ಕಿನ್ನಿಗೋಳಿ ಶ್ರೀ ರಾಮ ಮಂದಿರದಲ್ಲಿ ನಡೆದ ಪ್ರತಿಭಾ ಪುರಸ್ಕಾರ

Photo by Raghunath Kamath

ಕಿನ್ನಿಗೋಳಿ : ಇಂದಿನ ಶಿಕ್ಷಣದ ಬಗ್ಗೆ ನಿಗಾವಹಿಸಿ ಮಕ್ಕಳನ್ನು ಉತ್ತಮ ಪ್ರಜೆಯಾಗಿ ರೂಪಿಸುವುದು ಹೆತ್ತವರ ಆದ್ಯ ಕರ್ತವ್ಯ ಎಂದು ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಉಪ ಮಹಾ ಪ್ರಬಂದಕ ಕೆ. ಪುಂಡಲೀಕ ಮಲ್ಯ ಹೇಳಿದರು. ಅವರು ಕಿನ್ನಿಗೋಳಿ ಶ್ರೀ ರಾಮ ಮಂದಿರದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
ಶ್ರೀ ರಾಮ ಮಂದಿರದ ಅಧ್ಯಕ್ಷ ಅಚ್ಯುತ ಮಲ್ಯ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಮಂಗಳೂರಿನ ಅಂಬಾ ಪ್ರತಿಷ್ಠಾನದ ವತಿಯಿಂದ ಸವಲತ್ತು ವಿತರಿಸಲಾಯಿತು. ಮಂದಿರ ಸಮಿತಿಯ ರ‍ಾಧಾಕೃಷ್ಣ ನಾಯಕ್, ಗಣನಾಥ ಮಲ್ಯ, ಮಾತೃ ಮಂಡಳಿಯ ಭಾರತಿ ಶೆಣೈ, ವಿಜಯತ್ರಿ ಶೆಣೈ ಉಪಸ್ಥಿತರಿದ್ದರು. ಕಾರ್ಯದರ್ಶಿ ಸುರೇಂದ್ರನಾಥ ಶೆಣೈ ಕಾರ್ಯಕ್ರಮ ನಿರೂಪಿಸಿದರು

Comments

comments

Leave a Reply

Read previous post:
ಮುಲ್ಕಿ ಸರ್ಟಿಫಿಕೇಟ್ ಕೋರ್ಸು ಓನ್ ಟ್ಯಾಕ್ಸೇಶನ್

Photo by Bhagyavan Sanil ಮುಲ್ಕಿ: ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನವನ್ನು ಒದಗಿಸಿಕೊಡುವ ಉದ್ದೇಶದಿಂದ ಮುಲ್ಕಿಯ ವಿಜಯ ಕಾಲೇಜಿನಲ್ಲಿ ಸರ್ಟಿಫಿಕೇಟ್ ಕೋರ್ಸು ಓನ್ ಟ್ಯಾಕ್ಸೇಶನ್ ಕೋರ್ಸನ್ನು ಉದ್ಘಾಟಿಸಲಾಯಿತು.  ಉಡುಪಿಯ...

Close