ಕಟೀಲು ಕಾಲೇಜು ವಿದ್ಯಾರ್ಥಿ ಸಂಘ, ವಾರ್ಷಿಕಾಂಕ ಉದ್ಘಾಟನೆ

Photo by Mithuna Kodethoor
ಕಟೀಲು : ಮನೆಯಲ್ಲಿ ಅಮ್ಮ ಎಲ್ಲ ಕೋಣೆಗಳನ್ನು ಗುಡಿಸಲು ಬಳಸಿ ಬಳಸಿ ಕಸಬರಿಕೆ ಸಣ್ಣದಾಗುತ್ತಿದ್ದಂತೆ ಅದನ್ನು ಬಚ್ಚಲು ಮನೆ ಗುಡಿಸಲು ಉಪಯೋಗಿಸುತ್ತಾಳೆ. ಅದು ಮತ್ತೂ ಸಣ್ಣದಾಗುತ್ತಿದ್ದಂತೆ ಮನೆ ಅಂಗಳ ಗುಡಿಸಲು ಬಳಕೆಯಾಗುತ್ತದೆ. ಅಂದರೆ ನಮ್ಮಲ್ಲಿ ಒಂದು ವಸ್ತು ಎಷ್ಟು ಸಾಧ್ಯವೋ ಅಷ್ಟು ಸದ್ಬಳಕೆಯಾಗುತ್ತದೆ. ಆದರೆ ವಿದೇಶೀ ಕಂಪನಿಗಳು ಬಳಸಿ ಎಸೆಯುವ ಕೊಳ್ಳಬಾಕ ಸಂಸ್ಕೃತಿಯನ್ನು ನಮ್ಮ ಮೇಲೆ ಯಾವ ಪರಿ ಹೇರುತ್ತಿದೆಯೆಂದರೆ ಹೊಸ ಮಾಡೆಲ್ ಮೊಬೈಲ್ ಬಂದ್ರೆ ಹಳೆಯದನ್ನು ಎಸೆಯುತ್ತೇವೆ. ಟಿವಿ, ಕಾರು ಹೀಗೆ ಎಲ್ಲವನ್ನೂ ಹೊಸ ಮಾಡೆಲ್ ಬಂದಾಕ್ಷಣ ಎಸೆಯುತ್ತೇವೆ. ಇದು ಯಾವ ಮಟ್ಟಕ್ಕೆ ಬೆಳೆದಿದೆ ಎಂದರೆ ಹೊಸ ಹುಡುಗಿ ಬಂದ ಕೂಡಲೇ ಹಳೆಯ ಹೆಂಡತಿಯನ್ನು ಮರೆತು ಬಿಡುವತನಕ ಮುಂದುವರಿದಿದೆ. ಬೆಂಗಳೂರಿನಲ್ಲಿ ತಿಂಗಳಿಗೆ ಸಾವಿರ ಸಂಖ್ಯೆಯಲ್ಲಿ ಡೈವೋರ್ಸ್ ನಡೆಯುತ್ತಿದೆ ಎಂದು ಹೇಳಿದ್ದು ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರದ ಸಂಚಾಲಕರಾದ ಪ್ರಭಾಕರ ಭಟ್.
ಅವರು ಮಂಗಳವಾರ ಕಟೀಲು ದೇವಳ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. ಕಡಿಮೆ ಬಟ್ಟೆ ತೊಟ್ಟವಳು ವಿಶ್ವಸುಂದರಿಯಾಗಿ ಆಯ್ಕೆಯಾಗುವುದು ಸರಿಯಲ್ಲ. ಮಹಿಳೆಗೆ ದೇವರ ಸ್ಥಾನ ಕೊಟ್ಟ ಪುಣ್ಯ ಭೂಮಿ ನಮ್ಮದು. ಸ್ವಾತಂತ್ರ್ಯವೆಂದರೆ ಸ್ವೇಚ್ಛೆಯಲ್ಲ. ಮಂಗಳೂರಿನ ಹೋಂಸ್ಟೇಯಲ್ಲಿನ ಹಲ್ಲೆಯನ್ನು ಸಮರ್ಥಿಸಲಾಗದು. ಆದರೆ ಹುಡುಗಿಯರ ಉಡುಗೆಗಳಲ್ಲಿನ ಜಿಪುಣತನ, ಸ್ವೇಚ್ಛಾಚಾರ ಇಂತಹ ದಾಳಿಗಳಿಗೆ ಕಾರಣವಾಗುತ್ತದೆ ಎಂದು ಪ್ರಭಾಕರ ಭಟ್ ಹೇಳಿದರು.
ಕಾಲೇಜಿನ ವಾರ್ಷಿಂಕಾಕ ಇಂಚರವನ್ನು ದೇಗುಲದ ಆಡಳಿತಾಧಿಕಾರಿ ಹರೀಶ್ ಕುಮಾರ್ ಬಿಡುಗಡೆಗೊಳಿಸಿದರು. ಮೊಕ್ತೇಸರ ವಾಸುದೇವ ಆಸ್ರಣ್ಣ, ಪ್ರಾಚಾರ್ಯ ಬಾಲಕೃಷ್ಣ ಶೆಟ್ಟಿ, ಉಪನ್ಯಾಸಕ ವಿಜಯ್ ವಿ, ವಿದ್ಯಾರ್ಥಿ ಸಂಘದ ಶಮಿತ್, ರವೀಂದ್ರ ಶೆಟ್ಟಿ, ಶುಶೀಲ್ ಕುಮಾರ್, ಪ್ರಿಯಾಂಕ ಮತ್ತಿತರರಿದ್ದರು.

Comments

comments

Leave a Reply

Read previous post:
ಕಟೀಲು ದೇಗುಲಕ್ಕೆ ಚಿತ್ರ ನಟಿ ಅಂಬಿಕಾ ಭೇಟಿ

Photo by Kateel Studio ಕಟೀಲು : ಖ್ಯಾತ ಚಿತ್ರ ನಟಿ ಅಂಬಿಕಾ ಕಟೀಲು ದೇಗುಲಕ್ಕೆ ಮಂಗಳವಾರ ಭೇಟಿ ನೀಡಿದ ಸಂದರ್ಭ ಅರ್ಚಕ ಅನಂತ ಆಸ್ರಣ್ಣ ಪ್ರಸಾದ ನೀಡಿದರು....

Close