ಮುಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿ ಪ್ರಧಾನ, ಪ್ರತಿಭಾ ಪುರಸ್ಕಾರ

Photo by Bhagyavan Sanil

ಮುಲ್ಕಿ: ಸಮಾಜದ ಶ್ರೇಯೋಭಿವೃದ್ಧಿಯಲ್ಲಿ ಮಹತ್ತರವಾದ ಕೊಡುಗೆ ನೀಡಿದ ಮುಲ್ಕಿ ಸುಂದರರಾಮ ಶೆಟ್ಟಿಯವರ ಕನಸಿನಂತೆ ಸಮಾಜದ ವಿದ್ಯಾರ್ಥಿಗಳು ಐಎಎಸ್, ಐಪಿಎಸ್ ಸೇರಿದಂತೆ ಉನ್ನತ ಶಿಕ್ಷಣಗಳಿಸುವ ಗುರಿಹೊಂದುವುದು ಸಮಾಜದ ಏಳಿಗೆಗೆ ಬಹಳ ಅಗತ್ಯ ಎಂದು ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಹೇಳಿದರು.
ಭಾನುವಾರ ಮುಲ್ಕಿ ಬಳಿಯ ಪುನರೂರು ನಾಗವೀಣಾ ಸಭಾಗೃಹದಲ್ಲಿ ಮುಲ್ಕಿ ಬಂಟರ ಸಂಘದ ವತಿಯಿಂದ ಪ್ರತಿಷ್ಠಿತ ಮುಲ್ಕಿ ಸಂದರರಾಮ ಶೆಟ್ಟಿ ಪ್ರಶಸ್ತಿ ಪ್ರಧಾನ, ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮ ಉದ್ಘಾಟಿಸಿದ ಯು.ಎ.ಇ ಅನಿವಾಸಿ ಉದ್ಯಮಿ ಕಳತ್ತೂರು ಶೇಖರ ಬಾಬು ಶೆಟ್ಟಿಯವರು ಮಾತನಾಡಿ, ಸಂಘಟಿತರಾದಲ್ಲಿ ಮಾತ್ರ ಸಮಾಜದ ಅಭ್ಯುದಯ ಸಾಧ್ಯವಾಗಿದ್ದು ಮಕ್ಕಳಿಗೆ ಅವರ ಆಯ್ಕೆಯಂತೆ ಉನ್ನತ ಶಿಕ್ಷಣ ನೀಡುವ ಮೂಲಕ ಸಮಾಜದಲ್ಲಿ ಧೀಮಂತ ವ್ಯಕ್ತಿಯನ್ನಾಗಿಸಲು ಶ್ರಮಪಡಬೇಕು ಎಂದರು.
ಈ ಸಂದರ್ಭ ಹಿರಿಯ ಯಕ್ಷಗಾನ ಕಲಾವಿದ ಮುಂಡ್ಕೂರು ಜಯರಾಮ ಶೆಟ್ಟಿ, ಅಂತರಾಷ್ಟ್ರೀಯ ಪೈಲೆಟ್ ಕುಬೆವೂರು ದೊಡ್ಡಮನೆ ಅನೂಪಾ ಶೆಟ್ಟಿ, ರಾಜ್ಯ ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿ ಅಕ್ಷಯರಾಜ್ ಶೆಟ್ಟಿ, ರಾಷ್ಟ್ರೀಯ ಕಬ್ಬಡ್ಡಿ ಕ್ರೀಡಾಪಟು ಇಂಚರ ಶೆಟ್ಟಿ ಯವರನ್ನು ಸನ್ಮಾನಿಸಲಾಯಿತು.
ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕಗಳಿಸಿದ ಅಭಿಶೇಕ್ ಆಳ್ವಾ, ಸಿಂಚನಾ, ಸುಜನ್, ನಿಶಿತಾ, ಸುಪ್ರಿತಾ, ದಿಷಾ, ರಿತೇಶ್‌ರವರನ್ನು ಗೌರವಿಸಲಾಯಿತು. ಸುಮಾರು 2ಲಕ್ಷ ಮೊತ್ತದ ವಿದ್ಯಾರ್ಥಿ ವೇತನವನ್ನು 159ವಿದ್ಯಾರ್ಥಿಗಳಿಗೆ ನೀಡಲಾಯಿತು.
ಮುಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿಯನ್ನು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮಾಜಿ ಶಾಸಕ ಸಂಜೀವನಾಥ ಐಕಳರವರ ಅನಾರೋಗ್ಯದ ನಿಮಿತ್ತ ಅವರ ಪುತ್ರ ವಿನೋಭನಾಥ ಐಕಳ ಸ್ವೀಕರಿಸಿದರು.
ಅತಿಥಿಗಳಾಗಿ ಮುಂಬೈ ಮೀರಾ-ದಹನು ಬಂಟ್ಸ್ ಸಂಘದ ಗೌರವಾಧ್ಯಕ್ಷರಾದ ವಿರಾರ್ ಶಂಕರ ಶೆಟ್ಟಿ, ಕುಶಲ ಶೆಟ್ಟಿ,ಚಾಂದನಿ,ರೋಷನಿ, ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಶಶಿಕಾಂತ ಶೆಟ್ಟಿ, ಮುಲ್ಕಿ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಕುಮಾರ್ ಹೆಗ್ಡೆ,ಉಪಾಧ್ಯಕ್ಷ ಪುರುಷೋತ್ತಮ ಶೆಟ್ಟಿ, ಕಾರ್ಯದರ್ಶಿ ರವಿರಾಜ ಶೆಟ್ಟಿ, ಕೋಶಾಧಿಕಾರಿ ಕೆ.ಸುಂದರ ಶೆಟ್ಟಿ, ಜೊತೆ ಕಾರ್ಯದರ್ಶಿ ಅಶೋಕ್ ಕುಮಾರ್ ಶೆಟ್ಟಿ, ಮುಲ್ಕಿ ಸುಂದರರಾಮ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಮನೋಹರ ಶೆಟ್ಟಿ, ರಾಜೇಶ್ ಶೆಟ್ಟಿ ಮಾನಂಪಾಡಿ, ಮುರಳೀಧರ ಭಂಡಾರಿ, ಶಮೀನಾ ಆಳ್ವಾ, ಶರತ್ ಶೆಟ್ಟಿ ವೇದಿಕೆಯಲ್ಲಿದ್ದರು.
ಸಂತೋಷ್ ಕುಮಾರ್ ಹೆಗ್ಡೆ ಸ್ವಾಗತಿಸಿದರು. ಶಿಕ್ಷಕ ಸಾಯೀನಾಥ ಶೆಟ್ಟಿ ಮತ್ತು ಎಡ್ಮೆಮಾರ್ ನವೀನ್ ಶೆಟ್ಟಿ ನಿರೂಪಿಸಿದರು. ಅಶೋಕ್ ಕುಮಾರ್ ಶೆಟ್ಟಿ ವಂದಿಸಿದರು.

Comments

comments

Leave a Reply

Read previous post:
ಮುಲ್ಕಿ ರಕ್ಷಾಬಂಧನ

Photo by Bhagyavan Sanil ಮುಲ್ಕಿ : ಪರಸ್ಪರ ಭ್ರಾತೃತ್ವ ಕಲ್ಪನೆಯಿಂದ ಸಂಘಟಿತರಾಗಿ ಸಮಾಜದ ಉನ್ನತಿಯ ಹರಿಕಾರರಾಗಿ ಬೆಳೆಯಲು ರಕ್ಷಾಬಂಧನ ಕಾರ್ಯಕ್ರಮವನ್ನು ರಾಷ್ಟ್ರೀಯ ಸ್ವಯಂಸೇವಕರ ಸಂಘ ನಡೆಸುತ್ತಿದೆ ಎಂದು...

Close