ಕಿನ್ನಿಗೋಳಿಯಲ್ಲಿ ಯಕ್ಷಾಷ್ಟಕ ತಾಳಮದ್ದಲೆ

ಕಿನ್ನಿಗೋಳಿ : ಕಿನ್ನಿಗೋಳಿಯ ಯಕ್ಷಲಹರಿ ಸಂಸ್ಥೆ ತನ್ನ ಇಪ್ಪತ್ತೆರಡನೆಯ ವಾರ್ಷಿಕೋತ್ಸವದ ಅಂಗವಾಗಿ ಯುಗಪುರುಷ ಸಂಸ್ತೆಯ ಸಹಯೋಗದೊಂದಿಗೆ ಎಂಟುದಿನಗಳ ಸರಣಿ ತಾಳಮದ್ದಲೆ ಯಕ್ಷಾಷ್ಟಕವನ್ನು ಕರ್ಣಾಟಕ ಬ್ಯಾಂಕ್ ಪ್ರ್ರಾಯೋಜಕತ್ವದಲ್ಲಿ ನಡೆಸಲಿದೆ. ದಿನಾಂಕ 11.08.2012 ರಿಂದ 18.08.2012ವರೆಗೆ ಯುಗಪುರುಷ ಸಭಾಭವನದಲ್ಲಿ ಭಕ್ತಿರೇವಗರೀಯಸೀ ಎಂಬ ಈ ಸರಣಿ ನವವಿಧ ಭಕ್ತಿಯ ಸಂಕೇತವಾಗಿ ಜನಮೇಜಯ (ಶ್ರವಣ) ರುಗ್ಮಾಂಗದ (ಕೀರ್ತನ) ಚಂದ್ರಹಾಸ (ಸ್ಮರಣ) ಭರತ (ಪಾದಸೇವನ) ಅಂಬರೀಶ (ಅರ್ಚನ) ವಿಭೀಷಣ (ವಂದನೆ) ಹನೂಮಂತ (ದಾಸ್ಯ) ಅರ್ಜುನ(ಸಖ್ಯ) ಮತ್ತು ಅತಿಕಾಯ ಭೀಷ್ಮಾರ್ಜುನ (ಆತ್ಮನಿವೇದನ) ಎಂಬ ಆಖ್ಯಾನಗಳನ್ನು ಒಳಗೊಂಡಿದೆ. ಪ್ರತೀದಿನ ಸಂಜೆ ಐದು ಗಂಟೆಯಿಂದ ರಾತ್ರಿ 8ರ ವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಕರಾವಳಿ-ಮಲೆನಾಡ ಪ್ರಾಂತ್ಯದ ನೂರಕ್ಕೂ ಹೆಚ್ಚು ಕಲಾವಿದರು ಭಾಗವಹಿಸಲಿದ್ದಾರೆ. ಅಪೂರ್ವ- ಶಿಸ್ತುಬದ್ಧ ಸಂಯೋಜನೆಯ ಈ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳ ಪ್ರೋತ್ಸಾಹವನ್ನು ನಿರೀಕ್ಷಿಸಿರುವುದಾಗಿ ಯಕ್ಷಲಹರಿಯ ಅಧ್ಯಕ್ಷ ಲ|. ಇ ಶ್ರೀನಿವಾಸ ಭಟ್, ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ಕಾರ್ಯದರ್ಶಿ ಶ್ರೀಧರ ಡಿ. ಎಸ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Comments

comments

Leave a Reply

Read previous post:
ಮುಲ್ಕಿಯಲ್ಲಿ ಗ್ರಾಮೀಣ ಪತ್ರಕರ್ತರ ಭಾದ್ಯತೆಗಳ ಬಗ್ಗೆ ಮಾಹಿತಿ

Photo by Bhagyavan Sanil ಮುಲ್ಕಿ: ಪತ್ರಕರ್ತರು ಸಂಘಟಿತರಾಗಿದ್ದು ಸಮಾಜ ಮುಖಿಯಾಗಿ ಸೇವೆಯನ್ನು ನೀಡಬೇಕು ಎಂದು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪಿಬಿ.ಹರೀಶ್ ರೈ ಹೇಳಿದರು....

Close