ಸಾಕ್ಷಿಯ ಕರೆಗೆ ಸ್ಪಂದಿಸುವವರು ಬೇಕಾಗಿದ್ದಾರೆ

ಮುಲ್ಕಿ : ಅರಳು ಕಂಗಳಿಂದ ನೋಡುತ್ತಾ ಅಪರಿಚಿತ ಮುಖ ಕಂಡರೂ ನಗುವ ಕೇವಲ 8 ತಿಂಗಳ ಸಾಕ್ಷಿಗೆ ಹೃದಯದಲ್ಲಿರುವ ತೂತಿನ ಸಮಸ್ಯೆಯಿಂದ ಸ್ವಾಸ ಬಿಡಲು ಸಾಧ್ಯವಾಗದೆ ಚಡಪಡಿಸುತ್ತಿದ್ದಾಳೆ.
ಮುಲ್ಕಿ ಬಳಿಯ ಮಾನಂಪಾಡಿಯ ಕೆಂಪುಗುಡ್ಡೆಯ ಶ್ರೀದೇವಿ ಕೃಪಾ ನಿವಾಸಿಗಳಾಗಿರುವ ಮಾಧವ ಅಮೀನ್ ಬೇಬಿ ದಂಪತಿಗಳ ಪುತ್ರಿ ಸಾಕ್ಷಿ. ಆರ್ಥಿಕ ಸಂಕಷ್ಟದಲ್ಲಿರುವ ಮಾಧವ ಅಮೀನ್ ಕಂಪೆನಿಯೊಂದರಲ್ಲಿ ಕಾವಲುಗಾರ ವೃತ್ತಿ ನಿರ್ವಹಿಸುತ್ತಿದ್ದಾರೆ ಆನಾರೋಗ್ಯ ಮತ್ತು ಮಧುಮೇಹ ಸಮಸ್ಯೆಗಳಿಂದ ಅವರಿಗೆ ಬೇರೆ ವೃತ್ತಿ ನಿರ್ವಹಿಸಲಾಗದ ಕಷ್ಟವಿದೆ ಪತ್ನಿ ಬೇಬಿ ಬೀಡಿಕಟ್ಟಿ ಸಂಸಾರದ ನೊಗಕ್ಕೆ ಹೆಗಲುಕೊಡುತ್ತಿದ್ದಾರೆ. ಹುಟ್ಟದಾಗ ಸರಿಯಾಗಿದ್ದ ಸಾಕ್ಷಿಗೆ ಏಕಾಏಕಿ ಏದುಸಿರು ಮತ್ತು ಉಸಿರಾಟದ ಸಮಸ್ಯೆ ಕಂಡುಬಂದು ಸ್ಥಳಿಯ ಮಕ್ಕಳ ವೈದ್ಯರನ್ನು ಸಂಪರ್ಕಿಸಿದಾಗ ಹೃದಯದಲ್ಲಿ ತೂತು ಇರುವ ಸಮಸ್ಯೆ ಕಂಡುಬಂದಿತು.ರಿಕ್ಷಾ ಚಾಲಕರಾಗಿರು ಮಗುವಿನ ಮಾವ ಹರೀಶ್ ರವರ ಸಹಕಾರದಿಂದ ಆಸ್ಪತ್ರೆಗೆ ದಾಖಲಾಗಿ ಅಲ್ಲಿ ಕೂಲಂಕುಷ ತನಿಖೆಯಿಂದ ಹೃದಯದಲ್ಲಿನ ತೂತು ದೃಡಪಟ್ಟಿದೆ ಮಗುವನ್ನು ಉಳಿಸಲು ಅಪರೇಶನ್ ಅಗತ್ಯವಿದೆ ಹಾಗೂ ಸುಮಾರು 3 ಲಕ್ಷರೂ ವೆಚ್ಚವಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಹರೀಶ್ ತಿಳಿಸಿದ್ದಾರೆ. ಅನಾರೋಗ್ಯದಿಂದ ದಿನ ನಡೆಸಲು ಸಂಕಷ್ಟ ಪಡುತ್ತಿರುವ ಈ ಕುಟುಂಬ ಸಾಕ್ಷಿಯ ಚಿಕಿತ್ಸೆಗೆ ಹಣ ಭರಿಸಲಾಗದೆ ದಾನಿಗಳ ನೆರವನ್ನು ಎದುರು ನೋಡುತ್ತಿದೆ. ಸಹಾಯ ಮಾಡಲಿಚ್ಚಿಸುವ ದಾನಿಗಳು ಮಗುವಿನ ತಾಯಿ ಬೇಬಿಯವರ ಸಿಂಡಿಕೇಟ್ ಬ್ಯಾಂಕ್ ಎಕೌಂಟ್ ನಂ: 01172200050406 ಕಳುಹಿಸಬೇಕಾಗಿ ವಿನಂತಿಸಿದೆ ಹೆಚ್ಚಿನ ಮಾಹಿತಿಗಾಗಿ ಮೊ: 9611587295 ಸಂಪರ್ಕಿಸಬಹುದು.

 

Comments

comments

Leave a Reply

Read previous post:
Bethany Sr. Loyola (78) Dies in Road Accident in Bangalore

News By Simon Lasrado Bangalore Sr.Loyala BS 78 yrs(Martha Helen Serrao)Sr. Loyola (78) passed away in a road accident here on...

Close