ಕಟೀಲು ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಸರಕಾರದ ಉದ್ಘಾಟನೆ

ಕಟೀಲು: ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು ಹಾಗೂ ಶ್ರಧ್ಧೆ ಮೂಡಿಸಲು ಶಾಲಾ ಸರಕಾರ ಪೂರಕವೆಂದು ಕಟೀಲು ದೇವಳ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಜಯರಾಮ್ ಪೂಂಜಾ ಹೇಳಿದರು. ಅವರು ಶುಕ್ರವಾರ ಕಾಲೇಜಿನಲ್ಲಿ ವಿದ್ಯಾರ್ಥಿ ಸರಕಾರ ಉದ್ಘಾಟಿಸಿ ಮಾತನಾಡಿದರು. ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕಿ ವನಿತ ಮುಖ್ಯ ಅತಿಥಿಯಾಗಿದ್ದು ವಿದ್ಯಾರ್ಥಿ ಸರಕಾರದ ವಿಭಾಗದ ಮುಖ್ಯಸ್ಥೆ ಭಾರತಿ ಎನ್. ಶೆಟ್ಟಿ, ಕವಿತ, ವಿಜಯ ಕುಮಾರ್ ಶೆಟ್ಟಿ, ವಿದ್ಯಾರ್ಥಿ ನಾಯಕ ದುರ್ಗಪ್ರಸಾದ್ ದಿವಾಣ, ಉಪನಾಯಕ ಸುಕೇಶ್, ಉಪಸ್ಥಿತರಿದ್ದರು. ಶಾಲಾ ಸರಕಾರದ ಆಡಳಿತ ಪಕ್ಷದವರಿಗೆ, ವಿಪಕ್ಷದವರಿಗೆ ಪ್ರಮಾಣವಚನ ಭೋದಿಸಲಾಯಿತು. ಶಂಕರ ಮರಾಠೆ ಕಾರ್ಯಕ್ರಮ ನಿರೂಪಿಸಿದರು.

 

Comments

comments

Leave a Reply

Read previous post:
ಕಿನ್ನಿಗೋಳಿಯಲ್ಲಿ ದೇನಾ ಬ್ಯಾಂಕ್ ಪ್ರಾರಂಭ

News and Photo : Lionel Pinto Kinnigoli. ಕಿನ್ನಿಗೋಳಿ : ಕರ್ನಾಟಕದಲ್ಲಿನ 35 ನೇ ದೇನಾ ಬ್ಯಾಂಕ್ ಶಾಖೆಯನ್ನು ಕಿನ್ನಿಗೋಳಿಯ ಚರ್ಚ್ ಬಿಲ್ಡಿಂಗ್ ನಲ್ಲಿ ಸಹಾಯಕ...

Close