ದಾಮಸ್ಕಟ್ಟೆಯಲ್ಲಿ ಗೋವಿಂದ ಭಟ್‌ಗೆ ಬೀಳ್ಕೊಡುಗೆ ಹಾಗೂ ಸನ್ಮಾನ

Photo by Sharath Shetty
ಕಿನ್ನಿಗೋಳಿ : ಐಕಳ ಪೊಂಪೈ ಕಾಲೇಜಿನಲ್ಲಿ 29 ವರ್ಷ ಹಿಂದಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಕೆ. ಗೋವಿಂದ ಭಟ್‌ರ ಬೀಳ್ಕೊಡುಗೆ ಹಾಗೂ ಸನ್ಮಾನ ಶನಿವಾರ ದಾಮಸ್ಕಟ್ಟೆ ಕಿರೆಂ ಚರ್ಚ್ ಹಾಲ್‌ನಲ್ಲಿ ನಡೆಯಿತು. ಕಾಲೇಜಿನ ಸಂಚಾಲಕ ಚರ್ಚ್ ಧರ್ಮಗುರು ರೆ|ಫಾ| ಪೌಲ್ ಪಿಂಟೋರ ಅಧ್ಯಕ್ಷತೆಯಲ್ಲಿ ನಿವೃತ್ತ ಪ್ರಾಚಾರ್ಯ ರೆ|ಫಾ| ವಲೇರಿಯನ್ ಮೆಂಡೊನ್ಸ ಸನ್ಮಾನ ನೆರವೇರಿಸಿದರು.
ಕಾಲೇಜಿನ ಪ್ರಾಚಾರ್ಯ ಪ್ಯಾಟ್ರಿಕ್ ಮಿನೇಜೆಸ್, ಶಿಕ್ಷಕರ ಪ್ರತಿನಿಧಿ ಮೈಕಲ್ ಪಿಂಟೋ, ಥಾಮಸ್ ಶಿಕ್ಷಕ- ರಕ್ಷಕ ಸಂಘದ ಅದ್ಯಕ್ಷ ವಲೇರಿಯನ್ ಸಿಕ್ವೇರ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ಶೆಟ್ಟಿಗಾರ್ ಉಪಸ್ಥಿತರಿದ್ದರು.
ಪ್ಯಾಟ್ರಿಕ್ ಮಿನೇಜೆಸ್ ಸ್ವಾಗತಿಸಿ, ರಾಧಾಕೃಷ್ಣ ಭಟ್ ಅಭಿನಂದನಾ ಮಾತುಗಳನ್ನಾಡಿದರು. ವಿದ್ಯಾರ್ಥಿಗಳ ಪರವಾಗಿ ಸೌಮ್ಯ, ಚಿತ್ರಲೇಖ, ಮಾತನಾಡಿದರು. ಜಗದೀಶ್ ಹೊಳ್ಳ ವಂದಿಸಿ, ವಿಶ್ವಿಥ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಕಿನ್ನಿಗೋಳಿಯಲ್ಲಿ ಅಂಗಡಿಗಳಿಗೆ ಬೆಂಕಿ

News and Pics. from Lionel Pinto, Kinnigoli ಕಿನ್ನಿಗೋಳಿ : ಕಿನ್ನಿಗೋಳಿಯ ಮಾರ್ಕೆಟ್ ಕಟ್ಟಡದಲ್ಲಿ ಶುಕ್ರವಾರ ತಡರಾತ್ರಿ ಎರಡು ಅಂಗಡಿಗಳು ಆಕಸ್ಮಿಕವಾಗಿ ಬೆಂಕಿಗಾಹುತಿಯಾಗಿವೆ ಸುಮಾರು 2...

Close