ಮುಲ್ಕಿಯಲ್ಲಿ ತುಳು ಚಲನಚಿತ್ರ ಪದರ್ಶನ ಮಾಲಿಕೆ ಸಂವಾದ

Photo by Bhagyavan Mulki

ಮುಲ್ಕಿ : ರಂಗ ಭೂಮಿಯ ಪ್ರೇರಣೆ ಮತ್ತು ಕಲಾವಿದರ ಸೃಜನಶೀಲತೆ ತುಳು ಚಲನ ಚಿತ್ರಗಳು ಜನಮಾನಸ ಗೆಲ್ಲಲು ಸಹಕಾರಿಯಾಯಿತು ಎಂದು ರಂಗಕರ್ಮಿ ತಮ್ಮ ಲಕ್ಷ್ಮಣ ಹೇಳಿದರು.
ಮುಲ್ಕಿ ಬಿಲ್ಲವ ಸಂಘದಲ್ಲಿ ಯುವವಾಹಿನಿ ಮುಲ್ಕಿ ಘಟಕದ ದಶಮಾನೋತ್ಸವ ಪ್ರಯುಕ್ತ ನಡೆಯುತ್ತಿರುವ ತುಳು ಚಲನಚಿತ್ರ ಪದರ್ಶನ ಮಾಲಿಕೆಯ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂವಾದ ಕಾರ್ಯಕ್ರಮದಲ್ಲಿ ಸಭೆಯ ಪ್ರಶ್ನೆಗೆ ಉತ್ತರಿಸಿದ ನಿರ್ದೇಶಕ ಮಧು ಸುರತ್ಕಲ್, ರಂಗಭೂಮಿ ಕತೆಯನ್ನು ಸಮಯದ ಪರಿಮಿತಿಯಲ್ಲಿ ಮೂಡಿಸಿದರೆ ಚಿತ್ರೀಕರಣದಲ್ಲಿ ಈ ಸಮಸ್ಯೆ ಉದ್ಭವಿಸದು ಅದರೆ ಸಂಕಲನ ಸಮಯದ ಪರಿಮಿತಿಯಲ್ಲಿರುತ್ತದೆ ಎಂದರು.
ಈ ಸಂಧರ್ಭ ರಂಗ ಮತ್ತು ಚಿತ್ರ ಕಲಾವಿದರಾದ ಅರವಿಂದ ಬೋಳಾರ್, ಸರೋಜಿನಿ ಶೆಟ್ಟಿ, ಮುಲ್ಕಿ ನಗರ ಪಂಚಾಯತಿ ಅಧ್ಯಕ್ಷ ಶಶಿಕಾಂತ ಶೆಟ್ಟಿ, ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಕೆ.ರಾಘು ಸುವರ್ಣ, ಕಾರ್ನಾಡು ಯಂಗ್ ಸ್ಟಾರ‍್ಸ್ ಅಧ್ಯಕ್ಷ ಸುರೇಶ್ ಕುಮಾರ್, ಯುವವಾಹಿನಿ ಮುಲ್ಕಿ ಘಟಕದ ಅಧ್ಯಕ್ಷ ರಾಮಚಂದ್ರ ಟಿ.ಕೋಟ್ಯಾನ್, ಪೂರ್ವಾಧ್ಯಕ್ಷ ರಮೇಶ್ ಬಂಗೇರಾ ಮತ್ತಿತರರಿದ್ದರು.

Comments

comments

Leave a Reply

Read previous post:
ಸಂಜೀವನಾಥ ಐಕಳರವರಿಗೆ ಮುಲ್ಕಿ ಸಂದರರಾಮ ಶೆಟ್ಟಿ ಪ್ರಶಸ್ತಿ

Photo by Bhagyavan Sanil ಮುಲ್ಕಿ : ಬಂಟರ ಸಂಘ ಮುಲ್ಕಿ  ಇವರ ವತಿಯಿಂದ ಪ್ರತಿಷ್ಠಿತ ಮುಲ್ಕಿ ಸಂದರರಾಮ ಶೆಟ್ಟಿ ಪ್ರಶಸ್ತಿಯನ್ನು  ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮಾಜಿ ಶಾಸಕ ಸಂಜೀವನಾಥ...

Close