ಸಂಜೀವನಾಥ ಐಕಳರವರಿಗೆ ಮುಲ್ಕಿ ಸಂದರರಾಮ ಶೆಟ್ಟಿ ಪ್ರಶಸ್ತಿ

Photo by Bhagyavan Sanil

ಮುಲ್ಕಿ : ಬಂಟರ ಸಂಘ ಮುಲ್ಕಿ  ಇವರ ವತಿಯಿಂದ ಪ್ರತಿಷ್ಠಿತ ಮುಲ್ಕಿ ಸಂದರರಾಮ ಶೆಟ್ಟಿ ಪ್ರಶಸ್ತಿಯನ್ನು  ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮಾಜಿ ಶಾಸಕ ಸಂಜೀವನಾಥ ಐಕಳರವರಿಗೆ  ಅವರ ಮನೆಯಲ್ಲಿ ನೀಡಲಾಯಿತು. ಈ ಸಂದರ್ಭ ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಶಶಿಕಾಂತ ಶೆಟ್ಟಿ, ಮೂಲ್ಕಿ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಕುಮಾರ್ ಹೆಗ್ಡೆ, ಉಪಾಧ್ಯಕ್ಷ ಪುರುಷೋತ್ತಮ ಶೆಟ್ಟಿ, ಕಾರ್ಯದರ್ಶಿ ರವಿರಾಜ ಶೆಟ್ಟಿ,ಕೋಶಾಧಿಕಾರಿ ಕೆ.ಸುಂದರ ಶೆಟ್ಟಿ, ಜೊತೆ ಕಾರ್ಯದರ್ಶಿ ಅಶೋಕ್ ಕುಮಾರ್ ಶೆಟ್ಟಿ, ಮುಲ್ಕಿಸುಂದರರಾಮ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಮನೋಹರ ಶೆಟ್ಟಿ, ರಾಜೇಶ್ ಶೆಟ್ಟಿ ಮಾನಂಪಾಡಿ, ಮುರಳೀಧರ ಭಂಡಾರಿ, ಶಮೀನಾ ಆಳ್ವಾ, ಶರತ್ ಶೆಟ್ಟಿ, ಐಕಳ ಜಯಪಾಲ ಶೆಟ್ಟಿ, ಎನ್.ಪಿ ಶೆಟ್ಟಿ, ವಿನೋಭನಾಥ ಐಕಳ ಮತ್ತಿತರರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಮುಲ್ಕಿ ನಮ್ಮೂರ ಸಸ್ಯ ನಮಗಾಗಿ ಎಂಬ ಗಿಡ ಮೂಲಿಕೆ ಪ್ರದರ್ಶನ

Photo by Bhagyavan Sanil ಮುಲ್ಕಿ : ಮನೆ ಪರಿಸರದಲ್ಲಿ ಕಂಡುಬರುವ ಗಿಡ ಮೂಲಿಕಾ ಸಸ್ಯಗಳಿಂದ ಹೆಚ್ಚಿನ ಅನಾರೋಗ್ಯ ಸಮಸ್ಯೆಗಳನ್ನು ಸುಲಭದಲ್ಲಿ ನಿಯಂತ್ರಿಸಬಹುದು ಎಂದು ಹಿರಿಯ ಆಯುರ್ವೇದ...

Close