ಮುಲ್ಕಿ ಬಿಲ್ಲವ ಸಂಘದಲ್ಲಿ ತುಳು ಚಿತ್ರೋತ್ಸವ

Photo by Bhagyavan Sanil

ಮುಲ್ಕಿ :ಗ್ರಾಮ ಮಟ್ಟದಲ್ಲಿ ತುಳು ಚಿತ್ರಗಳನ್ನು ಜನರಿಗೆ ಪರಿಚಯಿಸಿದಲ್ಲಿ ತುಳು ಚಿತ್ರಗಳಿಗೆ ಹೆಚ್ಚಿನ ಅಭಿಮಾನ ಮೂಡಲು ಸಾಧ್ಯ ಎಂದು ರಂಗಕರ್ಮಿ ತಮ್ಮಲಕ್ಷ್ಮಣ ಹೇಳಿದರು. ಸೋಮವಾರ ಸಂಜೆ ಮುಲ್ಕಿ ಬಿಲ್ಲವ ಸಂಘದಲ್ಲಿ ಯುವವಾಹಿನಿ ಮುಲ್ಕಿ ಘಟಕದ ದಶಮಾನೋತ್ಸವ ಸಂದರ್ಭ 10 ದಿನಗಳ ಕಾಲ ನಡೆಯಲಿರುವ ತುಳು ಚಿತ್ರೋತ್ಸವ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಹಾಸ್ಯಪ್ರಧಾನ ಭೂಮಿಕೆಯಲ್ಲಿ ತುಳು ರಂಗಭೂಮಿ ಮತ್ತು ಚಲನಚಿತ್ರಗಳು ಜನಮನ್ನಣೆ ಪಡೆಯುತ್ತಿರುವುದು ಬಹು ಸಂತಸ ತಂದಿದೆ ಎಂದ ಅವರು ತುಳು ಚಿತ್ರಗಳನ್ನು ಜನರಿಗೆ ತಮ್ಮ ದಶಮಾನೋತ್ಸವದ ಹೆಸರಿನಲ್ಲಿ ಪರಿಚಯಿಸಲು ಶ್ರಮಿಸುತ್ತಿರುವ ಯುವವಾಹಿನಿಯ ಕಾರ್ಯ ಶ್ಲಾಘನೀಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಡುಬೆಳ್ಳೆ ಶ್ರೀನಾರಾಯಣಗುರು ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ, ಮುಲ್ಕಿ ರೋಟರಿ ಅಧ್ಯಕ್ಷ ಜೆ.ಸಿ.ಸಾಲ್ಯಾನ್ ವಹಿಸಿದ್ದರು.
ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಕೆ.ರಾಘು ಸುವರ್ಣ, ಮುಲ್ಕಿ ಯುವವಾಹಿನಿ ಅಧ್ಯಕ್ಷ ರಾಮಚಂದ್ರ.ಟಿ.ಸಾಲ್ಯಾನ್, ಪೂರ್ವಾಧ್ಯಕ್ಷ ಚಂದ್ರಶೇಖರ ಸುವರ್ಣ, ಕಾರ್ಯಕ್ರಮ ನಿರ್ದೇಶಕರಾದ ಪ್ರಜೋಶ್ ಸಾಲ್ಯಾನ್ ಮತ್ತು ನಿತ್ಯಾನಂದ ಅಮೀನ್ ಹೆಜ್ಮಾಡಿ ಉಪಸ್ಥಿತರಿದ್ದರು. ರಂಗಕರ್ಮಿ ನರೇಂದ್ರ ಕೆರೆಕಾಡು ಸ್ವಾಗತಿಸಿದರು. ರಾಮಚಂದ್ರ ವಂದಿಸಿದರು.

Comments

comments

Leave a Reply

Read previous post:
ಭ್ರಾಮರೀ ಮಹಿಳಾ ಸಮಾಜದ ವತಿಯಿಂದ ಆಟಿದ ಕೂಟ

ಕಿನ್ನಿಗೋಳಿ: ಹಿಂದಿನ ಜೀವನ ಪದ್ಧತಿಗಳನ್ನು ನಾವು ಈಗ ಹೇಗೆ ಆಚರಿಸಿಕೊಂಡು ಬರುತ್ತಿದ್ದೇವೆಯೋ ಹಾಗೆ ಮುಂದಿನ ಪೀಳಿಗೆಗೆ ನಮ್ಮ ಜೀವನ ಪದ್ಧತಿಯನ್ನು ತಿಳಿಸಿಕೊಡುವ ಕಾರ್ಯಕ್ರಮ ಆಗಬೇಕಾಗಿದೆ ಎಂದು ಕಿಲ್ಪಾಡಿ...

Close