ಕಿನ್ನಿಗೋಳಿ ಶ್ರೀ ಮದ್ಗುರು ರಾಘವೇಂದ್ರ ಸ್ವಾಮಿ ಸನ್ನಿಧಿಯಲ್ಲಿ ಶ್ರೀ ಗುರುಗಳ ಆರಾಧನಾ ಮಹೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ಯುಗಪುರುಷ ವಲಯದ ಶ್ರೀ ಮದ್ಗುರು ರಾಘವೇಂದ್ರ ಸ್ವಾಮಿ ಸನ್ನಿಧಿಯಲ್ಲಿ ಶ್ರೀ ಗುರುಗಳ ಆರಾಧನಾ ಮಹೋತ್ಸವವು  ಆರಂಭಗೊಂಡಿತು. ಶುಕ್ರವಾರ ಜರಗಿದ ಧಾರ್ಮಿಕ ಸಭೆಯಲ್ಲಿ ಜ್ಯೋತಿಷಿ ಮೋಹನದಾಸ ಸುರತ್ಕಲ್‌ರವರು ಧಾರ್ಮಿಕ ಪ್ರವಚನ ನೀಡಿದರು. ಅಧ್ಯಕ್ಷತೆಯನ್ನು ಹರಿಕೃಷ್ಣ ಪುನರೂರುರವರು ವಹಿಸಿದ್ದು, ಕಟೀಲು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಯರಾಮ ಪೂಂಜ, ಐಕಳ ಮಹಾಬಲ ಶೆಟ್ಟಿ, ಪಿ.ಸತೀಶ್ ರಾವ್, ಬಾಲಕೃಷ್ಣ ಉಡುಪ, ಹಯಗ್ರೀವ ಉಪಾಧ್ಯಾಯ, ಅರ್ಚಕ ರಾಘವೇಂದ್ರ ಉಡುಪರವರು ಉಪಸ್ಥಿತರಿದ್ದರು. ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಸ್ವಾಗತಿಸಿ, ವಂದಿಸಿದರು.

Comments

comments

Leave a Reply

Read previous post:
ಏಳಿಂಜೆಯಲ್ಲಿ ಗಾಳಿ ಮಳೆಗೆ ಮನೆ, ಕೊಟ್ಟಿಗೆ ದ್ವಂಸ

ಏಳಿಂಜೆ: ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಏಳಿಂಜೆ ಗ್ರಾಮದ ಪಟ್ಟೆ ನಿರ‍್ಪಾರಿ ಯ ಹತ್ತಿರ ಕಳೆದ ಶುಕ್ರವಾರ ಬೆಳಿಗ್ಗೆನ ಜಾವ ಬಾರಿ ಗಾಳಿ ಮಳೆಗೆ ಸೆಬೆಸ್ತಿಯನ್ ಸಲ್ಡಾನರ...

Close