ಭ್ರಾಮರೀ ಮಹಿಳಾ ಸಮಾಜದ ವತಿಯಿಂದ ಆಟಿದ ಕೂಟ

ಕಿನ್ನಿಗೋಳಿ: ಹಿಂದಿನ ಜೀವನ ಪದ್ಧತಿಗಳನ್ನು ನಾವು ಈಗ ಹೇಗೆ ಆಚರಿಸಿಕೊಂಡು ಬರುತ್ತಿದ್ದೇವೆಯೋ ಹಾಗೆ ಮುಂದಿನ ಪೀಳಿಗೆಗೆ ನಮ್ಮ ಜೀವನ ಪದ್ಧತಿಯನ್ನು ತಿಳಿಸಿಕೊಡುವ ಕಾರ್ಯಕ್ರಮ ಆಗಬೇಕಾಗಿದೆ ಎಂದು ಕಿಲ್ಪಾಡಿ ಎಂಸಿಟಿ ಶಾಲೆಯ ಮುಖ್ಯ ಶಿಕ್ಷಕಿ ಶಾಂತಾ ಶೇಖರ ಶೆಟ್ಟಿಗಾರ್‌ರವರು ಹೇಳಿದರು. ಅವರು ಭ್ರಾಮರೀ ಮಹಿಳಾ ಸಮಾಜ ಮೆನ್ನಬೆಟ್ಟು ಇದರ ವತಿಯಿಂದ ಯುಗಪುರುಷ ಸಭಾಭವನದಲ್ಲಿ ಜರಗಿದ ಆಟಿದ ಕೂಟ ಕಾರ್ಯಕ್ರಮದಲ್ಲಿ ಆಟಿ ತಿಂಗಳ ಮಹತ್ವದ ಬಗ್ಗೆ ಮಾತಾಡಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪರು ಕಾರ್ಯಕ್ರಮವನ್ನು ಉದ್ಘಾಟಿಸಿ ಇಂತಹ ಕಾರ್ಯಕ್ರಮಗಳನ್ನು ಜರಗಿಸುವುದರಿಂದ ಹಿರಿಯರು ಆಚರಿಸಿಕೊಂಡು ಬರುತ್ತಿರುವ ಪದ್ಧತಿಗಳು ಇಂದಿಗೂ ಜೀವಂತವಾಗಿವೆ ಎಂದರು. ಮುಖ್ಯ ಅತಿಥಿಯಾಗಿ ಮೆನ್ನಬೆಟ್ಟು ಪಂಚಾಯತಿನ ಅಧ್ಯಕ್ಷರಾದ ಶೈಲಾ ಶೆಟ್ಟಿಯವರು ಉಪಸ್ಥಿತರಿದ್ದರು. ಭ್ರಾಮರೀ ಮಹಿಳಾ ಸಮಾಜದ ಅಧ್ಯಕ್ಷೆ ಮೀನಾಕ್ಷಿ ಡಿ.ಕುಂದರ್ ಸಂಘದ ಬೆಳವಣಿಗೆಯ ಬಗ್ಗೆ ಮಾತಾಡಿದರು. ಉಪಾಧ್ಯಕ್ಷೆ ಸುನಂದ ಜೆ.ಕರ್ಕೇರ ಸ್ವಾಗತಿಸಿದರು. ಸರೋಜಿನಿ ಪ್ರಾರ್ಥಿಸಿ, ರೇವತಿ ಪುರುಷೋತ್ತಮ್ ಕಾರ್ಯಕ್ರಮ ನಿರ್ವಹಿಸಿ, ಅನುಷಾ ಕರ್ಕೇರ ವಂದಿಸಿದರು.

Comments

comments

Leave a Reply

Read previous post:
ಮುಲ್ಕಿ ಬಂಟರ ಮಹಿಳಾ ವೇದಿಕೆಯಿಂದ ಆಟಿಡೊಂಜಿ ದಿನ

ಕಿನ್ನಿಗೋಳಿ : ನಮ್ಮ ಸಂಸ್ಕೃತಿ ಆಚರಣೆಗಳ ಪರಿಚಯ ಎಳೆಯ ಮಕ್ಕಳಿಗೆ ಅಗತ್ಯವಾಗಿ ಆಗಬೇಕಾಗಿದ್ದು, ಈ ಬಗ್ಗೆ ಹಿರಿಯ ತಲೆಮಾರಿನವರು ಯೋಚಿಸಬೇಕಾಗಿದೆ ಎಂದು ಆಳ್ವಾಸ್ ನ ಕನ್ನಡ ಉಪನ್ಯಾಸಕಿ...

Close