ಮುಲ್ಕಿಯಲ್ಲಿ ಗ್ರಾಮೀಣ ಪತ್ರಕರ್ತರ ಭಾದ್ಯತೆಗಳ ಬಗ್ಗೆ ಮಾಹಿತಿ

Photo by Bhagyavan Sanil

ಮುಲ್ಕಿ: ಪತ್ರಕರ್ತರು ಸಂಘಟಿತರಾಗಿದ್ದು ಸಮಾಜ ಮುಖಿಯಾಗಿ ಸೇವೆಯನ್ನು ನೀಡಬೇಕು ಎಂದು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪಿಬಿ.ಹರೀಶ್ ರೈ ಹೇಳಿದರು.
ಅವರು ಭಾನುವಾರ ಮುಲ್ಕಿ ಪುನರೂರು ಟೂರಿಸ್ಟ್ ಹೊಂ ಸಭಾಂಗಣದಲ್ಲಿ ಗ್ರಾಮೀಣ ವಲಯದ ಪತ್ರಕರ್ತರ ಭಾದ್ಯತೆಗಳು ಎಂಬ ವಿಷಯವಾಗಿ ಮಾಹಿತಿ ನೀಡಿದರು.
ಗ್ರಾಮೀಣ ವಲಯದ ಪತ್ರಕರ್ತರಲ್ಲಿ ಹೆಚ್ಚಿನವರು ಅರೆಕಾಲಿಕ ವೃತ್ತಿಯನ್ನು ನಿರ್ವಹಿಸುತ್ತಿದ್ದು ತಮ್ಮ ವ್ಯಾಪ್ತಿಯ ಮಿತಿಯಲ್ಲಿ ಸೇವೆಯನ್ನು ನೀಡುವುದು ಬಹು ಸೂಕ್ತ ಎಂದ ಅವರು ಗ್ರಾಮೀಣ ವಲಯದ ಸಮಸ್ಯೆಗಳಿಗೆ ಪತ್ರಕರ್ತರು ಸ್ಪಂದಿಸಿ ಆಡಳಿತ ಮತ್ತು ಜನಸಾಮಾನ್ಯರ ನಡುವಿನ ಸೇತುವೆಯಾಗಬೇಕು ಎಂದ ಅವರು ಮುಂದಿನ ದಿನಗಳಲ್ಲಿ ದ.ಕ.ಜಿಲ್ಲಾ ಪರ್ತಕರ್ತರ ಸಂಘದ ವತಿಯಿಂದ ಗ್ರಾಮೀಣ ವಲಯದ ಪತ್ರಕರ್ತರ ಸಮಾವೇಶ ನಡೆಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ವಲಯ ಪತ್ರಕರ್ತರ ಸಂಘದ ಅಧ್ಯಕ್ಷ ರಾಮಚಂದ್ರ ಆಚಾರ್ಯ ವಹಿಸಿದ್ದರು. ಕಾರ್ಯದರ್ಶಿ ಹಮೀದ್ ಪಡುಬಿದ್ರಿ ವೇದಿಕೆಯಲ್ಲಿದ್ದರು. ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಮುಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿ ಪ್ರಧಾನ, ಪ್ರತಿಭಾ ಪುರಸ್ಕಾರ

Photo by Bhagyavan Sanil ಮುಲ್ಕಿ: ಸಮಾಜದ ಶ್ರೇಯೋಭಿವೃದ್ಧಿಯಲ್ಲಿ ಮಹತ್ತರವಾದ ಕೊಡುಗೆ ನೀಡಿದ ಮುಲ್ಕಿ ಸುಂದರರಾಮ ಶೆಟ್ಟಿಯವರ ಕನಸಿನಂತೆ ಸಮಾಜದ ವಿದ್ಯಾರ್ಥಿಗಳು ಐಎಎಸ್, ಐಪಿಎಸ್ ಸೇರಿದಂತೆ ಉನ್ನತ ಶಿಕ್ಷಣಗಳಿಸುವ...

Close