ಕಡಂದಲೆ ಜ್ಯೂನಿಯರ್ ಜೆ.ಸಿ. ಪದಗ್ರಹಣ

ಮುಂಡ್ಕೂರು :- ಭಾರ್ಗವ್ ಜೆ.ಸಿ.ಸ್ ಮುಂಡ್ಕೂರು ಆಶ್ರಯದಲ್ಲಿ ಜೆ.ಸಿ.ಸ್ ಅಧ್ಯಕ್ಷ ಸುರೇಂದ್ರ ಭಟ್ ಅಧ್ಯಕ್ಷತೆಯಲ್ಲಿ ಜ್ಯೂನಿಯರ್ ಜೆ.ಸಿ.ವಿಂಗ್ ಆಫ್ ಸುಬ್ರಮಣ್ಯ ಸ್ವಾಮಿ ಪ್ರೌಢಶಾಲೆ ಕಡಂದಲೆ ಇಲ್ಲಿನ ವಿದ್ಯಾರ್ಥಿಗಳ2012-13ರ ಸಾಲಿನ ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಪದಗ್ರಹಣ ನಡೆಸಲಾಯಿತು. ಜೆ.ಸಿ.ಸ್ ರಾಜ್ಯ ತರಭೇತಿದಾರರಾದ ಪ್ರಭಾಕರ್ ಶೆಟ್ಟಿಯವರು ನೂತನ ಅಧ್ಯಕ್ಷ ವಿಶಾಲ್ ಪಿಂಟೋ ಮತ್ತು ಅವರ ಪದಾಧಿಕಾರ ತಂಡಕ್ಕೆ ಪ್ರಮಾಣ ವಚನ ಬೋಧಿಸಿ, ತರಭೇತಿ ಕಾರ್ಯಕ್ರಮ ನಡೆಸಿ ಕೊಟ್ಟರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಶಂಕರ ನಾರಾಯಣ ರಾವ್ ಅತಿಥಿಗಳಾಗಿ ಜೆ.ಸಿ.ಎಚ್.ಜಿ.ಎಫ್ ಉಮೇಶ್ ಕಾಮತ್, ರಂಗ ಕಲಾವಿದ ಸುಧಾಕರ ಸಾಲ್ಯಾನ್ ಹಾಗೂ ಶಾಲಾ ಶಿಕ್ಷಕ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಜೆ.ಸಿ.ಸ್ ಭಾರ್ಗವದ ಶಾಶ್ವತ ಕೊಡುಗೆಯಾಗಿ ಬಡ ವಿದ್ಯಾರ್ಥಿಗೆ ವಿದ್ಯಾಭ್ಯಾಸದ ಅನುಕೂಲಕ್ಕೆ ಚಾರ್ಜರ್ ಲೈಟ್ ನೀಡಲಾಯಿತು. ನೂತನ ಕಾರ್ಯದರ್ಶಿ ಕುಮಾರಿ ಪ್ರತೀಕ್ಷಾ ವಂದಿಸಿದರು.

Comments

comments

Leave a Reply

Read previous post:
ಕಿನ್ನಿಗೋಳಿಯಲ್ಲಿ ರಾಘವೇಂದ್ರ ಸ್ವಾಮಿ – ಆರಾಧನಾ ಮಹೋತ್ಸವ

ಕಿನ್ನಿಗೋಳಿ : ಇಲ್ಲಿಯ ಯುಗಪುರುಷ ವಲಯದ ಶ್ರೀ ಮದ್ಗುರು ರಾಘವೇಂದ್ರ ಸ್ವಾಮಿ ಸನ್ನಿಧಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವು ಇದೇ ಆಗಸ್ಟ್ ತಿಂಗಳ 3,4 ಹಾಗೂ...

Close