ಮುಲ್ಕಿ ಮೆಸ್ಕಾಂನ ಶಾಖೆಗೆ ವಿವಿಧ ಬೇಡಿಕೆಯ ಮನವಿ

Photo by Narendra Kerekadu

ಮುಲ್ಕಿ: ಕಳೆದ ಕೆಲವು ದಿನಗಳಿಂದ ಮುಲ್ಕಿ ಪರಿಸರದಲ್ಲಿ ವಿದ್ಯುತ್ ಅಡಚಣೆ ಉಂಟಾಗುತ್ತಿದ್ದು ಹಾಗೂ ಮೂಲ್ಕಿ ಮೆಸ್ಕಾಂನ ಶಾಖೆಯಲ್ಲಿ ಹೆಚ್ಚುವರಿ ಬಿಲ್ಲಿನ ಕೌಂಟರ್‌ನ್ನು ನಿರ್ಮಿಸಬೇಕು ಎಂದು ಮುಲ್ಕಿಯ ಬಿಜೆಪಿ ಶಕ್ತಿ ಕೇಂದ್ರ ವಿವಿಧ ಬೇಡಿಕೆಯ ಮನವಿಯನ್ನು ಶುಕ್ರವಾರ ಮೆಸ್ಕಾಂನ ಶಾಖಾಧಿಕಾರಿಗೆ ನೀಡಿದರು.
ಮುಲ್ಕಿ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಉಮೇಶ್ ಮಾನಂಪಾಡಿಯ ನೇತೃತ್ವದ ನಿಯೋಗ ಮನವಿ ಸಲ್ಲಿಸಿದ ನಂತರ ವಿವಿಧ ಸಮಸ್ಯೆಯ ಬಗ್ಗೆ ಚರ್ಚಿಸಲಾಯಿತು.   ಮುಲ್ಕಿಯಲ್ಲಿ ಅನಿಯಮಿತವಾಗಿ ಮುನ್ಸೂಚನೆ ಇಲ್ಲದೇ ವಿದ್ಯುತ್  ಕಡಿತ ಮಾಡುವ ಇಲಾಖೆಯ ಕಾರ್ಯ ವೈಖರಿ ಸರಿಯಲ್ಲ, ಮಳೆಗಾಲದಲ್ಲಿ ಸಣ್ಣದಾಗಿ ಗಾಳಿ ಬಂದರು ವಿದ್ಯುತ್ ನಿಲುಗಡೆ ಆಗುತ್ತದೆ ಎಂದು ಸಮಸ್ಯೆಯ ಬಗ್ಗೆ ಮಾಹಿತಿ ನೀಡಿದ ನಿಯೋಗ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಮುಲ್ಕಿಯ ಶಾಖೆಯಲ್ಲಿ ಈಗಿರುವ ಕೌಂಟರ್‌ನಲ್ಲಿ ಬಿಲ್ಲನ್ನು ಕಟ್ಟಲು ಸಾಲುಗಟ್ಟಲೆ ಜನರು ಮಳೆ ಗಾಳಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇದೆ ಇದನ್ನು ಪರಿಹರಿಸಲು ಹೆಚ್ಚುವರಿ ಕೌಂಟರ್‌ನ್ನು ನಿರ್ಮಿಸಬೇಕು ಎಂದು ಬೇಡಿಕೆ ಸಲ್ಲಿಸಿದರು. ವಿದ್ಯುತ್ ತೆಗೆಯುವ ಮುನ್ಸೂಚನೆಯನ್ನು ಮಾಧ್ಯಮದ ಮೂಲಕ ನೀಡಿದಲ್ಲಿ ಅನುಕೂಲ ಆಗುತ್ತದೆ ಎಂದು ಸಲಹೆಯನ್ನು ನಿಯೋಗವು ನೀಡಿದೆ.
ಈ ಬಗ್ಗೆ ಕಾರ್ಯನಿರ್ವಹಣಾ ಅಧಿಕಾರಿ ಪ್ರಶಾಂತ್ ಪುತ್ರನ್ ಪ್ರತಿಕ್ರಿಯಿಸಿ ಮುಲ್ಕಿಯ ಪವರ್ ಹೌಸ್‌ನಲ್ಲಿ ಇನ್ಸುಲೇಟರ್‌ನ ಸಮಸ್ಯೆಯಿಂದ ಈ ಅನಿಯಮಿತವಾಗಿ ವಿದ್ಯುತ್ ಕಡಿತವಾಗುತ್ತಿದ್ದು ತಾಂತ್ರಿಕ ದೋಷವು ಇಂದೆರಡು ದಿನದಲ್ಲಿ ಸರಿಯಾಗಬಹುದು ಹಾಗೂ ಹೆಚ್ಚುವರಿ ಕೌಂಟರ್‌ಗೆ ಕೂಡಲೆ ಕ್ರಮ ಕೈಗೊಳ್ಳಲಾಗುವುದು, ಸಿಬ್ಬಂದಿಗಳ ಕೊರತೆಯು ಇಲಾಖೆಯಲ್ಲಿದೆ ಎಂದರು.
ಮುಲ್ಕಿ ಪಟ್ಟಣ ಪಂಚಾಯತ್ ಸದಸ್ಯರಾದ ಸತೀಶ್ ಅಂಚನ್, ಸುನಿಲ್ ಆಳ್ವಾ, ಪುರುಷೋತ್ತಮ ರಾವ್, ವಿಠಲ, ಬಿಜೆಪಿಯ ಶೈಲೇಶ್, ಅಶೋಕ್ ಚಿತ್ರಾಪು, ಕಿಶೋರ್ ಶೆಟ್ಟಿ ಬಪ್ಪನಾಡು, ಪ್ರಭೋದ್ ಕುಡ್ವಾ, ವಿಜಯ ಕೋಟ್ಯಾನ್ ಮಾನಂಪಾಡಿ ಇನ್ನಿತರರು ಇದ್ದರು.

Comments

comments

Leave a Reply

Read previous post:
ಕಿನ್ನಿಗೋಳಿ ಶ್ರೀ ಮದ್ಗುರು ರಾಘವೇಂದ್ರ ಸ್ವಾಮಿ ಸನ್ನಿಧಿಯಲ್ಲಿ ಶ್ರೀ ಗುರುಗಳ ಆರಾಧನಾ ಮಹೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ಯುಗಪುರುಷ ವಲಯದ ಶ್ರೀ ಮದ್ಗುರು ರಾಘವೇಂದ್ರ ಸ್ವಾಮಿ ಸನ್ನಿಧಿಯಲ್ಲಿ ಶ್ರೀ ಗುರುಗಳ ಆರಾಧನಾ ಮಹೋತ್ಸವವು  ಆರಂಭಗೊಂಡಿತು. ಶುಕ್ರವಾರ ಜರಗಿದ ಧಾರ್ಮಿಕ ಸಭೆಯಲ್ಲಿ ಜ್ಯೋತಿಷಿ ಮೋಹನದಾಸ...

Close