ಎಕ್ಸಪ್ರೆಸ್ ಬಸ್ಸು ಮತ್ತು ಟಾಟಾ ಏಸ್ ವಾಹನ ಮುಖಾಮುಖಿ ಡಿಕ್ಕಿ

Photo by Bhagyavan Sanil

ಮುಲ್ಕಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಪಾವಂಜೆ ಜಂಕ್ಷನ್‌ನಲ್ಲಿ ಭಾನುವಾರ ಮುಂಜಾನೆ ಎಕ್ಸಪ್ರೆಸ್ ಬಸ್ಸು ಮತ್ತು ಟಾಟಾ ಏಸ್ ವಾಹನದ ಮುಖಾಮುಖಿ ಡಿಕ್ಕಿಯ ಪರಿಣಾಮ ಓರ್ವರು ಮೃತಪಟ್ಟು ಇನ್ನೊಬ್ಬ ತೀವ್ರ ಗಾಯಗೊಂಡಿದ್ದಾರೆ.
ಮೃತಪಟ್ಟವನನ್ನು ಏಸ್ ವಾಹನ ಚಾಲಕ ರೈಮಂಡ್ ಡಿಸೋಜಾ ಎಂದು ಗುರುತಿಸಲಾಗಿದ್ದು ಸಹವರ್ತಿ ವಿಲ್‌ಪ್ರೆಡ್‌ಗೆ ತಲೆ ಮತ್ತು ಸೊಂಟಕ್ಕೆ ತೀವ್ರ ಮೂಳೆಮುರಿತ ಗಾಯಗಳೊಂದಿಗೆ ಮುಕ್ಕ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ
ಮಂಗಳೂರಿನಿಂದ ಮಣಿಪಾಲಕ್ಕೆ ಪ್ರಯಾಣಿಸುತ್ತಿದ್ದ ಎಕ್ಸ್‌ಪ್ರೆಸ್ ಬಸ್ಸು ಸುರತ್ಕಲ್‌ಗೆ ಪ್ರಾಯಾಣಿಸುತ್ತಿದ್ದ ಟಾಟಾ ಏಸ್ ಗಾಡಿಗೆ ಡಿಕ್ಕಿಹೊಡೆದಿದ್ದು ತೀವ್ರ ಗಾಯಗೊಂಡಿರುವ ಚಾಲಕ ರೈಮಂಡ್ ಡಿಸೋಜಾರವರನ್ನು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
ಮೃತ ರೈಮಂಡ್ ಪ್ರಗತಿಪರ ಕೃಷಿರಾಗಿದ್ದು ಮಲ್ಲಿಗೆ,ಅಡಿಕೆ,ತೆಂಗುಕೃಷಿ,ಹಂದಿ ಸಾಕಣಿಕೆ ಮೂಲಕ ಶ್ರಮ ಜೀವಿಯಾಗಿ ಕುಟುಂಬ ಪೋಷಣೆ ನಡೆಸುತ್ತಿದ್ದರು ಒಂದು ಗಂಡು ಎರಡು ಪುಟ್ಟ ಹೆಣ್ಣು ಮಕ್ಕಳಿರುವ ಸಂಸಾರಕ್ಕೆ ರೈಮಂಡ್ ಅವರ ನಿಧನ ಆಘಾತನೀಡಿದೆ.

Comments

comments

Leave a Reply

Read previous post:
ಕೆ. ಚಂದ್ರಯ ಆಚಾರ್ಯ ನಿಧನ

ಕಿನ್ನಿಗೋಳಿ :  ನ್ಯೂ ಪ್ರಭಾತ್ ಜ್ಯುವೆಲ್ಲರ‍್ಸ್ ಮಾಲಕ ಕೆ. ಚಂದ್ರಯ ಆಚಾರ್ಯ(70ವ.) ಭಾನುವಾರ ನಿಧನರಾದರು. ಪತ್ನಿ, ಇಬ್ಬರು ಗಂಡು, ಓರ್ವ ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ವಿಶ್ವಬ್ರಾಹ್ಮಣ ಸಮಾಜ...

Close