ಕಿನ್ನಿಗೋಳಿಯಲ್ಲಿ 12 ಇಂಟರಾಕ್ಟ್ ಕ್ಲಬ್‌ಗಳ ಪದಗ್ರಹಣ

ಕಿನ್ನಿಗೋಳಿ : ಕಿನ್ನಿಗೋಳಿ ರೋಟರಿ ಸಂಸ್ಥೆಯಿಂದ ಪ್ರವರ್ತಿಸಲಾದ 12 ಇಂಟರಾಕ್ಟ್ ಸಂಸ್ಥೆಗಳ ಪದಗ್ರಹಣ ಶನಿವಾರ ಯುಗಪುರುಷ ಸಭಾಭವನದಲ್ಲಿ ನಡೆಯಿತು. ಕಿನ್ನಿಗೋಳಿ ರೋಟರಿ ಅಧ್ಯಕ್ಷ ಕಳ್ಳಿಗೆ ಬಾಲಕೃಷ್ಣ ಶೆಟ್ಟಿ ನೂತನ ಅಧ್ಯಕ್ಷ , ಕಾರ್ಯದರ್ಶಿ, ಶಿಕ್ಷಕ ನಿರ್ದೇಶಕರಿಗೆ ಹಾಗೂ ಪದಾಧಿಕಾರಿಗಳಿಗೆ ಪದವಿ ಪ್ರದಾನ ಮಾಡಿದರು. ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಪ್ರಖ್ಯಾತ್ ಶೆಟ್ಟಿ, ಕಟೀಲು ದೇವಳ ಪದವಿ ಪೂರ್ವ ಕಾಲೇಜಿನ ಗುರುಪ್ರಸಾದ್, ಶಿಮಂತೂರು ಶ್ರೀ ಶಾರದಾ ಪ್ರೌಡ ಶಾಲೆಯ ಅಜಿತ್, ಬಳ್ಕ್ಕುಂಜೆ ಸಂತ ಫೌಲರ ಪ್ರೌಢಶಾಲೆಯ ಪ್ರೀತಿ ಕೆ., ಮುಂಡ್ಕೂರು ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿನ ಮಿಲನ್, ತಾಳಿಪಾಡಿ ಪೊಂಪೈ ಪದವಿಪೂರ್ವ ಕಾಲೇಜಿನ ಗ್ಯಾರಿ ಪಿಂಟೋ, ನಡುಗೋಡು ಸರಕಾರಿ ಪ್ರೌಢಶಾಲೆಯ ಪೂಜಾ, ಕೆಮ್ರಾಲ್ ಸರಕಾರಿ ಪ್ರೌಢ ಶಾಲೆಯ ಕೀರ್ತಿ, ಲಿಟ್ಲ್ ಫ್ಲವರ್ ಪ್ರೌಢಶಾಲೆಯ ಯಾಸ್ಮಿನ್, ಸೂರಿಂಜೆ ಹಿದಾಯತ್ ಆಂಗ್ಲ ಮಾಧ್ಯಮ ಶಾಲೆಯ ಸುಹೈಲ್, ಮೆರಿವೆಲ್ ಆಂಗ್ಲ ಮಾಧ್ಯಮ ಶಾಲೆಯ ಸ್ಟೆಫನ್ ಡಿ”ಸೋಜ, ಎಕ್ಕಾರು ಸರಕಾರಿ ಪ್ರೌಢ ಶಾಲೆಯ ಮನಿಷ್ ಪದವಿ ಸ್ವೀಕರಿಸಿದ ನೂತನ ಅಧ್ಯಕ್ಷರುಗಳು. ರೋಟರಿಯ ಮಾಜಿ ಸಹಾಯಕ ಗವರ್ನರ್ ರಾಜ ಪತ್ರಾವೋ , ಇಂಟರಾಕ್ಟ್ ವಲಯ ಸಂಯೋಜಕ ಜಗನ್ನಾಥ ಕೋಟೆ,ರೋಟರಿ ಕಾರ್ಯದರ್ಶಿ ಯಶವಂತ ಐಕಳ, ನಿಕಟಪೂರ್ವಾಧ್ಯಕ್ಷ ಜಯರಾಮ ಪೂಂಜ, ಇಂಟರಾಕ್ಟ್ ಸಭಾಪತಿ ಹೆರಿಕ್ ಪಾಯಸ್, ರೋಟರಾಕ್ಟ್ ಅಧ್ಯಕ್ಷ ರಾಜೇಶ್ ಕೆಂಚನಕೆರೆ ಉಪಸ್ಥಿತರಿದ್ದರು. ಶಿಮಂತೂರು ಶ್ರೀ ಶಾರದಾ ಪ್ರೌಢಶಾಲಾ ವಿದ್ಯಾರ್ಥಿನಿ ಅಪರ್ಣಾ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ದಾಮಸ್ಕಟ್ಟೆಯಲ್ಲಿ ಗೋವಿಂದ ಭಟ್‌ಗೆ ಬೀಳ್ಕೊಡುಗೆ ಹಾಗೂ ಸನ್ಮಾನ

Photo by Sharath Shetty ಕಿನ್ನಿಗೋಳಿ : ಐಕಳ ಪೊಂಪೈ ಕಾಲೇಜಿನಲ್ಲಿ 29 ವರ್ಷ ಹಿಂದಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಕೆ. ಗೋವಿಂದ ಭಟ್‌ರ ಬೀಳ್ಕೊಡುಗೆ...

Close