ಮುಲ್ಕಿ ರಕ್ಷಾಬಂಧನ

Photo by Bhagyavan Sanil

ಮುಲ್ಕಿ : ಪರಸ್ಪರ ಭ್ರಾತೃತ್ವ ಕಲ್ಪನೆಯಿಂದ ಸಂಘಟಿತರಾಗಿ ಸಮಾಜದ ಉನ್ನತಿಯ ಹರಿಕಾರರಾಗಿ ಬೆಳೆಯಲು ರಕ್ಷಾಬಂಧನ ಕಾರ್ಯಕ್ರಮವನ್ನು ರಾಷ್ಟ್ರೀಯ ಸ್ವಯಂಸೇವಕರ ಸಂಘ ನಡೆಸುತ್ತಿದೆ ಎಂದು ಮಂಗಳೂರು ಜಿಲ್ಲಾ ಗ್ರಾಮಾಂತರ ಕಾರ್ಯವಾಹಕರಾದ ಜನಾರ್ದನ ಹೇಳಿದರು.
ಭಾನುವಾರ ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ರಾಷ್ಟ್ರೀಯ ಸ್ವಯಂಸೇವಕರ ಸಂಘ ಮುಲ್ಕಿ ಶಾಖೆಯ ವತಿಯಿಂದ ಜರುಗಿದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಸಂದೇಶ ನೀಡಿದರು.
ಜಾತಿ ಅಂತಸ್ತು ಎಂದಿಗೂ ಮುಖ್ಯವಲ್ಲ ಎಲ್ಲರೊಡನೆ ಸಮಾನವಾಗಿ ಬಾಳುವುದರ ಜೊತೆಗೆ ಪರರ ಸಂಕಷ್ಟಕ್ಕೆ ಶ್ರೀಘ್ರ ಸ್ಪಂದಿಸುವುದು ಮಾನವತೆಯಾಗಿದೆ ಎಂದ ಅವರು ಸಂಘವು ಈ ಬಗ್ಗೆ ಯುವ ಪೀಳಿಗೆಗೆ ತರಬೇತಿ ನೀಡುವ ಮೂಲಕ ದೇಶಭಕ್ತ ಸದೃಢ ಸಮಾಜ ನಿರ್ಮಾಣಕ್ಕೆ ಕಾರ್ಯೋನ್ಮುಖವಾಗಿದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಕೆ.ರಾಘು ಸುವರ್ಣ ವಹಿಸಿದ್ದರು.

Comments

comments

Leave a Reply

Read previous post:
ಪೋಂಪೈ ಕಾಲೇಜಿನಲ್ಲಿ ’ಆಟಿಡೊಂಜಿ ದಿನ’ ಕಾರ್ಯಕ್ರಮ

ಕಿನ್ನಿಗೋಳಿ: ಐಕಳದ ಪೋಂಪೈ ಪದವಿ ಕಾಲೇಜಿನಲ್ಲಿ ಮಾನವಿಕ ವಿಭಾಗದ ವತಿಯಿಂದ ’ಆಟಿಡೊಂಜಿ ದಿನ’ ಕಾರ್ಯಕ್ರಮವು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪ್ಯಾಟ್ರಿಕ್ ಮೆನೇಜಸ್ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಮುಖ್ಯ...

Close