ಪೋಂಪೈ ಕಾಲೇಜಿನಲ್ಲಿ ’ಆಟಿಡೊಂಜಿ ದಿನ’ ಕಾರ್ಯಕ್ರಮ

ಕಿನ್ನಿಗೋಳಿ: ಐಕಳದ ಪೋಂಪೈ ಪದವಿ ಕಾಲೇಜಿನಲ್ಲಿ ಮಾನವಿಕ ವಿಭಾಗದ ವತಿಯಿಂದ ’ಆಟಿಡೊಂಜಿ ದಿನ’ ಕಾರ್ಯಕ್ರಮವು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪ್ಯಾಟ್ರಿಕ್ ಮೆನೇಜಸ್ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಪತ್ರಕರ್ತ ಹಾಗೂ ನಾಟಕಕಾರ ಶರತ್ ಶೆಟ್ಟಿಯವರು ತುಳುನಾಡಿನ ಸಂಸ್ಕೃತಿ, ಪರಂಪರೆ ಹಾಗೂ ಆಟಿ ತಿಂಗಳ ಆಚರಣೆಗಳ ಕುರಿತು ಮಾತನಾಡಿದರು. ತೃತೀಯ ಬಿ. ಎ, ತರಗತಿಯ ವಿದ್ಯಾರ್ಥಿಗಳ ನಾಯಕತ್ವದಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ ಮಾನವಿಕ ಸಂಘದ ನಿರ್ದೇಶಕರಾದ ವಿಶ್ವಿತ್ ಶೆಟ್ಟಿ, ಮಾನವಿಕ ವಿಭಾಗದ ಪ್ರಾಧ್ಯಾಪಕರಾದ ಡಾ| ರಾಧಾಕೃಷ್ಣ ಭಟ್, ಪ್ರೊ. ಯೋಗೀಂದ್ರ ಬಿ, ಪ್ರೊ. ತೋಮಸ್ ಜಿ. ಎಮ್. , ಪ್ರೊ. ಪುರುಷೋತ್ತಮ ಕೆ. ವಿ. ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ತುಳು ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳೇ ತಮ್ಮ ತಮ್ಮ ಮನೆಗಳಲ್ಲಿ ತಯಾರಿಸಿದ ತುಳುನಾಡಿನ ವಿಶೇಷ ತಿಂಡಿ ತಿನಸುಗಳಿಂದ ಕೂಡಿದ ಬೋಜನಾ ಕೂಟವನ್ನು ಏರ್ಪಡಿಸಲಾಗಿತ್ತು.

Comments

comments

Leave a Reply

Read previous post:
ಎಕ್ಸಪ್ರೆಸ್ ಬಸ್ಸು ಮತ್ತು ಟಾಟಾ ಏಸ್ ವಾಹನ ಮುಖಾಮುಖಿ ಡಿಕ್ಕಿ

Photo by Bhagyavan Sanil ಮುಲ್ಕಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಪಾವಂಜೆ ಜಂಕ್ಷನ್‌ನಲ್ಲಿ ಭಾನುವಾರ ಮುಂಜಾನೆ ಎಕ್ಸಪ್ರೆಸ್ ಬಸ್ಸು ಮತ್ತು ಟಾಟಾ ಏಸ್ ವಾಹನದ ಮುಖಾಮುಖಿ ಡಿಕ್ಕಿಯ...

Close