ತಜ್ಞ ವೈದ್ಯರಿಂದ ಕಾನ್ಸೆಟ್ಟಾ ಆಸ್ಪತ್ರೆಯಲ್ಲಿ ಪ್ರತಿ ದಿನ ಸೇವೆ ಲಭ್ಯ

ಕಿನ್ನಿಗೋಳಿ: 54 ವರ್ಷಗಳಿಂದ ಜನರಿಗೆ ಉತ್ತಮ ಸೇವೆ ನೀಡುತ್ತಿರುವ ಕಾನ್ಸೆಟ್ಟಾ ಆಸ್ಪತ್ರೆ ಕಿನ್ನಿಗೋಳಿ ಹಾಗೂ ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆ ಮಂಗಳೂರು ಇವರ ಸಹಭಾಗಿತ್ವದಲ್ಲಿ ಹೃದಯ, ಮಕ್ಕಳ, ಮೂಳೆ, ಶಸ್ತ್ರ ಚಿಕಿತ್ಸೆ , ಮನಶಾಸ್ತ್ರ ವಿಭಾಗಗಳ ಪ್ರತಿದಿನ ಸೇವೆ ಆಗಸ್ಟ್ ತಿಂಗಳಿಂದ ಕಿನ್ನಿಗೋಳಿಯಲ್ಲಿ ಪ್ರಾರಂಭವಾಯಿತು.
ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ನಿರ್ದೇಶಕ ಫಾ| ಪ್ಯಾಟ್ರಿಕ್ ರೋಡ್ರಿಗಸ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಸೇವಾ ಮನೋಭಾವನೆಯ ಉತ್ತಮ ಗುಣಮಟ್ಟದ ಚಿಕಿತ್ಸೆ ಗ್ರಾಮೀಣ ಜನರಿಗೆ ಅತ್ಯಗತ್ಯವಿದೆ ಎಂದು ಹೇಳಿದರು.
ಮಂಗಳೂರು ಬೆಥನಿ ಸಂಸ್ಥೆಯ ಪ್ರಾಂತ್ಯಾಧಿಕಾರಿಣಿ ಸಿಸ್ಟರ್ ಮಾರಿಯೆಟ್ ಅಧ್ಯಕ್ಷತೆಯನ್ನು ವಹಿಸಿ ಮಾನವೀಯತೆಯ ಸೇವೆ ಸಮಾಜದ ಎಲ್ಲಾ ವರ್ಗದ ಜನರಿಗೆ ತಲುಪಬೇಕು ಎಂದು ಹೇಳಿದರು
ಕಾನ್ಸೆಟ್ಟಾ ಆಸ್ಪತ್ರೆಯ ಹಿರಿಯ ವೈದ್ಯೆ ಡಾ| ಸಿಸ್ಟರ್ ಲಿಲಿಯಾನ್, ಕಿನ್ನಿಗೋಳಿ ಮೇರಿವೆಲ್ ಸಂಸ್ಥೆಯ ಮುಖ್ಯಸ್ಥೆ ಸಿಸ್ಟರ್ ವಿತಾಲೀಸ್, ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಡಾ| ಸಂಜೀವ ರೈ ಡಾ| ಜಯಪ್ರಕಾಶ್ ಆಳ್ವ ಉಪಸ್ಥಿತರಿದ್ದರು.
ಡಾ| ಸಿಸ್ಟರ್ ಜೀವಿತಾ ಸ್ವಾಗತಿಸಿ ಸಿಸ್ಟರ್ ಸೋಫಿಯಾ ಕಾರ್ಯಕ್ರಮ  ನಿರೂಪಿಸಿದರು.

 

 

Comments

comments

Leave a Reply

Read previous post:
ಕಡಂದಲೆ ವನಮಹೋತ್ಸವ ಕಾರ್ಯಕ್ರಮ

ಕಡಂದಲೆ: ಜೆ.ಸಿ.ಸ್ ಮುಂಡ್ಕೂರ್ ಭಾರ್ಗವ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಪುತ್ತಿಗೆ ವಲಯ ಮತ್ತು ಸುಬ್ರಮಣ್ಯ ಸ್ವಾಮಿ ಪ್ರೌಢಶಾಲಾ ಕಡಂದಲೆ ನೇತೃತ್ವದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು....

Close