ಮೂರುಕಾವೇರಿಯಲ್ಲಿ ನಿತ್ಯ ಟ್ರಾಫಿಕ್ ಜಾಮ್

News by Sharath Shetty

ಮೂರುಕಾವೇರಿ: ಐಕಳ, ಮೆನ್ನಬೆಟ್ಟು ಹಾಗೂ ಕಿನ್ನಿಗೋಳಿ ಗ್ರಾಮ ಪಂಚಾಯತ್‌ಗಳ ಸಂಗಮ ಸ್ಥಳವೆನಿಸಿರುವ ಮೂರುಕಾವೇರಿಯಲ್ಲಿ ವಾಹನಗಳ ಸಂಚಾರ ಅವ್ಯವಸ್ಥಿತವಾಗಿದ್ದು, ಇಲ್ಲಿ ಸರ್ಕಲ್‌ನ ಅವಶ್ಯಕತೆ ಇದೆ ಎಂದು ಬಲವಾದ ಕೂಗು ಕೇಳಿ ಬರುತ್ತಿದೆ. ಮೂಡಬಿದ್ರೆ, ಕಟೀಲು, ಬೆಳ್ಮಣ್, ಬಳ್ಕುಂಜೆ, ಕಿನ್ನಿಗೋಳಿ, ಮುಲ್ಕಿ ಕಡೆಗೆ ದಿನನಿತ್ಯ ಸಂಚರಿಸುತ್ತಿರುವ ಸಾವಿರಾರು ವಾಹನಗಳು ಏಕಕಾಲದಲ್ಲಿ ತದ್ವಿರುದ್ಧವಾಗಿ ಒಂದಾಗುವಾಗ ಇಲ್ಲಿ ಪಾದಾಚಾರಿಗಳಿಗೆ, ವಿದ್ಯಾರ್ಥಿಗಳಿಗೆ ಅತ್ತಿತ್ತ ನಡೆದಾಡಲು ತೊಂದರೆಯಾಗುವಂತಾಗಿದೆ. ಕಟೀಲು, ಐಕಳ, ಮೂಡಬಿದ್ರೆ, ಕಿನ್ನಿಗೋಳಿ ಪರಿಸರದ ಸಾವಿರಾರು ವಿದ್ಯಾರ್ಥಿಗಳು ಬೆಳಿಗ್ಗೆ ಮತ್ತು ಸಂಜೆ ಇಲ್ಲಿ ಬಸ್ಸಿಗಾಗಿ ಪರದಾಡಬೇಕಾದ ಪರಿಸ್ಥಿತಿ ದಿನನಿತ್ಯ ಒದಗಿ ಬರುತ್ತಿದೆ. ಸ್ಪಂದಿಸಬೇಕಾದ ಪೊಲೀಸ್ ಇಲಾಖೆ ಹಾಗೂ ಸಾರಿಗೆ ಇಲಾಖೆ ಈ ಬಗ್ಗೆ ಗಮನ ಕೊಡುತ್ತಿಲ್ಲ. ಇಲ್ಲಿ ಪ್ರಯಾಣಿಕರ ಸೌಕರ್ಯಕ್ಕಾಗಿ ಶೌಚಾಲಯವೂ ಇಲ್ಲದಿರುವುದು ಸಂಬಂಧ ಪಟ್ಟ ಮೂರು ಪಂಚಾಯತ್ ಗಳಿಗೆ ಇನ್ನೂ ಗಮನಕ್ಕೆ ಬಾರದಿರುವುದು ವಿಪರ‍್ಯಾಸವೇ ಸರಿ. ಬದಲಾಗುತ್ತಿರುವ ಕಾಲದಲ್ಲಿ ವ್ಯವಸ್ಥೆಗೆ ಹೊಂದಿಕೊಂಡು ಹೋಗುವ ವ್ಯವದಾನವನ್ನು ತೋರಿದಲ್ಲಿ ಈ ಸಮಸ್ಯಗಳಿಗೆ ಉತ್ತರವನ್ನು ಕಂಡುಹುಡುಕ ಬಹುದಾಗಿದೆ. ಇತಿಹಾಸ ಪ್ರಸಿದ್ಧ ಕಟೀಲು ದೇವಳ, ಬಜ್ಪೆಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ಸಂಪರ್ಕ ರಸ್ತೆಯಾಗಿರುವ ಇಲ್ಲಿ ದಿನನಿತ್ಯವು ಟ್ರಾಫಿಕ್ ಜಾಮ್ ನಡೆಯುತ್ತಿದ್ದು ಈ ಬಗ್ಗೆ ತಕ್ಷಣ ಸಂಬಂಧ ಪಟ್ಟವರು ಸ್ಪಂದಿಸ ಬೇಕಾಗಿದೆ.

Comments

comments

Leave a Reply

Read previous post:
ಕಟೀಲಿನಲ್ಲಿ ಪ್ಲಾಸ್ಟಿಕ್ ಸೌಧ ಉದ್ಘಾಟನೆ

Photo by Mithuna Kodethoor ಕಟೀಲು : ಮೆನ್ನಬೆಟ್ಟು ಗ್ರಾ.ಪಂ.ವ್ಯಾಪ್ತಿಯ ಕಟೀಲು ಪ್ರಥಮ ದರ್ಜೆ ಕಾಲೇಜು ಬಳಿ ಕಟೀಲ್ ಸ್ಪೋರ್ಟ್ಸ್ ಮತ್ತು ಗೇಮ್ಸ್ ಕ್ಲಬ್ ವತಿಯಿಂದ ನಿರ್ಮಿಸಲಾದ...

Close