ಮುಲ್ಕಿ ಬಂಟರ ಮಹಿಳಾ ವೇದಿಕೆಯಿಂದ ಆಟಿಡೊಂಜಿ ದಿನ

ಕಿನ್ನಿಗೋಳಿ : ನಮ್ಮ ಸಂಸ್ಕೃತಿ ಆಚರಣೆಗಳ ಪರಿಚಯ ಎಳೆಯ ಮಕ್ಕಳಿಗೆ ಅಗತ್ಯವಾಗಿ ಆಗಬೇಕಾಗಿದ್ದು, ಈ ಬಗ್ಗೆ ಹಿರಿಯ ತಲೆಮಾರಿನವರು ಯೋಚಿಸಬೇಕಾಗಿದೆ ಎಂದು ಆಳ್ವಾಸ್ ನ ಕನ್ನಡ ಉಪನ್ಯಾಸಕಿ ಸುಧಾರಾಣಿ ಶೆಟ್ಟಿ ಹೇಳಿದರು. ಅವರು ರವಿವಾರ ಕೆಂಚನಕೆರೆ ಕುಬೆವೂರಿನ ದೊಡ್ಡಮನೆಯಲ್ಲಿ ಮುಲ್ಕಿ ಬಂಟರ ಮಹಿಳಾ ವೇದಿಕೆಯಿಂದ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಟಿ ತಿಂಗಳ ಆಚರಣೆ, ತಿಂಡಿ ತಿನಿಸು, ನಡೆ-ನುಡಿ, ಗ್ರಾಮೀಣ ಪರಿಕರಗಳ ಕುರಿತು ಇತ್ತೀಚಿನವರಿಗೆ ಹೆಚ್ಚಿನ ಮಾಹಿತಿ ಇಲ್ಲದಿರುವುದು ದುರದೃಷ್ಟಕರವೆಂದ ಅವರು ವಿವಿಧ ಸಂಘ ಸಂಸ್ಥೆಗಳು ನಡೆಸುತ್ತಿರುವ ಇಂತಹ ಕಾರ್ಯಕ್ರಮಗಳು ಪರಿಣಾಮಕಾರಿಯಾಗ ಬಲ್ಲವು ಎಂದರು. ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದು, ಕಾರ್ಯದರ್ಶಿ ರವಿರಾಜ್ ಶೆಟ್ಟಿ, ಸಾವಿತ್ರಿ ಎಸ್. ಶೆಟ್ಟಿ, ದೊಡ್ಡ ಮನೆಯ ಮುರಳೀಧರ್ ಭಂಡಾರಿ ಉಪಸ್ಥಿತರಿದ್ದರು. ಮಹಿಳಾ ವೇದಿಕೆಯ ಅಧ್ಯಕ್ಷೆ ಶಮೀನ ಜಿ. ಆಳ್ವ ಸ್ವಾಗತಿಸಿ,ಕಾಮಿನಿ ಜಿ. ಶೆಟ್ಟಿ ವಂದಿಸಿದರು, ರೋಹಿಣಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಮುಲ್ಕಿ ಬಂಟರ ಸಂಘದ ವ್ಯಾಪ್ತಿಯ ಬಂಟ ಮಹಿಳೆಯರು ತಯಾರಿಸಿದ ಸುಮಾರು 70 ಬಗೆಯ ಆಟಿ ತಿಂಗಳ ವಿಶೇಷ ತಿಂಡಿ ತಿನಿಸುಗಳನ್ನು ಸವಿಯಲಾಯಿತು.

Comments

comments

Leave a Reply

Read previous post:
ಮೂರುಕಾವೇರಿಯಲ್ಲಿ ನಿತ್ಯ ಟ್ರಾಫಿಕ್ ಜಾಮ್

News by Sharath Shetty ಮೂರುಕಾವೇರಿ: ಐಕಳ, ಮೆನ್ನಬೆಟ್ಟು ಹಾಗೂ ಕಿನ್ನಿಗೋಳಿ ಗ್ರಾಮ ಪಂಚಾಯತ್‌ಗಳ ಸಂಗಮ ಸ್ಥಳವೆನಿಸಿರುವ ಮೂರುಕಾವೇರಿಯಲ್ಲಿ ವಾಹನಗಳ ಸಂಚಾರ ಅವ್ಯವಸ್ಥಿತವಾಗಿದ್ದು, ಇಲ್ಲಿ ಸರ್ಕಲ್‌ನ ಅವಶ್ಯಕತೆ...

Close