ಕಿನ್ನಿಗೋಳಿಯಲ್ಲಿ ಅಂಗಡಿಗಳಿಗೆ ಬೆಂಕಿ

News and Pics. from Lionel Pinto, Kinnigoli

ಕಿನ್ನಿಗೋಳಿ : ಕಿನ್ನಿಗೋಳಿಯ ಮಾರ್ಕೆಟ್ ಕಟ್ಟಡದಲ್ಲಿ ಶುಕ್ರವಾರ ತಡರಾತ್ರಿ ಎರಡು ಅಂಗಡಿಗಳು ಆಕಸ್ಮಿಕವಾಗಿ ಬೆಂಕಿಗಾಹುತಿಯಾಗಿವೆ ಸುಮಾರು 2 ಲಕ್ಷ ನಷ್ಡ ಅಂದಾಜಿಸಲಾಗಿದೆ. ರಾತ್ರಿ ಸುಮಾರು 12.50ರ ಹೊತ್ತಿಗೆ ವೆಂಕಪ್ಪನವರ ತರಕಾರಿ ಅಂಗಡಿಗೆ ಬೆಂಕಿ ತಗಲಿ ಬಳಿಕ ಮುನೀರ್‌ರ ಹಣ್ಣು ಹಂಪಲು ಅಂಗಡಿಗೆ ಬೆಂಕಿ ತಗಲಿದೆ. ವಿದ್ಯತ್ ಶಾರ್ಟ್ ಸರ್ಕ್ಯೂಟಿ ನಿಂದಾಗಿ ಬೆಂಕಿ ತಗುಲಿದೆ ಎಂದು ನಂಬಲಾಗಿದ್ದು ಸಮೀಪದ ಅಂಗಡಿಯ ವಾಚ್ ಮ್ಯಾನ್ ಘಟನೆಯನ್ನು ಕಂಡು ಹೊಟೇಲು ಕಾರ್ಮಿಕರ ಮೂಲಕ ಜನರನ್ನು ಒಟ್ಟುಗೂಡಿಸಿದರು. ಅಗ್ನಿಶಾಮಕ ದಳದವರು, ಹಾಗೂ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಬೆಂಕಿ ನಂದಿಸುವಲ್ಲಿ ಸಹಕರಿಸಿದರು. ವೆಂಕಪ್ಪರವರ 20  ಸಾವಿರ ನಗದು ಹಣ ಹಾಗೂ ತರಕಾರಿಗಳು, ಮುನೀರ್ ರವರ ಅಪಾರ ಹಣ್ಣು ಹಂಪಲುಗಳು ನಷ್ಟವಾಗಿದೆ. ಈ ಅಂಗಡಿಗಳು ಕಿನ್ನಿಗೋಳಿ ಪಂಚಾಯತ್‌ಗೆ ಸೇರಿದ್ದು ಮುನೀರ್‌ರವರು ಪ್ರಣಾಮ್ ಸುರತ್ಕಲ್‌ರವರ ಅಂಗಡಿಯನ್ನು ನಡೆಸುತ್ತಿದ್ದರು, ಮುಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

Comments

comments

Leave a Reply

Read previous post:
ಕಟೀಲು ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಸರಕಾರದ ಉದ್ಘಾಟನೆ

ಕಟೀಲು: ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು ಹಾಗೂ ಶ್ರಧ್ಧೆ ಮೂಡಿಸಲು ಶಾಲಾ ಸರಕಾರ ಪೂರಕವೆಂದು ಕಟೀಲು ದೇವಳ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಜಯರಾಮ್ ಪೂಂಜಾ ಹೇಳಿದರು. ಅವರು ಶುಕ್ರವಾರ...

Close