ಹಳೆಯಂಗಡಿ ಗ್ರಾಮ ಪಂಚಾಯತ್‌ನಲ್ಲಿ ಸಕಾಲ ಜಾಗೃತಿ ನಾಟಕ

Photo by Mithuna Kodethoor

ಹಳೆಯಂಗಡಿ : ದಕ್ಷಿಣ ಕನ್ನಡ ಜಿಲ್ಲಾ ವಾರ್ತಾ ಇಲಾಖೆಯ ಆಶ್ರಯದಲ್ಲಿ ಜಿಲ್ಲೆಯಾದ್ಯಂತ ನಡೆದ ಸಕಾಲ ಕಾಯ್ದೆಯ ಜಾಗೃತಿ ಅಭಿಯಾನ ಮಂಗಳವಾರ ಹಳೆಯಂಗಡಿ ಗ್ರಾಮ ಪಂಚಾಯತ್‌ನಲ್ಲಿ ಸಮಾರೋಪಗೊಂಡಿತು. ಹಳೆಯಂಗಡಿ ನಾರಾಯಣ ಸನಿಲ್ ಸರ್ಕಾರಿ ಫ್ರೌಢಶಾಲೆಯಲ್ಲಿ ನಡೆದ ಸಮಾರಂಭವನ್ನು ಹಳೆಯಂಗಡಿ ಗ್ರಾಮ ಪಂಚಾಯತ್‌ನ ಅಧ್ಯಕ್ಷ ಸಂತೋಷ್‌ಕುಮಾರ್ ಟಮ್ಕಿ ಬಾರಿಸುವ ಮೂಲಕ ಉದ್ಘಾಟಿಸಿದರು.
ಜಿಲ್ಲಾ ವಾರ್ತಾಧಿಕಾರಿ ರೋಹಿಣಿ, ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಖಾದರ್, ವಸಂತ ಬೆರ್ನಾರ್ಡ್, ಅಭಿವೃದ್ದಿ ಅಧಿಕಾರಿ ಲೋಕನಾಥ್, ಸಂಸಾರ ಕಲಾವಿದರಾದ ನಿರ್ದೇಶಕ ಮೌನೇಶ್ ವಿಶ್ವಕರ್ಮ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ಸಂಸಾರ ತಂಡದ ಕಲಾವಿದರಿಂದ ಸಕಾಲ ಕಾಯ್ದೆಯ ಕುರಿತಾದ ಸಕಾಲ ಜಾಗೃತಿ ನಾಟಕವನ್ನು ಪ್ರದರ್ಶಿಸಿದರು. ಜಿಲ್ಲೆಯಾದ್ಯಂತ ತಂಡವು ಸಂಚರಿಸಿ ಒಟ್ಟು 54 ಬಾರಿ ಸಕಾಲ ನಾಟಕವನ್ನು ಪ್ರದರ್ಶಿಸಿದೆ.

Comments

comments

Leave a Reply

Read previous post:
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಮಳೆಗಾಗಿ ಪ್ರಾರ್ಥನೆ

Photos by Mithuna Kodethoor ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಮಳೆಗಾಗಿ ಪ್ರಾರ್ಥಿಸಿ ಗುರುವಾರ ಪರ್ಜನ್ಯ ಜಪ, ಪ್ರಾರ್ಥನೆ, ಹೋಮ ನಡೆಯಿತು. ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ...

Close