ಕಿನ್ನಿಗೋಳಿ ರೋಟರಿಯಿಂದ “ಆಟಿದ ಪೊರ್ಲು”

ಕಿನ್ನಿಗೋಳಿ: “ಪೂರ್ವಜರ ಜೀವನ ಪದ್ಧತಿ ವೈಜ್ಞಾನಿಕವಾಗಿದ್ದು ಅವುಗಳನ್ನು ಆಚರಿಸಿಕೊಂಡು ಮುಂದಿನ ಪೀಳಿಗೆಗೆ ನಮ್ಮ ಜೀವನ ಪದ್ಧತಿಯನ್ನು ತಿಳಿಸಿಕೊಡುವ ಕೆಲಸ ಆಗಬೇಕಾಗಿದೆ”, ಎಂದು ಮಂಗಳೂರಿನ ಆಸರೆ ಸ್ಥಾಪಕಾಧ್ಯಕ್ಷೆ ಡಾ| ಆಶಾ ಜ್ಯೋತಿ ರೈ ಹೇಳಿದರು. ಅವರು ಸೋಮವಾರ ಸಹಕಾರ ಸೌದದಲ್ಲಿ ಕಿನ್ನಿಗೋಳಿ ರೋಟರಿ , ಇನ್ನರ್ ವೀಲ್ ಹಾಗೂ ರೋಟರಾಕ್ಟ್ ಜಂಟೀ ಆಶ್ರಯದಲ್ಲಿ ನಡೆದ “ಆಟಿದ ಪೊರ್ಲು” ಮತ್ತು “ರಕ್ಷಾ ಬಂಧನ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ರೋಟರಿಯ ನಿಕಟ ಪೂರ್ವ ಅಧ್ಯಕ್ಷ ಜಯರಾಮ ಪೂಂಜಾ, ಇನ್ನರ್ ವೀಲ್ ಅಧ್ಯಕ್ಷೆ ಮಮತಾ ಶರತ್ ಶೆಟ್ಟಿ, ರೋಟರಾಕ್ಟ್ ಅಧ್ಯಕ್ಷ ರಾಜೇಶ್ ಕೆಂಚನಕೆರೆ, ರೋಟರಿ ಕಾರ್ಯದರ್ಶಿ ಯಶವಂತ, ಮೆನ್ನಬೆಟ್ಟು ಪಂಚಾಯತ್ ನ ಮಾಜಿ ಅಧ್ಯಕ್ಷೆ ಸಾವಿತ್ರಿ ಶೆಟ್ಟಿ, ಶಾರದ ನಾಯರ್, ಮತ್ತಿತರರಿದ್ದರು.

Comments

comments

Leave a Reply

Read previous post:
ಕಿನ್ನಿಗೋಳಿಯಲ್ಲಿ ಯಕ್ಷಾಷ್ಟಕ ತಾಳಮದ್ದಲೆ

ಕಿನ್ನಿಗೋಳಿ : ಕಿನ್ನಿಗೋಳಿಯ ಯಕ್ಷಲಹರಿ ಸಂಸ್ಥೆ ತನ್ನ ಇಪ್ಪತ್ತೆರಡನೆಯ ವಾರ್ಷಿಕೋತ್ಸವದ ಅಂಗವಾಗಿ ಯುಗಪುರುಷ ಸಂಸ್ತೆಯ ಸಹಯೋಗದೊಂದಿಗೆ ಎಂಟುದಿನಗಳ ಸರಣಿ ತಾಳಮದ್ದಲೆ ಯಕ್ಷಾಷ್ಟಕವನ್ನು ಕರ್ಣಾಟಕ ಬ್ಯಾಂಕ್ ಪ್ರ್ರಾಯೋಜಕತ್ವದಲ್ಲಿ ನಡೆಸಲಿದೆ. ದಿನಾಂಕ...

Close