ಲಂಡನ್ ಒಲಿಂಪಿಕ್ಸ್ 2012 ಶೂಟಿಂಗ್-ಭಾರತಕ್ಕೆ ಪ್ರಥಮ ಪದಕ

ಲಂಡನ್ ಒಲಿಂಪಿಕ್ಸ್ 2012 ರಲ್ಲಿ ಭಾರತದ ಪ್ರಥಮ ಪದಕ ಶೂಟಿಂಗ್ 10 ಮೀ ಏರ್ ರೈಫಲ್ ಫೈನಲ್ ಸ್ಪರ್ಧೆಯಲ್ಲಿ ಭಾರತದ ಗಗನ್ ನಾರಂಗ್ ಸೋಮವಾರ ಪಡೆದುಕೊಂಡಿದ್ದಾರೆ. ಗಗನ್ ನಾರಂಗ್ 701.1 ಅಂಕಗಳೊಂದಿಗೆ ಕಂಚಿನ ಪದಕ ಗೆದ್ದಿದ್ದಾರೆ. ಆದರೆ. ಇನ್ನೂ ಎರಡು ಪದಕ ಗೆಲ್ಲುವ ಭರವಸೆ ಇದೆ. 50 ಮೀ ಶೂಟಿಂಗ್ ವಿಭಾಗದಲ್ಲಿ ಎರಡು ಸ್ಪರ್ಧೆಗಳಲ್ಲಿ ಗಗನ್ ನಾರಂಗ್ ಸ್ಪರ್ಧಿಸುತ್ತಿದ್ದಾರೆ.
ಬೀಜಿಂಗ್ ಒಲಿಂಪಿಕ್ಸ್ 2008 ರಲ್ಲಿ ಅದ್ಭುತ ಪ್ರದರ್ಶನ ನೀಡಿದ ಅಭಿನವ್ ಬಿಂದ್ರಾ 16ನೇ ಸ್ಥಾನ ಗಳಿಸಿ ಪದಕ ಪಡೆಯುವಲ್ಲಿ ವಿಫಲರಾದರು.
ರೋಮಾನಿಯಾದ ಅಲಿನ್ ಜಾರ್ಜ್ ಮೊಲ್ಡೊವೆನು 702.1 ಅಂಕಗಳೊಂದಿಗೆ ಚಿನ್ನದ ಪದಕ ಗೆದ್ದರೆ, ಇಟಾಲಿಯನ್ ನಿಕ್ಕೊಲೊ ಕಂಪ್ರಿಯಾನಿ 701.5 ಅಂಕಗಳೊಂದಿಗೆ ಬೆಳ್ಳಿ ಪದಕ ಗೆದ್ದರು.
2010 ರಲ್ಲಿ ಎರಡು ಬಾರಿ ವಿಶ್ವ ಶೂಟಿಂಗ್ ಚಾಂಪಿಯನ್ ಆಗಿ ದಾಖಲೆ ನಿರ್ಮಿಸಿದ್ದ ಗಗನ್ ನಾರಂಗ್ ಅವರು ದೆಹಲಿ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ೪ ಚಿನ್ನದ ಪದಕ, ಗುಂಗ್ಜಾವೊ ಏಷ್ಯನ್ ಗೇಮ್ಸ್ 2010ರಲ್ಲಿ ಎರಡು ಬೆಳ್ಳಿ ಪದಕ ಗೆದ್ದಿರುವ ಗಗನ್ 2006ರ ಮೆಲ್ಬೋರ್ನ್ ಕಾಮನ್ ವೆಲ್ತ್ ಗೇಮ್ಸ್ ನಲ್ಲೂ 4 ಚಿನ್ನದ ಪದಕ ಗೆದ್ದಿದ್ದರು.

Comments

comments

Leave a Reply

Read previous post:
ಮುಲ್ಕಿ ಬಿಲ್ಲವ ಸಂಘದಲ್ಲಿ ತುಳು ಚಿತ್ರೋತ್ಸವ

Photo by Bhagyavan Sanil ಮುಲ್ಕಿ :ಗ್ರಾಮ ಮಟ್ಟದಲ್ಲಿ ತುಳು ಚಿತ್ರಗಳನ್ನು ಜನರಿಗೆ ಪರಿಚಯಿಸಿದಲ್ಲಿ ತುಳು ಚಿತ್ರಗಳಿಗೆ ಹೆಚ್ಚಿನ ಅಭಿಮಾನ ಮೂಡಲು ಸಾಧ್ಯ ಎಂದು ರಂಗಕರ್ಮಿ ತಮ್ಮಲಕ್ಷ್ಮಣ...

Close