ಕಿನ್ನಿಗೋಳಿಯಲ್ಲಿ ರಾಘವೇಂದ್ರ ಸ್ವಾಮಿ – ಆರಾಧನಾ ಮಹೋತ್ಸವ

ಕಿನ್ನಿಗೋಳಿ : ಇಲ್ಲಿಯ ಯುಗಪುರುಷ ವಲಯದ ಶ್ರೀ ಮದ್ಗುರು ರಾಘವೇಂದ್ರ ಸ್ವಾಮಿ ಸನ್ನಿಧಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವು ಇದೇ ಆಗಸ್ಟ್ ತಿಂಗಳ 3,4 ಹಾಗೂ 5ರಂದು ಜರಗಲಿದೆ.

ಪ್ರತಿದಿನ ಪ್ರಾತಃ, ಮಧ್ಯಾಹ್ನ, ಸಾಯಂ. ತ್ರಿಕಾಲ ಪೂಜೆ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ಜರಗಲಿದೆ. ಅಂತೆಯೇ ತಾ.3ರಂದು ಬೆಳಿಗ್ಗೆ 10ರಿಂದ ವಾಗ್ದೇವಿ ಭಜನಾ ಮಂಡಳಿ, ಕಿನ್ನಿಗೋಳಿ ಇವರಿಂದ ಭಜನಾ ಕಾರ್ರ‍ಕ್ರಮ, ಸಾಯಂ.5ರಿಂದ ಧಾರ್ಮಿಕ ಸಭೆ, ತಾ.4ರಂದು ಬೆಳಿಗ್ಗೆ 10ರಿಂದ ಶ್ರೀ ಭ್ರಾಮರೀ ಭಜನಾ ಮಂಡಳಿ (ರಿ)ಕಟೀಲು ಇವರಿಂದ, ಸಾಯಂ.5ರಿಂದ ಶ್ರೀ ವಿಶ್ವನಾಥ ಭಜನಾ ಮಂಡಳಿ ಪುನರೂರು ಇವರಿಂದ ಭಜನಾ ಕಾರ್ಯಕ್ರಮ, ತಾ.5ರಂದು ಬೆಳಿಗ್ಗೆ ಭ್ರಾಮರೀ ಮಹಿಳಾ ಸಮಾಜ ಮೆನ್ನಬೆಟ್ಟು ಇವರಿಂದ ಭಜನಾ ಕಾರ್ಯಕ್ರಮ, ಸಾಯಂ.ಗಂಟೆ 5 ರಿಂದ ಕಟೀಲು ಲಿಂಗಪ್ಪ ಶೇರಿಗಾರ ಮತ್ತು ಬಳಗದವರಿಂದ ನಾಗಸ್ವರವಾದನ ಮತ್ತು ಇಪ್ಪತ್ತೊಂಭತ್ತನೇ ವರ್ಷದ ಸಾರ್ವಜನಿಕ ಸಾಮೂಹಿಕ ಅಷ್ಟೋತ್ತರ ಶತ ಶ್ರೀ ಸತ್ಯನಾರಾಯಣ ಪೂಜಾ ಮಹೋತ್ಸವವು ಜರಗಲಿದೆಯೆಂದು ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪರು ತಿಳಿಸಿದ್ದಾರೆ.

Comments

comments

Leave a Reply

Read previous post:
ಲಂಡನ್ ಒಲಿಂಪಿಕ್ಸ್ 2012 ಶೂಟಿಂಗ್-ಭಾರತಕ್ಕೆ ಪ್ರಥಮ ಪದಕ

ಲಂಡನ್ ಒಲಿಂಪಿಕ್ಸ್ 2012 ರಲ್ಲಿ ಭಾರತದ ಪ್ರಥಮ ಪದಕ ಶೂಟಿಂಗ್ 10 ಮೀ ಏರ್ ರೈಫಲ್ ಫೈನಲ್ ಸ್ಪರ್ಧೆಯಲ್ಲಿ ಭಾರತದ ಗಗನ್ ನಾರಂಗ್ ಸೋಮವಾರ ಪಡೆದುಕೊಂಡಿದ್ದಾರೆ. ಗಗನ್...

Close