ಡಾ.ಸಂಜೀವನಾಥ ಐಕಳರಿಗೆ ಮುಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿ

ಮುಲ್ಕಿ : ಬಂಟರ ಸಂಘ ಮುಲ್ಕಿ ಮತ್ತು ಸುಂದರರಾಮ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೀಡುವ 2012ರ ಮುಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಮಾಜಿ ಶಾಸಕರಾದ ಡಾ.ಸಂಜೀವನಾಥ ಐಕಳರವರು ಆಯ್ಕೆಯಾಗಿದ್ದಾರೆ.
ಅ.5 ರಂದು ಪುನರೂರು ನಾಗವೀಣಾ ಸಭಾಗೃಹದಲ್ಲಿ ಜರಗಲಿರುವ ಸಂಘದ ವಾರ್ಷಿಕ ಮಹಾಸಭೆ,ವಿದ್ಯಾರ್ಥಿ ವೇತನ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಯು.ಎ.ಇಯ ಅರಬ್ ಗ್ರೂಪ್ ಆಫ್ ಹೋಟೆಲ್ಸ್ ನ ಕಳತ್ತೂರು ಶೇಖರ ಬಾಬು ಶೆಟ್ಟಿ ಇವರು ಪ್ರಧಾನ ಮಾಡಲಿದ್ದಾರೆ. ಪ್ರಶಸ್ತಿಯು ನಗದು, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ ಎಂದು ಪ್ರಶಸ್ತಿ ಆಯ್ಕೆ ಸಮಿತಿಯ ಪರವಾಗಿ ಮುಲ್ಕಿ ಬಂಟರ ಸಂಘದ ಕಾರ್ಯದರ್ಶಿ ರವಿರಾಜ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments

comments

Leave a Reply

Read previous post:
ಸಾಕ್ಷಿಯ ಕರೆಗೆ ಸ್ಪಂದಿಸುವವರು ಬೇಕಾಗಿದ್ದಾರೆ

ಮುಲ್ಕಿ : ಅರಳು ಕಂಗಳಿಂದ ನೋಡುತ್ತಾ ಅಪರಿಚಿತ ಮುಖ ಕಂಡರೂ ನಗುವ ಕೇವಲ 8 ತಿಂಗಳ ಸಾಕ್ಷಿಗೆ ಹೃದಯದಲ್ಲಿರುವ ತೂತಿನ ಸಮಸ್ಯೆಯಿಂದ ಸ್ವಾಸ ಬಿಡಲು ಸಾಧ್ಯವಾಗದೆ ಚಡಪಡಿಸುತ್ತಿದ್ದಾಳೆ. ಮುಲ್ಕಿ ಬಳಿಯ...

Close