು ಕಲಾವಿದರಾದ ಸರೋಜಿನಿ ಶೆಟ್ಟಿ, ಮಧು ಸುರತ್ಕಲ್, ತಮ್ಮ ಲಕ್ಷ್ಮಣ್, ಮುಲ್ಕಿ ಚಂದ್ರಶೇಖರ ಸುವರ್ಣ ಭಾಗವಹಿಸಲಿದ್ದಾರೆ. ಸಮಾರೋಪವು ಆಗಸ್ಟ್ 8ರಂದು ನಡೆಯಲಿದೆ ಎಂದು ಯುವವಾಹಿನಿ ಅಧ್ಯಕ್ಷ ರಾಮಚಂದ್ರ ಕೋಟ್ಯಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Comments

comments

Leave a Reply

Read previous post:
ಸೂರಿಂಜೆ : ವನಮಹೋತ್ಸವ

Photo by Mithuna Kodethoor ಕಿನ್ನಿಗೋಳಿ: ಸೂರಿಂಜೆ ಹಿದಾಯತ್ ಇಂಗ್ಲಿಷ್ ಮಾಧ್ಯಮ ಹಿ.ಪ್ರಾ.ಶಾಲೆ ಹಾಗೂ ಪ್ರೌಢಶಾಲೆಯಲ್ಲಿ ವನಮಹೋತ್ಸವ ನಡೆಯಿತು. ಸಾಹಿತಿ ಉಮೇಶ್ ರಾವ್ ಎಕ್ಕಾರು ಶಾಲಾ ಪರಿಸರ...

Close