ಮುಲ್ಕಿ ನಮ್ಮೂರ ಸಸ್ಯ ನಮಗಾಗಿ ಎಂಬ ಗಿಡ ಮೂಲಿಕೆ ಪ್ರದರ್ಶನ

Photo by Bhagyavan Sanil

ಮುಲ್ಕಿ : ಮನೆ ಪರಿಸರದಲ್ಲಿ ಕಂಡುಬರುವ ಗಿಡ ಮೂಲಿಕಾ ಸಸ್ಯಗಳಿಂದ ಹೆಚ್ಚಿನ ಅನಾರೋಗ್ಯ ಸಮಸ್ಯೆಗಳನ್ನು ಸುಲಭದಲ್ಲಿ ನಿಯಂತ್ರಿಸಬಹುದು ಎಂದು ಹಿರಿಯ ಆಯುರ್ವೇದ ತಜ್ಞ ಡಾ.ಎನ್.ಟಿ.ಅಂಚನ್ ಹೇಳಿದರು.

ಭಾನುವಾರ ಮುಲ್ಕಿ ಕಾರ್ನಾಡು ಸೈಂಟ್ ಜೋಸೆಫ್ ಹಾಲ್‌ನಲ್ಲಿ ಅಮಲೋದ್ಭವ ಮಾತಾ ಚರ್ಚಿನ ಗ್ಲೋರಿಯಾ ಮಹಿಳಾ ಸಂಘಟನೆಯ ಆಶ್ರಯದಲ್ಲಿ ನಮ್ಮೂರ ಸಸ್ಯ ನಮಗಾಗಿ ಎಂಬ ಗಿಡ ಮೂಲಿಕೆ ಪ್ರದರ್ಶನ ಮತ್ತು ಉಚಿತ ಮಾಹಿತಿ ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಮಲೋದ್ಭವ ಮಾತಾ ಚರ್ಚಿನ ಧರ್ಮಗುರುಗಳಾದ ಫಾ. ನೋರ್ಬಟ್ ಲೋಬೊ, ಪರಿಸರದ ಸಸ್ಯಗಳ ಬಗ್ಗೆ ತಿಳುವಳಿಕೆ ಗಳಿಸಿಕೊಂಡು ನಮ್ಮ ಮಕ್ಕಳಿಗೆ ಕಲಿಸಿಕೊಟ್ಟಲ್ಲಿ ಜ್ಷಾನ ವೃದ್ಧಿಯೊಂದಿಗೆ ತಕ್ಷಣದ ಬಳಕೆಗೆ ಸಹಕಾರಿಯಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ಲೋರಿಯಾ ಮಹಿಳಾ ಸಂಘಟನೆಯ ಅಧ್ಯಕ್ಷೆ ಪ್ರಮಿಳಾ ಸಲ್ಡಾನಾ ವಹಿಸಿದ್ದರು. ಸಹಾಯಕ ಧರ್ಮ ಗುರುಗಳಾದ ಪ್ರವೀಣ್ ಸಲ್ಡಾನಾ, ಚರ್ಚು ಪಾಲನಾ ಸಮಿತಿ ಉಪಾಧ್ಯಕ್ಷ ಜೋಯಲ್ ಹೆರಾಲ್ಡ್ ಡಿಸೋಜಾ, ಗ್ಲೋರಿಯಾ ಸಂಘಟನೆಯ ಸಚೇತಕಿ ಧರ್ಮ ಭಗಿನಿ ಜಯಾ ವೇದಿಕೆಯಲ್ಲಿದ್ದರು.
ಹೆಲೆನ್ ಸಿಕ್ವೇರಾ ಸ್ವಾಗತಿಸಿದರು. ಪ್ರಮಿಳಾ ನಿರೂಪಿಸಿದರು. ಗೋಡ್ವಿನ್ ಇಮಿಲ್ಡಾ ವಂದಿಸಿದರು.

Comments

comments

Leave a Reply

Read previous post:
ಕಟೀಲು ಕಾಲೇಜು ವಿದ್ಯಾರ್ಥಿ ಸಂಘ, ವಾರ್ಷಿಕಾಂಕ ಉದ್ಘಾಟನೆ

Photo by Mithuna Kodethoor ಕಟೀಲು : ಮನೆಯಲ್ಲಿ ಅಮ್ಮ ಎಲ್ಲ ಕೋಣೆಗಳನ್ನು ಗುಡಿಸಲು ಬಳಸಿ ಬಳಸಿ ಕಸಬರಿಕೆ ಸಣ್ಣದಾಗುತ್ತಿದ್ದಂತೆ ಅದನ್ನು ಬಚ್ಚಲು ಮನೆ ಗುಡಿಸಲು ಉಪಯೋಗಿಸುತ್ತಾಳೆ....

Close